Indian Railways: ಚಾರ್ಟ್ ಸಿದ್ಧಪಡಿಸಿದ ನಂತರ ಕ್ಯಾನ್ಸಲ್ ಮಾಡಲಾದ ಟಿಕೆಟ್‌ಗೂ ಸಿಗುತ್ತೆ ರೀಫಂಡ್

Indian Railways: ಯಾವುದೇ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ನೀವು ರೈಲಿನ ಚಾರ್ಟ್ ಸಿದ್ದವಾದ ಬಳಿಕ ನಿಮ್ಮ ರೈಲು ಟಿಕೆಟ್ ಅನ್ನು ರದ್ದುಗೊಳಿಸಬೇಕಾದರೆ ಆಗಲೂ ಸಹ ನೀವು ಮರುಪಾವತಿಗಾಗ ಅರ್ಜಿ ಸಲ್ಲಿಸಬಹುದು. ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ...

Written by - Yashaswini V | Last Updated : Jun 8, 2022, 02:33 PM IST
  • ರೈಲ್ವೇ ಪ್ರಯಾಣಿಕರಿಗೆ ಮಹತ್ವದ ಸುದ್ದಿ
  • ಚಾರ್ಟ್ ಸಿದ್ಧಪಡಿಸಿದ ನಂತರ ಕೆಲವು ಕಾರಣಗಳಿಂದ ನೀವು ರೈಲು ಟಿಕೆಟ್ ಅನ್ನು ರದ್ದುಗೊಳಿಸಿದರೂ ಸಹ ಮರುಪಾವತಿಯನ್ನು ಕ್ಲೈಮ್ ಮಾಡಬಹುದು
  • ಇದಕ್ಕಾಗಿ ಇರುವ ನಿಯಮಗಳೇನು ಎಂದು ತಿಳಿಯಿರಿ
Indian Railways: ಚಾರ್ಟ್ ಸಿದ್ಧಪಡಿಸಿದ ನಂತರ ಕ್ಯಾನ್ಸಲ್ ಮಾಡಲಾದ ಟಿಕೆಟ್‌ಗೂ ಸಿಗುತ್ತೆ ರೀಫಂಡ್  title=
Indian Railways refund rules

ಭಾರತೀಯ ರೈಲ್ವೇ:  ರೈಲ್ವೇ ಪ್ರಯಾಣಿಕರಿಗೆ ಮಹತ್ವದ ಸುದ್ದಿಯಿದೆ. ಇಂದಿನ ಯುಗದಲ್ಲಿ, ಭಾರತದಲ್ಲಿ ಪ್ರತಿದಿನ ಕೋಟಿಗಟ್ಟಲೆ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ, ಆದ್ದರಿಂದ ರೈಲ್ವೆಗೆ ಸಂಬಂಧಿಸಿದ ನವೀಕರಣಗಳ ಬಗ್ಗೆ ತಿಳಿದಿರುವುದು ಅಗತ್ಯವಾಗಿದೆ. ಕೆಲವು ತುರ್ತು ಪರಿಸ್ಥಿತಿಯಿಂದಾಗಿ ರೈಲು ಚಾರ್ಟ್ ಸಿದ್ಧಪಡಿಸಿದ ನಂತರವೂ ನೀವು ಅನೇಕ ಬಾರಿ ರೈಲು ಟಿಕೆಟ್ ಅನ್ನು ರದ್ದುಗೊಳಿಸಬೇಕಾಗುತ್ತದೆ. ಆದರೆ ಅಂತಹ ಪರಿಸ್ಥಿತಿಯಲ್ಲಿಯೂ ಸಹ, ನೀವು ಟಿಕೆಟ್ ರದ್ದುಗೊಳಿಸುವಿಕೆಯ ರೀಫಂಡ್ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ? 

ಈ ಮಾಹಿತಿಯನ್ನು ನೀಡಿರುವ ಭಾರತೀಯ ರೈಲ್ವೆ, ಚಾರ್ಟ್ ಸಿದ್ಧಪಡಿಸಿದ ನಂತರ ಕೆಲವು ಕಾರಣಗಳಿಂದ ನೀವು ರೈಲು ಟಿಕೆಟ್ ಅನ್ನು ರದ್ದುಗೊಳಿಸಿದರೂ ಸಹ ಮರುಪಾವತಿಯನ್ನು ಕ್ಲೈಮ್ ಮಾಡಬಹುದು ಎಂದು ಹೇಳಿದೆ.

