ಸರ್ಕಾರಿ ನೌಕರರ ಮೂಲ ವೇತನದಲ್ಲೇ ಹೆಚ್ಚಳ ! ಈ ದಿನದಿಂದ 9000 ರೂ.ಯಷ್ಟು ಹೆಚ್ಚಳವಾಗುವುದು ಸ್ಯಾಲರಿ

govt employees salary hike : ನಿಯಮಗಳ ಪ್ರಕಾರ ತುಟ್ಟಿಭತ್ಯೆ ಶೇ.50ಕ್ಕೆ ತಲುಪಿದ ತಕ್ಷಣ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ನಂತರ  ಶೇ.50ರ ಪ್ರಕಾರ ಮೂಲ ವೇತನಕ್ಕೆ ಅದನ್ನು ಸೇರಿಸಲಾಗುತ್ತದೆ.

Written by - Ranjitha R K | Last Updated : Jan 16, 2024, 10:09 AM IST
  • ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳ
  • ಹೊಸ ತುಟ್ಟಿಭತ್ಯೆ ಜನವರಿ 1 ರಿಂದ ಜಾರಿಗೆ
  • ಈ ಹೆಚ್ಚಳ ಮಾರ್ಚ್ ನಲ್ಲಿ ಘೋಷಣೆ ಸಾಧ್ಯತೆ
ಸರ್ಕಾರಿ ನೌಕರರ ಮೂಲ ವೇತನದಲ್ಲೇ ಹೆಚ್ಚಳ ! ಈ ದಿನದಿಂದ 9000 ರೂ.ಯಷ್ಟು ಹೆಚ್ಚಳವಾಗುವುದು ಸ್ಯಾಲರಿ  title=

ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಹೆಚ್ಚಿಸಲಾಗುವುದು. ಹೊಸ ತುಟ್ಟಿಭತ್ಯೆ  ಜನವರಿ ತಿಂಗಳಿನಿಂದಲೇ ಜಾರಿಗೆ ಬರಬೇಕು.  ಈ ಹೆಚ್ಚಳವನ್ನು ಸರ್ಕಾರ  ಮಾರ್ಚ್ ತಿಂಗಳಲ್ಲಿ ಘೋಷಣೆ ಮಾಡುವ ನಿರೀಕ್ಷೆಯಿದೆ.  ಸರ್ಕಾರವು ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸುತ್ತದೆ. ಪ್ರಸ್ತುತ ಸರ್ಕಾರದಿಂದ ನೌಕರರಿಗೆ ಶೇ.46 ತುಟ್ಟಿಭತ್ಯೆ ನೀಡಲಾಗುತ್ತಿದೆ.ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ತುಟ್ಟಿಭತ್ಯೆ ನಿರ್ಧಾರವಾಗುತ್ತದೆ. 

ಈ ದಿನಾಂಕದಿಂದ ಜಾರಿಗೆ ಬರುವ ನಿರೀಕ್ಷೆಯಿದೆ :
ಜುಲೈ ತಿಂಗಳಲ್ಲಿ  4% ದಷ್ಟು ತುಟ್ಟಿಭತ್ಯೆಯನ್ನು  ಹೆಚ್ಚಿಸಿರುವ ಹಿನ್ನೆಲೆಯಲ್ಲಿ ನೌಕರರ ಡಿಎ 46% ರಷ್ಟಾಗಿದೆ.  ಇದೀಗ ಈ ತಿಂಗಳಿಂದ ಅಂದರೆ ಜನವರಿಯಿಂದ ಮತ್ತೆ ಡಿಎ ಯನ್ನು ಪರಿಷ್ಕರಿಸಬೇಕಿದೆ. ಈ ಪರಿಷ್ಕರಣೆ ಜನವರಿ 1, 2024 ರಿಂದ ಅನ್ವಯವಾಗುತ್ತದೆ. ಇದೀಗ  ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದರೆ, ಉದ್ಯೋಗಿಗಳ ತುಟ್ಟಿಭತ್ಯೆ ಶೇಕಡಾ 50 ಕ್ಕೆ ಹೆಚ್ಚಾಗುತ್ತದೆ.

