Bumper Offer: ಹೊಸ ಕಾರು ಖರೀದಿಸುವವರಿಗೆ ಭರ್ಜರಿ ರಿಯಾಯತಿ ಘೋಷಿಸಿದ ಹೋಂಡಾ!

ಹೋಂಡಾ ಕಾರ್ಸ್ ಇಂಡಿಯಾ ಮೇ ತಿಂಗಳಿನಲ್ಲಿ ಗ್ರಾಹಕರಿಗೆ ಹೊಸ ಕಾರು ಖರೀದಿಯ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ.  ಹೋಂಡಾ ಸಿಟಿ, ಅಮೇಜ್, WR-V ಮತ್ತು ಜಾಝ್‌ನ 4ನೇ ಮತ್ತು 5ನೇ ತಲೆಮಾರಿನ ಕಾರುಗಳ ಮೇಲೆ ಕಂಪನಿಯು ಈ ಎಲ್ಲಾ ಕೊಡುಗೆಗಳನ್ನು ನೀಡಿದೆ. ಗ್ರಾಹಕರು ಮೇ ತಿಂಗಳಲ್ಲಿ ಮಾತ್ರ 33,000 ರೂ.ವರೆಗಿನ ರಿಯಾಯಿತಿಯ ಲಾಭವನ್ನು ಪಡೆಯಬಹುದಾಗಿದೆ.

Written by - Puttaraj K Alur | Last Updated : May 16, 2022, 05:29 PM IST
  • ಹೊಸ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ರಿಯಾಯತಿ ಘೋಷಿಸಿದ ಹೋಂಡಾ
  • ಹೋಂಡಾ ಸಿಟಿ, ಅಮೇಜ್, WR-V & ಜಾಝ್‌ನ 4ನೇ ಮತ್ತು 5ನೇ ತಲೆಮಾರಿನ ಕಾರುಗಳ ಮೇಲೆ ಡಿಸ್ಕೌಂಟ್
  • ಮೇ ತಿಂಗಳಿನಲ್ಲಿ ಮಾತ್ರ ಗ್ರಾಹಕರಿಗೆ 33,000 ರೂ.ವರೆಗೆ ರಿಯಾಯಿತಿ ಲಭ್ಯವಿರುತ್ತದೆ
Bumper Offer: ಹೊಸ ಕಾರು ಖರೀದಿಸುವವರಿಗೆ ಭರ್ಜರಿ ರಿಯಾಯತಿ ಘೋಷಿಸಿದ ಹೋಂಡಾ! title=
ಹೋಂಡಾ ಕಾರುಗಳ ಮೇಲೆ ಭರ್ಜರಿ ರಿಯಾಯತಿ

ನವದೆಹಲಿ: ಹೋಂಡಾ ಕಾರ್ಸ್ ಇಂಡಿಯಾ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡುತ್ತಿದೆ. ಜಪಾನಿನ ವಾಹನ ತಯಾರಕ ಕಂಪನಿಯು ತನ್ನ ಎಲ್ಲಾ ಕಾರುಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದು, ಮೇ 31ರವರೆಗೆ ಗ್ರಾಹಕರಿಗೆ ಲಭ್ಯವಿರುತ್ತದೆ. ಈ ಎಲ್ಲಾ ರಿಯಾಯಿತಿ ಹೋಂಡಾ ಸಿಟಿಯ 5ನೇ ಮತ್ತು 4ನೇ ತಲೆಮಾರಿನ ಹೋಂಡಾ ಅಮೇಜ್, ಹೋಂಡಾ ಡಬ್ಲ್ಯುಆರ್‌ವಿ (WR-V)) ಮತ್ತು ಹೋಂಡಾ ಜಾಝ್‌ನಲ್ಲಿ ಲಭ್ಯವಿದೆ. ಹೋಂಡಾ ಈ ಎಲ್ಲಾ ಕಾರುಗಳ ಮೇಲೆ ಮಾಡೆಲ್ ಮತ್ತು ವೇರಿಯಂಟ್ ಆಧರಿಸಿ 33 ಸಾವಿರ ರೂ.ವರೆಗೂ ಡಿಸ್ಕೌಂಟ್ ನೀಡುತ್ತಿದೆ.   

ಹೋಂಡಾ ಸಿಟಿ 5th Generation

ಕಂಪನಿಯು ಈ ಸೆಡಾನ್ ಮೇಲೆ ಗರಿಷ್ಠ 30,396 ರೂ.ಗಳ ರಿಯಾಯಿತಿ ನೀಡುತ್ತಿದೆ. ಇದರಲ್ಲಿ 5,000 ರೂ.ವರೆಗಿನ ನಗದು ರಿಯಾಯಿತಿ, ಕಾರು ವಿನಿಮಯದ ಮೇಲೆ 5,396 ರೂ.ಗಳ ಪ್ರಯೋಜನ, ಹಳೆಯ ಹೋಂಡಾ ಗ್ರಾಹಕರಿಗೆ 5,000 ರೂ.ವರೆಗೆ ಲಾಯಲ್ಟಿ ಬೋನಸ್, 5,000 ರೂ.ವರೆಗೆ ಹೋಂಡಾ ಕಾರು ವಿನಿಮಯ ಬೋನಸ್, ಅಸ್ತಿತ್ವದಲ್ಲಿರುವ ಹೋಂಡಾಗೆ 7,000 ರೂ.ವರೆಗೆ ಹೆಚ್ಚುವರಿ ವಿನಿಮಯ ರಿಯಾಯಿತಿ ಮತ್ತು 8,000 ರೂ.ವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯಲಿದ್ದಾರೆ.

