SBI ಗ್ರಾಹಕರಿಗೊಂದು ಸಂತಸದ ಸುದ್ದಿ, ಇತರ ಬ್ಯಾಂಕ್ ಗ್ರಾಹಕರಿಗೂ ಕೂಡ ಲಾಭ

SBI YONO 2.0: ಗೂಗಲ್ ನಂತೆಯ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಹಲವು ಸೌಲಭ್ಯಗಳಿರುವ ಯೋನೋ 2.0 ಆಪ್ ಬಿಡುಗಡೆ ಮಾಡಲಿದೆ. ಈ ಆಪ್ ವಿಶೇಷತೆ ಎಂದರೆ, ಇತರ ಬ್ಯಾಂಕ್ ಗ್ರಾಹಕರು ಕೂಡ ಈ ಆಪ್ ನ ಸೌಲಭ್ಯವನ್ನು ಪಡೆಯಬಹುದು.

Written by - Nitin Tabib | Last Updated : May 14, 2022, 10:46 PM IST
  • ಬ್ಯಾಂಕ್ ಗ್ರಾಹಕರಿಗೊಂದು ಸಂತಸದ ಸುದ್ದಿ
  • ಶೀಘ್ರದಲ್ಲಿಯೇ ಎಸ್. ಬಿ. ಐ ನಿಂದ ಈ ಆಪ್ ಬಿಡುಗಡೆ
  • ಇತರ ಬ್ಯಾಂಕ್ ಗ್ರಾಹಕರೂ ಕೂಡ ಈ ಸೇವೆಯ ಲಾಭ ಪಡೆಯಬಹುದು.
SBI ಗ್ರಾಹಕರಿಗೊಂದು ಸಂತಸದ ಸುದ್ದಿ, ಇತರ ಬ್ಯಾಂಕ್ ಗ್ರಾಹಕರಿಗೂ ಕೂಡ ಲಾಭ title=
SBI Services

SBI YONO 2.0: ಗೂಗಲ್ ರೀತಿಯಲ್ಲಿಯೇ  ಹಲವು ಸೌಕರ್ಯಗಳನ್ನು ಹೊಂದಿರುವ ಯೋನೋ 2.0 ಬಿಡುಗಡೆ ಮಾಡುವ ಸಿದ್ಧತೆ ನಡೆಸುತ್ತಿದೆ. ಎಸ್. ಬಿ.ಐ ಗ್ರಾಹಕರಲ್ಲದವರು ಕೂಡ ಇದರ ಲಾಭವನ್ನು ಪಡೆಯಬಹುದು. ಅಂದರೆ, ಎಲ್ಲಾ ಭಾರತೀಯರು ಯೋನೋ 2.0 ಸೇವೆಯ ಲಾಭವನ್ನು ಪಡೆಯಬಹುದು. ಈ ಸೇವೆಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ. 

ಡಿಜಿಟಲ್ ಬ್ಯಾಂಕಿಂಗ್ ಸೇವೆಗಾಗಿ ಎಸ್. ಬಿ. ಐ, ಯೋನೋ ಸೇವೆಯನ್ನು ಆರಂಭಿಸಿದೆ. ಗ್ರಾಹಕರಿಗೆ ಈ ಆಪ್ ಮೇಲೆ ಡಿಜಿಟಲ್ ಬ್ಯಾಂಕಿಂಗ್ ಸೇವೆಯ ಜೊತೆಗೆ ಈ-ಕಾಮರ್ಸ್ ಸೇವೆ ಕೂಡ ಲಭಿಸುತ್ತದೆ. 