ಇದನ್ನೂ ಓದಿ :Union Budget 2024: ವೇತನ ಪಡೆಯುವ, ಪಡೆಯದೆ ಇರುವವರಿಗೊಂದು ಗುಡ್ ನ್ಯೂಸ್, ಮನೆ ಬಾಡಿಗೆ ಭತ್ಯೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ!

ಕನಿಷ್ಠ ವೇತನ 18000 ರೂ. ಆಧಾರದ ಮೇಲೆ ನೋಡುವುದಾದರೆ ಕೇಂದ್ರ ನೌಕರರು ಪ್ರತಿ ತಿಂಗಳು ಕನಿಷ್ಠ 9000 ರೂ.ಗಳ ತುಟ್ಟಿಭತ್ಯೆಯನ್ನು ಪಡೆಯುತ್ತಾರೆ. ವೇತನಕ್ಕೆ ಅನುಗುಣವಾಗಿ ತುಟ್ಟಿ ಭತ್ಯೆಯೂ ಹೆಚ್ಚಾಗಲಿದೆ.

ಡಿಎಯಲ್ಲಿ ಉತ್ತಮ ಹೆಚ್ಚಳ ನಿರೀಕ್ಷೆ :
ಈ ಬಾರಿಯೂ ಉದ್ಯೋಗಿಗಳ ಡಿಎಯಲ್ಲಿ ಉತ್ತಮ ಹೆಚ್ಚಳವಾಗುವ ಭರವಸೆ ಇದೆ. ತುಟ್ಟಿಭತ್ಯೆಯ ನಿಯಮವೆಂದರೆ ಅದು 50 ಪ್ರತಿಶತವನ್ನು ತಲುಪಿದಾಗ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಈ ಹಿಂದೆ 2016ರಲ್ಲಿ ಸರ್ಕಾರ 7ನೇ ವೇತನ ಆಯೋಗವನ್ನು ಜಾರಿಗೊಳಿಸಿದಾಗ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗಿತ್ತು. ನಿಯಮಗಳ ಪ್ರಕಾರ ತುಟ್ಟಿಭತ್ಯೆ ಶೇ.50ಕ್ಕೆ ತಲುಪಿದ ತಕ್ಷಣ ಅದನ್ನು ಶೂನ್ಯಕ್ಕೆ ಇಳಿಸಿ ಶೇ.50ರ ಪ್ರಕಾರ ಮೂಲ ವೇತನಕ್ಕೆ ಅಂದರೆ ಕನಿಷ್ಠ ವೇತನಕ್ಕೆ ಸೇರಿಸಲಾಗುತ್ತದೆ.

ಇದನ್ನೂ ಓದಿ :Union Budget 2024: ಅಸಂಘಟಿತ ವಲಯದ ಕಾರ್ಮಿಕರಿಗೊಂದು ಗುಡ್ ನ್ಯೂಸ್!

ಮೂಲ ವೇತನದಲ್ಲಿ  ಹೆಚ್ಚಳ :
ಮೇಲಿನ ನಿಯಮಗಳ ಪ್ರಕಾರ, ಕೇಂದ್ರ ನೌಕರರ ಕನಿಷ್ಠ ವೇತನದಲ್ಲಿ  9000 ರೂ. ಹೆಚ್ಚಳವಾಗುತ್ತದೆ. ಉದ್ಯೋಗಿಯ ಮೂಲ ವೇತನ 18000 ರೂ.ಆಗಿದ್ದರೆ, 50% ಡಿಎಯ ಆಧಾರದಲ್ಲಿ ಅವರು 9000 ರೂ. ಪಡೆಯುತ್ತಾರೆ. ಆದರೆ, ಡಿಎ 50% ಆದ ನಂತರ ಅದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಇದಾದ ಬಳಿಕ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಆ ನಂತರ ಮತ್ತೆ ಮೊದಲಿನ ನಿಯಮವನ್ನೇ ಅನ್ವಯಿಸಿಕೊಂಡು ಹೋಗಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 

Trending News