ಇದನ್ನೂ ಓದಿ: Mutual Funds SIP: ಎಸ್ಐಪಿ ಬಗ್ಗೆ ಜನರಲ್ಲಿರುವ ಸಾಮಾನ್ಯ ತಪ್ಪು ತಿಳುವಳಿಕೆಗಳು

ಹೋಂಡಾ ಸಿಟಿ 4th Generation

4ನೇ ತಲೆಮಾರಿನ ಹೋಂಡಾ ಸಿಟಿಯಲ್ಲಿ ಒಟ್ಟು 20,000 ರೂ.ವರೆಗಿನ ಕೊಡುಗೆ ನೀಡಲಾಗುತ್ತಿದೆ. ಕಂಪನಿಯು ಹಳೆಯ ಹೋಂಡಾ ಗ್ರಾಹಕರಿಗೆ 5,000 ರೂ.ವರೆಗಿನ ಲಾಯಲ್ಟಿ ಬೋನಸ್, 7,000 ರೂ.ವರೆಗಿನ ಹೋಂಡಾ ಕಾರ್ ಎಕ್ಸ್ಚೇಂಜ್ ಆಫರ್ ಮತ್ತು ಈ ಕಾರಿನ ಮೇಲೆ 8,000 ರೂ.ವರೆಗೆ ಕಾರ್ಪೊರೇಟ್ ರಿಯಾಯಿತಿ ನೀಡಿದೆ.

ಹೋಂಡಾ ಜಾಝ್ (Honda Jazz)

ಹೋಂಡಾ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಗ್ರಾಹಕರಿಗೆ ಒಟ್ಟು 33,158 ರೂ.ವರೆಗೆ ರಿಯಾಯತಿ ನೀಡುತ್ತಿದೆ. ಇದರಲ್ಲಿ 10,000 ರೂ.ವರೆಗಿನ ನಗದು ರಿಯಾಯಿತಿ ಅಥವಾ 12,158 ರೂ.ವರೆಗಿನ FOC accessories, ಎಕ್ಸ್‌ಚೇಂಜ್ ಬೋನಸ್‌ ಆಗಿ 5,000 ರೂ., ಹಳೆಯ ಹೋಂಡಾ ಗ್ರಾಹಕರಿಗೆ 5,000 ರೂ.ವರೆಗೆ ಲಾಯಲ್ಟಿ ಬೋನಸ್, ಹೋಂಡಾ ಕಾರ್ ಎಕ್ಸ್‌ಚೇಂಜ್‌ನಲ್ಲಿ 7,000 ರೂ. ಮತ್ತು 4,000 ರೂ.ವರೆಗಿನ ಕಾರ್ಪೊರೇಟ್ ರಿಯಾಯಿತಿ ಲಭ್ಯವಾಗಲಿದೆ.

ಇದನ್ನೂ ಓದಿ: SBI ಗ್ರಾಹಕರಿಗೊಂದು ಸಂತಸದ ಸುದ್ದಿ, ಇತರ ಬ್ಯಾಂಕ್ ಗ್ರಾಹಕರಿಗೂ ಕೂಡ ಲಾಭ

ಹೋಂಡಾ WR-V

ಕಂಪನಿಯು ತನ್ನ ಸಬ್-ಕಾಂಪ್ಯಾಕ್ಟ್ SUV ಹೋಂಡಾ WR-V ಮೇಲೆ ಒಟ್ಟು 26,000 ರೂ.ಗಳ ಕೊಡುಗೆ ನೀಡುತ್ತಿದೆ. ಎಲ್ಲಾ ಪೆಟ್ರೋಲ್ ರೂಪಾಂತರ ಕಾರುಗಳ ಮೇಲೂ ಈ ಆಫರ್ ಲಭ್ಯವಿರುತ್ತದೆ. ಈ ಪೈಕಿ ಕಾರು ವಿನಿಮಯದ ಮೇಲೆ 10,000 ರೂ.ವರೆಗಿನ ಬೋನಸ್, ಹಳೆಯ ಗ್ರಾಹಕರಿಗೆ 5,000 ರೂ.ವರೆಗಿನ ಲಾಯಲ್ಟಿ ಬೋನಸ್, ಹೋಂಡಾ ಕಾರು ವಿನಿಮಯ ಮಾಡಿಕೊಂಡರೆ 7,000 ರೂ. ವರೆಗಿನ ಪ್ರಯೋಜನಗಳು ಮತ್ತು 4,000 ರೂ.ವರೆಗಿನ ಕಾರ್ಪೊರೇಟ್ ರಿಯಾಯಿತಿ ಸಿಗಲಿದೆ.

ಹೋಂಡಾ ಅಮೇಜ್ (Honda Amaze)

ಹೋಂಡಾ ಅಮೇಜ್ ಸಬ್-ಕಾಂಪ್ಯಾಕ್ಟ್ ಸೆಡಾನ್‌ನ ಎಲ್ಲಾ ರೂಪಾಂತರಗಳ ಮೇಲೆ ಕಂಪನಿಯು ಮೇಲೆ ಒಟ್ಟು 9,000 ರೂ.ವರೆಗೆ ರಿಯಾಯಿತಿ ನೀಡುತ್ತಿದೆ. ಈ ಪೈಕಿ ಹಳೆಯ ಹೋಂಡಾ ಗ್ರಾಹಕರಿಗೆ 31 ಮೇ 2022ರವರೆಗೆ 5,000 ರೂ.ವರೆಗಿನ ಲಾಯಲ್ಟಿ ಬೋನಸ್ ಮತ್ತು 4,000 ರೂ.ವರೆಗಿನ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News