Best Recharge Plans: 151 ರಿಚಾರ್ಜ್ ಮಾಡಿಸಿದ್ರೆ ವ್ಯಾಲಿಡಿಟಿ ಜೊತೆಗೆ ಸಿಗಲಿದೆ 40GB ಡೇಟಾ!

BSNL ಪ್ರಿಪೇಯ್ಡ್ ಪ್ಲಾನ್ ವ್ಯಾಲಿಡಿಟಿ: BSNL ಮತ್ತೆ ತನ್ನ ಜನಪ್ರಿಯ 151 ರೂ.ನ ಪ್ರಿಪೇಯ್ಡ್ ಯೋಜನೆಯ ವ್ಯಾಲಿಡಿಟಿಯನ್ನು ಹೆಚ್ಚಿಸಿದೆ. BSNL ಬಳಕೆದಾರರು ಈಗ ಕೇವಲ 151 ರೂ.ಗಳಲ್ಲಿ ಹೆಚ್ಚು ದಿನಗಳವರೆಗೆ ಕರೆ, SMS ಮತ್ತು ಇಂಟರ್ನೆಟ್ ಸೌಲಭ್ಯವನ್ನು ಪಡೆಯಬಹುದು. 

Written by - Puttaraj K Alur | Last Updated : Jan 15, 2024, 04:50 PM IST
  • ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಬಳಕೆದಾರರಿಗೆ ಸಿಹಿಸುದ್ದಿ ನೀಡಿದೆ
  • BSNL ತನ್ನ ಜನಪ್ರಿಯ 151 ರೂ. ಪ್ರಿಪೇಯ್ಡ್ ಯೋಜನೆಯ ವ್ಯಾಲಿಡಿಟಿಯನ್ನು ಮತ್ತೆ ವಿಸ್ತರಿಸಿದೆ
  • 30 ದಿನಗಳ ವ್ಯಾಲಿಡಿಟಿ, 40GB ಡೇಟಾ ಜೊತೆಗೆ ಉಚಿತ ಜಿಂಗ್ ಚಂದಾದಾರಿಕೆ
Best Recharge Plans: 151 ರಿಚಾರ್ಜ್ ಮಾಡಿಸಿದ್ರೆ ವ್ಯಾಲಿಡಿಟಿ ಜೊತೆಗೆ ಸಿಗಲಿದೆ 40GB ಡೇಟಾ!  title=
BSNL 151 ರೂ. ಪ್ರಿಪೇಯ್ಡ್ ಯೋಜನೆ

ನವದೆಹಲಿ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಬಳಕೆದಾರರಿಗೆ ಸಿಹಿಸುದ್ದಿ ನೀಡಿದೆ. ದೇಶದ ಕೋಟ್ಯಂತರ ಬಳಕೆದಾರರಿಗೆ ಸೂಪರ್ ರಿಚರ್ಜ್ ಪ್ಲ್ಯಾನ್ ನೀಡಿದೆ. ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಈ ಕಂಪನಿಯು ಅಗ್ಗದ ಡೇಟಾ ಯೋಜನೆಗಳನ್ನು ಒದಗಿಸುತ್ತದೆ. ಈಗ BSNL ತನ್ನ ಜನಪ್ರಿಯ 151 ರೂ.ನ ಪ್ರಿಪೇಯ್ಡ್ ಯೋಜನೆಯ ವ್ಯಾಲಿಡಿಟಿಯನ್ನು ಮತ್ತೆ ವಿಸ್ತರಿಸಿದೆ. BSNL ಬಳಕೆದಾರರು ಈಗ ಕೇವಲ 151 ರೂ.ಗಳಲ್ಲಿ ಹೆಚ್ಚು ದಿನಗಳವರೆಗೆ ಕರೆ, SMS ಮತ್ತು ಇಂಟರ್ನೆಟ್ ಸೌಲಭ್ಯವನ್ನು ಪಡೆಯಬಹುದು. ಕಂಪನಿಯು ಈ ಯೋಜನೆಯ ವ್ಯಾಲಿಡಿಟಿಯನ್ನು ಎಷ್ಟು ದಿನಗಳವರೆಗೆ ವಿಸ್ತರಿಸಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.  