ಇದನ್ನೂ ಓದಿ-Post Office scheme: ಪೋಸ್ಟ್ ಆಫೀಸ್ ನ ಈ ಸೂಪರ್ ಹಿಟ್ ಯೋಜನೆಯಲ್ಲಿ ಬ್ಯಾಂಕ್ ಗಿಂತಲೂ ಉತ್ತಮ ಆದಾಯ ಸಿಗುತ್ತದೆ

ಏನಿದು ಯೋನೋ ಆಪ್?
ಗ್ರಾಹಕರ ಹಿತದೃಷ್ಟಿಯಿಂದ  16 ಮಾರ್ಚ್ 2019 ರಲ್ಲಿ SBI  YONO ಆಪ್ ಅನ್ನು ಆರಂಭಿಸಿದೆ. ಅಪ್ಲಿಕೇಶನ್ ಮತ್ತು ಆನ್‌ಲೈನ್ ಪೋರ್ಟಲ್ ಎರಡರಲ್ಲೂ ಲಭ್ಯವಿರುವ YONO ಕ್ಯಾಶ್ ಇದರ ದೊಡ್ಡ ವೈಶಿಷ್ಟ್ಯವಾಗಿದೆ. ಇದರಲ್ಲಿ ಗ್ರಾಹಕರು ಹಲವು ಸೌಲಭ್ಯಗಳನ್ನು ಪಡೆಯುತ್ತಾರೆ. ಯಾವುದೇ ಎಸ್‌ಬಿಐ ಎಟಿಎಂ ಮತ್ತು ಹೆಚ್ಚಿನ ಎಸ್‌ಬಿಐ ಮರ್ಚೆಂಟ್ ಪಿಒಎಸ್ ಟರ್ಮಿನಲ್‌ಗಳು ಅಥವಾ ಗ್ರಾಹಕ ಸೇವಾ ಕೇಂದ್ರಗಳಿಂದ (ಸಿಎಸ್‌ಪಿ) ಹಣವನ್ನು ತಕ್ಷಣವೇ ಹಿಂಪಡೆಯಲು ಇದು ಗ್ರಾಹಕರಿಗೆ ಅನುಮತಿಸುತ್ತದೆ. ಇದರೊಂದಿಗೆ, ನೀವು ಈ ಅಪ್ಲಿಕೇಶನ್‌ನಲ್ಲಿ ಎಸ್‌ಬಿಐಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ-Mutual Funds SIP: ಎಸ್ಐಪಿ ಬಗ್ಗೆ ಜನರಲ್ಲಿರುವ ಸಾಮಾನ್ಯ ತಪ್ಪು ತಿಳುವಳಿಕೆಗಳು

ಯೋನೋ ಆಪ್ ನಲ್ಲಿ ಗ್ರಾಹಕರಿಗೆ ಈ ಸೌಲಭ್ಯಗಳು ಲಭಿಸುತ್ತವೆ
>> YONO ಅಪ್ಲಿಕೇಶನ್‌ನಲ್ಲಿ ಗ್ರಾಹಕರು ಅನೇಕ ಸೌಲಭ್ಯಗಳನ್ನು ಪಡೆಯುತ್ತಾರೆ.
- ಎಟಿಎಂಗಳು, ಪಿಒಎಸ್ ಟರ್ಮಿನಲ್‌ಗಳು ಅಥವಾ ಸಿಎಸ್‌ಪಿಗಳಿಂದ ಹಣವನ್ನು ಹಿಂಪಡೆಯಲು ನಿಮಗೆ ಇದು ಅನುಮತಿಸುತ್ತದೆ. 
>> ಇದರ ಅತ್ಯಂತ  ಪ್ರಮುಖ ವೈಶಿಷ್ಟ್ಯ ಎಂದರೆ YONO ನಗದು ವಹಿವಾಟುಗಳನ್ನು ATM ಹಿಂಪಡೆಯುವ ಮಿತಿಯಿಂದ ಪ್ರತ್ಯೇಕಿಸಲಾಗಿದೆ.
>> ಇದರಲ್ಲಿ ನೀವು  ಕಾರ್ಡ್ ಹೊಂದುವ ಅವಶ್ಯಕತೆ ಇಲ್ಲ
>> ಇದು ಸುರಕ್ಷಿತವಾಗಿದೆ ಮತ್ತು ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ಅಪಾಯಗಳನ್ನು ನಿವಾರಿಸುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News