ಇದನ್ನೂ ಓದಿ- Indian Railways: ರೈಲಿನಲ್ಲಿ ಈ ಸಮಯದಲ್ಲಿ ಯಾರೂ ನಿಮ್ಮ ಸೀಟಿನಲ್ಲಿ ಕೂರುವಂತಿಲ್ಲ

ಈ ಕುರಿತಂತೆ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಐಆರ್ಸಿಟಿಸಿ,  ಭಾರತೀಯ ರೈಲ್ವೇಯು ಪ್ರಯಾಣಿಸದೆ ಅಥವಾ ಭಾಗಶಃ ಪ್ರಯಾಣಿಸದೆ ಟಿಕೆಟ್‌ಗಳನ್ನು ರದ್ದುಗೊಳಿಸಿದರೆ ಮರುಪಾವತಿಯನ್ನು ನೀಡುತ್ತದೆ ಎಂದು ಹೇಳಿದೆ. ಇದಕ್ಕಾಗಿ, ನೀವು ರೈಲ್ವೆ ನಿಯಮಗಳ ಪ್ರಕಾರ ಟಿಕೆಟ್ ಠೇವಣಿ ರಸೀದಿಯನ್ನು (ಟಿಡಿಆರ್) ಸಲ್ಲಿಸಬೇಕು.

ಇದನ್ನೂ ಓದಿ- IRCTC Train Ticket Reservation: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್

ಆನ್‌ಲೈನ್‌ನಲ್ಲಿ ಟಿಡಿಆರ್ ಅನ್ನು ಹೇಗೆ ಸಲ್ಲಿಸುವುದು?
ಇದಕ್ಕಾಗಿ, ನೀವು ಮೊದಲು ಐಆರ್ಸಿಟಿಸಿ ಯ ಅಧಿಕೃತ ವೆಬ್‌ಸೈಟ್ www.irctc.co.in ಗೆ ಹೋಗಿ . 
- ಇಲ್ಲಿ ಮುಖಪುಟಕ್ಕೆ ಹೋಗಿ ಮತ್ತು ಮೈ ಅಕೌಂಟ್ ಮೇಲೆ ಕ್ಲಿಕ್ ಮಾಡಿ
- ಈಗ ಡ್ರಾಪ್ ಡೌನ್ ಮೆನುಗೆ ಹೋಗಿ, ಮೈ ಟ್ರಾನ್ಸಾಕ್ಶನ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ನೀವು ಫೈಲ್ ಟಿಡಿಆರ್ ಆಯ್ಕೆಯಲ್ಲಿನ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡುವ ಮೂಲಕ ಟಿಡಿಆರ್ ಫೈಲ್ ಮಾಡಿ ಆಯ್ಕೆಯನ್ನು ಆರಿಸಿ.
- ಈಗ ಯಾರ ಹೆಸರಿನಲ್ಲಿ ಟಿಕೆಟ್ ಬುಕ್ ಆಗಿದೆ ಎಂಬ ಮಾಹಿತಿ  ಕಾಣಿಸುತ್ತದೆ.
- ಈಗ ಇಲ್ಲಿ ನೀವು ನಿಮ್ಮ ಪಿಎನ್ಆರ್ ಸಂಖ್ಯೆ, ರೈಲು ಸಂಖ್ಯೆ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿ ಮತ್ತು ರದ್ದತಿ ನಿಯಮಗಳ ಬಾಕ್ಸ್ ಅನ್ನು ಟಿಕ್ ಮಾಡಿ.
- ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
- ಇದರ ನಂತರ ನೀವು ಬುಕಿಂಗ್ ಸಮಯದಲ್ಲಿ ನಮೂನೆಯಲ್ಲಿ ನೀಡಲಾದ ಸಂಖ್ಯೆಯ ಮೇಲೆ ಒಟಿಪಿ ಅನ್ನು ಪಡೆಯುತ್ತೀರಿ.
- ನಿಗದಿತ ಸ್ಥಳದಲ್ಲಿ ಒಟಿಪಿ ನಮೂದಿಸಿದ ನಂತರ, ಸಲ್ಲಿಸು ಕ್ಲಿಕ್ ಮಾಡಿ.
- ಪಿಎನ್ಆರ್ ವಿವರಗಳನ್ನು ಪರಿಶೀಲಿಸಿ ಮತ್ತು ರದ್ದುಗೊಳಿಸಿ ಟಿಕೆಟ್ ಆಯ್ಕೆಯನ್ನು ಕ್ಲಿಕ್ ಮಾಡಿ.
- ಇಲ್ಲಿ ನೀವು ಪುಟದಲ್ಲಿ ಮರುಪಾವತಿ ಮೊತ್ತವನ್ನು ನೋಡುತ್ತೀರಿ. 
ಬುಕಿಂಗ್ ಫಾರ್ಮ್‌ನಲ್ಲಿ ನೀಡಲಾದ ಸಂಖ್ಯೆಯಲ್ಲಿ, ನೀವು ಪಿಎನ್ಆರ್ ಮತ್ತು ಮರುಪಾವತಿಯ ವಿವರಗಳನ್ನು ಒಳಗೊಂಡಿರುವ ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News