WATCH: 6 ಕೋಟಿ ಲಂಬೋರ್ಗಿನಿ ಕಾರಿನಲ್ಲಿ ತೆರಳಿ 10 ರೂ. ಪೆಟ್ರೋಲ್ ಹಾಕೆಂದ ಯುವಕ.. ಮುಂದಾಗಿದ್ದೇನು ನೋಡಿ.!

Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿದ್ದು, ಅವುಗಳಲ್ಲಿ ಒಂದು ಲಂಬೋರ್ಗಿನಿ ಕಾರಿನ ವಿಡಿಯೋ. ಇದನ್ನು ನೋಡಿದ ನಂತರ ನೀವು ಆಶ್ಚರ್ಯ ಪಡುತ್ತೀರಿ. ಈ ವಿಡಿಯೋ ಯೂಟ್ಯೂಬ್‌ನಲ್ಲೂ ಟ್ರೆಂಡಿಂಗ್ ಆಗಿದೆ.

Edited by - Zee Kannada News Desk | Last Updated : Dec 28, 2021, 05:20 PM IST
  • ಆ ವ್ಯಕ್ತಿ ಲಂಬೋರ್ಗಿನಿ ಕಾರಿನೊಂದಿಗೆ ಪೆಟ್ರೋಲ್ ಪಂಪ್‌ಗೆ ಬಂದರು
  • ತಮಾಷೆಯ ವಿಡಿಯೋ ಈಗ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗಿದೆ
  • ಯೂಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಿಸಿದ ವಿಡಿಯೋ
WATCH: 6 ಕೋಟಿ ಲಂಬೋರ್ಗಿನಿ ಕಾರಿನಲ್ಲಿ ತೆರಳಿ 10 ರೂ. ಪೆಟ್ರೋಲ್ ಹಾಕೆಂದ ಯುವಕ.. ಮುಂದಾಗಿದ್ದೇನು ನೋಡಿ.!  title=
ಲಂಬೋರ್ಗಿನಿ

ನೀವು ಎಂದಾದರೂ ಲಂಬೋರ್ಗಿನಿ ಕಾರನ್ನು ನೋಡಿದ್ದೀರಾ? ಹೌದು ಎಂದಾದರೆ, ಅದರಲ್ಲಿ ಕನಿಷ್ಠ ಎಷ್ಟು ಪೆಟ್ರೋಲ್ ಹಾಕಬೇಕು ಎಂದು ಖಂಡಿತವಾಗಿಯೂ ಅರ್ಥಮಾಡಿಕೊಳ್ಳಬಹುದು. ಇದರಿಂದ ಕಾರು ರಸ್ತೆಯಲ್ಲಿ ಸರಾಗವಾಗಿ ಚಲಿಸುತ್ತದೆ. ವ್ಯಕ್ತಿಯೊಬ್ಬ ಪೆಟ್ರೋಲ್ ಪಂಪ್‌ಗೆ ಹೋಗಿ ಈ ರೀತಿ ತಮಾಷೆ ಮಾಡಿದ್ದು, ಈ ವಿಡಿಯೋ ನೋಡಿದವರಲ್ಲಿ ಅಚ್ಚರಿ ಮೂಡಿಸಿದೆ. 

ಅಷ್ಟೇ ಅಲ್ಲ 6 ಕೋಟಿ ಬೆಲೆ ಬಾಳುವ ಲಂಬೋರ್ಗಿನಿ ಕಾರನ್ನು ನೋಡಿ ಪೆಟ್ರೋಲ್ ಪಂಪ್‌ನಲ್ಲಿದ್ದ ನೌಕರ ಆಶ್ಚರ್ಯಗೊಂಡಿದ್ದ. ಆದರೆ ಅದರೊಳಗಿಂದ ಹೊರಗೆ ಬಂದ ವ್ಯಕ್ತಿ ಆತ ಹೇಳಿದ ಮಾತು ಕೇಳಿ ನೌಕರ ಬೆಚ್ಚಿಬಿದ್ದಿದ್ದಾರೆ. ಹೌದು, ತನ್ನ ಐಷಾರಾಮಿ ಕಾರಿಗೆ 10 ರೂಪಾಯಿ ಮೌಲ್ಯದ ಪೆಟ್ರೋಲ್ ಹಾಕುವಂತೆ ಕೇಳಿದ್ದಾರೆ ಈ ಯುವಕ.

ಯೂಟ್ಯೂಬ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಮಿತ್ ಶರ್ಮಾ ಎಂಬ ಯೂಟ್ಯೂಬರ್ ದೆಹಲಿಯ ರಸ್ತೆಗಳಲ್ಲಿ ಲಂಬೋರ್ಗಿನಿ ಕಾರನ್ನು ಓಡಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಹಲವು ಪೆಟ್ರೋಲ್ ಪಂಪ್‌ಗಳಿಗೆ ತೆರಳಿ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಪೆಟ್ರೋಲ್ ಪಂಪ್ ಉದ್ಯೋಗಿಗಳಿಗೆ 10 ರೂಪಾಯಿ ಪೆಟ್ರೋಲ್ ಹಾಕುವಂತೆ ಕೇಳಿದ್ದಾರೆ. ಕೆಲವರು ಆಶ್ಚರ್ಯಪಟ್ಟರು ಮತ್ತು ಕೆಲವರು ಪೆಟ್ರೋಲ್ ಹಾಕಲು ನಿರಾಕರಿಸಿದರು. ಪೆಟ್ರೋಲ್ ಪಂಪ್‌ನಲ್ಲಿ, ಅಮಿತ್ 1 ರೂಪಾಯಿಗೆ ಪೆಟ್ರೋಲ್ ಹಾಕಲು ಕೇಳಿದರು. ಇದರಿಂದ ಸಿಟ್ಟಿಗೆದ್ದ ನೌಕರ ಪೆಟ್ರೋಲ್ ಹಾಕಲು ನಿರಾಕರಿಸಿದರು.

ತಮಾಷೆಯ ವಿಡಿಯೋ ಈಗ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ :

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. Crazy XYZ ಹೆಸರಿನ ಯೂಟ್ಯೂಬ್ ಚಾನೆಲ್ ಈ ವಿಡಿಯೋವನ್ನು ಶೇರ್ ಮಾಡಿದ್ದು, ಸುಮಾರು 90 ಲಕ್ಷ ಮಂದಿ ವೀಕ್ಷಿಸಿದ್ದಾರೆ. 

ಭಾನುವಾರ ಅಪ್‌ಲೋಡ್ ಮಾಡಿದ ಈ ವೀಡಿಯೊ YouTube ನ ಟಾಪ್-10 ನಲ್ಲಿ ಟ್ರೆಂಡಿಂಗ್ ಆಗಿದೆ. ಈ ತಮಾಷೆಯ ವಿಡಿಯೋವನ್ನು ಯೂಟ್ಯೂಬರ್ ಅಮಿತ್ ಮಾಡಿದ್ದಾರೆ. 

ಇದನ್ನೂ ಓದಿ: Second earth:ಸಿಕ್ಕೆ ಬಿಡ್ತಾ 9 ನೇ ಗ್ರಹ? ಸೌರವ್ಯೂಹದಲ್ಲಿದೆ 'ಎರಡನೇ ಭೂಮಿ'! ಇದಕ್ಕೆ ಇದೆ ಪುರಾವೆ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News