ವರದಿಗಳ ಪ್ರಕಾರ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವವರಿಗೆ ಡೇಟಾ ಬೂಸ್ಟರ್ ಆಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಈ ಯೋಜನೆಯ ವ್ಯಾಲಿಡಿಟಿಯನ್ನು 2022ರಲ್ಲಿ ಕಡಿಮೆ ಮಾಡಲಾಗಿದೆ. ನಂತರ ಅದರ ವ್ಯಾಲಿಡಿಟಿಯನ್ನು 30 ದಿನಗಳಿಂದ 28 ದಿನಗಳಿಗೆ ಇಳಿಸಲಾಯಿತು. ಇದೀಗ BSNL ಮತ್ತೊಮ್ಮೆ ಈ ಯೋಜನೆಯ ವ್ಯಾಲಿಡಿಟಿಯನ್ನು ಹೆಚ್ಚಿಸಿದೆ. ಕಂಪನಿಯು ಈ ಯೋಜನೆಯ ವ್ಯಾಲಿಡಿಟಿಯನ್ನು 2 ದಿನಗಳವರೆಗೆ ಹೆಚ್ಚಿಸಿದೆ. ಈಗ ಬಳಕೆದಾರರು ಮತ್ತೆ ಮೊದಲಿನಂತೆಯೇ 30 ದಿನಗಳವರೆಗೆ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Stock market: ಮೊದಲ ಬಾರಿಗೆ 73,000 ಗಡಿ ದಾಟಿದ ಸೆನ್ಸೆಕ್ಸ್, 22,000 ಗಡಿ ದಾಟಿದ ನಿಫ್ಟಿ!

ಈ ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳೇನು?  

1. 30 ದಿನಗಳ ವ್ಯಾಲಿಡಿಟಿ: 151 ರೂ.ನ ಈ ರಿಚಾರ್ಜ್ ಪ್ಲಾನ್‍ನಲ್ಲಿ ಈಗ ಪೂರ್ಣ 30 ದಿನಗಳ ವ್ಯಾಲಿಡಿಟಿಯನ್ನು ನೀಡಲಾಗುತ್ತದೆ. ಇದರ 1 ದಿನದ ವೆಚ್ಚ ಕೇವಲ 5.033 ರೂ. ಆಗುತ್ತದೆ.  

2. 40GB ಡೇಟಾ: ಈ ಯೋಜನೆಯಡಿ ಬಳಕೆದಾರರು ಮೊದಲಿನಂತೆಯೇ 40GB ಡೇಟಾವನ್ನು ಪಡೆಯುತ್ತಾರೆ. ಬಳಕೆದಾರರು ಇದನ್ನು ಇಂಟರ್ನೆಟ್ ಸರ್ಫಿಂಗ್‌ಗಾಗಿ ಬಳಸಬಹುದು.

3. ಜಿಂಗ್ ಚಂದಾದಾರಿಕೆ: ಈ ಯೋಜನೆಯೊಂದಿಗೆ ಬಳಕೆದಾರರು ಉಚಿತವಾಗಿ ಜಿಂಗ್ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.

ಇದನ್ನೂ ಓದಿ: ಜನವರಿ 31 ರ ನಂತರ ನಿಷ್ಪ್ರಯೋಜಕ ನಿಮ್ಮ Fastag ! ನೀಡಬೇಕು ಡಬಲ್ ಟ್ಯಾಕ್ಸ್

4. Flexibility: ಇದು ಡೇಟಾ ವೋಚರ್ ಆಗಿದೆ. ಆದ್ದರಿಂದ ನೀವು ಎಲ್ಲವನ್ನೂ ಒಂದೇ ಬಾರಿಗೆ ಅಥವಾ ವಿವಿಧ ಸಮಯಗಳಲ್ಲಿ ಬಳಸಲು Flexibility  ಹೊಂದಿದ್ದೀರಿ. ನೀವು ಪ್ರತಿದಿನ ಕೇವಲ 1GB ಅಥವಾ 2GB ಡೇಟಾಗೆ ಸೀಮಿತವಾಗಿರಲು ಬಯಸದಿದ್ದರೆ, ಇದು ನಿಮಗೆ ಉತ್ತಮ ಆಯ್ಕೆಯಾಗಿದೆ.

ಮಾಹಿತಿಯ ಪ್ರಕಾರ, ಈ ಬದಲಾವಣೆಗಳನ್ನು ಇನ್ನೂ ಎಲ್ಲಾ ವಲಯಗಳಲ್ಲಿ ಜಾರಿಗೊಳಿಸಿಲ್ಲ. ಈ ಬದಲಾವಣೆಗಳನ್ನು ಪ್ರಸ್ತುತ ತಮಿಳುನಾಡು ವೃತ್ತದ ಬಳಕೆದಾರರಿಗೆ ಅಳವಡಿಸಲಾಗಿದೆ. ಛತ್ತೀಸ್‌ಗಢದಲ್ಲಿ ಈ ಯೋಜನೆಯು ಇನ್ನೂ 28 ದಿನಗಳ ಮಾನ್ಯತೆಯೊಂದಿಗೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿಯೂ ಈ ಯೋಜನೆ ಜಾರಿಗೆ ತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News