Indian Railways Rule: ಈಗ ನೀವು ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಬಹುದು, ಹೇಗೆ ಗೊತ್ತಾ!

Platform Ticket Rules: ನೀವು ಇನ್ನು ಮುಂದೆ ಟಿಕೆಟ್ ಕಾಯ್ದಿರಿಸದೆಯೇ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ.  ರೈಲ್ವೆಯು ಪ್ರಯಾಣಿಕರಿಗಾಗಿ ವಿಶೇಷ ನಿಯಮಗಳನ್ನು ಮಾಡಿದೆ. ಅದರ ಬಗ್ಗೆ  ಇಲ್ಲಿದೆ ವಿವರ...  

Written by - Yashaswini V | Last Updated : Jun 4, 2022, 10:26 AM IST
  • ನೀವೂ ಸಹ ರೈಲ್ವೇ ಪ್ರಯಾಣಿಕರಾಗಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದೆ.
  • ಕೆಲವು ಕಾರಣಗಳಿಂದ ನೀವು ಇದ್ದಕ್ಕಿದ್ದಂತೆ ರೈಲಿನಲ್ಲಿ ಪ್ರಯಾಣಿಸಬೇಕಾದರೆ, ಈಗ ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ.
  • ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಹೇಗೆ? ಇಲ್ಲಿದೆ ಮಹತ್ವದ ಮಾಹಿತಿ
Indian Railways Rule: ಈಗ ನೀವು ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಬಹುದು, ಹೇಗೆ ಗೊತ್ತಾ! title=
Indian railways rules

ಇಂಡಿಯನ್ ರೈಲ್ವೇಸ್ ನಿಯಮಗಳು:  ಸಾಮಾನ್ಯವಾಗಿ ನಾವು ಯಾರನ್ನಾದರೂ ಬೀಳ್ಕೊಡುವ ಸಲುವಾಗಿ ರೈಲ್ವೆ ನಿಲ್ದಾಣಕ್ಕೆ ಹೋಗುತ್ತೇವೆ. ತುಂಬಾ ಆತ್ಮೀಯರಾಗಿದ್ದರೆ ಪ್ಲಾಟ್‌ಫಾರ್ಮ್ಗೂ ಹೋಗಿ ಅವರನ್ನು ರೈಲು ಹತ್ತಿಸಿ ರೈಲು ಹೊರಡುವವರೆಗೂ ಜೊತೆಗಿದ್ದು ಬರುತ್ತೇವೆ. ಆದರೆ, ಹಲವು ಸಂದರ್ಭಗಳಲ್ಲಿ ಕೆಲವು ಅನಿರೀಕ್ಷಿತ ಕಾರಣಗಳಿಂದ ಕೊನೆ ಗಳಿಗೆಯಲ್ಲಿ ನಾವು ಅವರೊಂದಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಗಬಹುದು. ಆದರೆ, ರೈಲು ಹೊರಡುವಾಗ ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಹೇಗೆ? ನಿಮಗೂ ಇಂತಹ ಸನ್ನಿವೇಶ ಎದುರಾದರೆ ಈಗ ನೀವು ಚಿಂತಿಸುವ ಅಗತ್ಯವಿಲ್ಲ. ಈಗ ನೀವು ಮೀಸಲಾತಿ ಟಿಕೆಟ್ ಇಲ್ಲದೆಯೂ ರೈಲಿನಲ್ಲಿ ಪ್ರಯಾಣಿಸಬಹುದು.

ವಾಸ್ತವವಾಗಿ,  ಈ ಮೊದಲು ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳು ಅಂತಹ ಸಮಯಗಳಿಗೆ ಏಕೈಕ ಬೆಂಬಲವಾಗಿತ್ತು, ಆದರೆ ಅದರಲ್ಲಿ ಟಿಕೆಟ್ಗಳನ್ನು ಪಡೆಯುವುದು ಸುಲಭವಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ರೈಲ್ವೆ ನಿಮಗೆ ವಿಶೇಷ ಸೌಲಭ್ಯವನ್ನು ನೀಡುತ್ತಿದೆ. ಅದರ ಅಡಿಯಲ್ಲಿ ನೀವು ಈಗ ಮೀಸಲಾತಿ ಟಿಕೆಟ್ ಇಲ್ಲದೆಯೂ ರೈಲಿನಲ್ಲಿ ಪ್ರಯಾಣಿಸಬಹುದು. ನೀವು ಯಾವ ಸಂದರ್ಭದಲ್ಲಿ ಮತ್ತು ಹೇಗೆ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಬಹುದು ಎಂದು ತಿಳಿಯಲು ಮುಂದೆ ಓದಿ...

ಇದನ್ನೂ ಓದಿ- Honda ಕಾರು ಖರೀದಿಸುವವರಿಗೆ ಗುಡ್ ನ್ಯೂಸ್ , ಎಲ್ಲಾ ಮಾದರಿಗಳ ಮೇಲೆ ಸಿಗುತ್ತಿದೆ ಭಾರೀ ಡಿಸ್ಕೌಂಟ್

ಪ್ಲಾಟ್‌ಫಾರ್ಮ್ ಟಿಕೆಟ್‌ನಲ್ಲಿ ಪ್ರಯಾಣ 
ನೀವು ಆಕಸ್ಮಿಕವಾಗಿ ಎಲ್ಲಾದರೂ ಪ್ರಯಾಣಿಸಬೇಕಾದರೆ ಅದಕ್ಕಾಗಿ ರೈಲ್ವೆ ರಿಸರ್ವೇಶನ್ ಟಿಕೆಟ್ ಇಲ್ಲದಿದ್ದರೂ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್‌ನಲ್ಲಿಯೂ ಪ್ರಯಾಣಿಸಬಹುದು. ಹೌದು, ನಿಮ್ಮ ಬಳಿ ಮೀಸಲಾತಿ ಟಿಕೆಟ್ ಇಲ್ಲದಿದ್ದರೆ ಮತ್ತು ನೀವು ಅನಿರೀಕ್ಷಿತವಾಗಿ ಎಲ್ಲಾದರು ಪ್ರಯಾಣಿಸಬೇಕಾದರೆ ಅಂತಹ ಸಂದರ್ಭದಲ್ಲಿ ನೀವು ಕೇವಲ ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಂಡು ರೈಲು ಹತ್ತಬಹುದು. ಬಳಿಕ ನೀವು ಟಿಕೆಟ್ ಪರೀಕ್ಷಕರ ಬಳಿ ಹೋಗಿ ನಿಮ್ಮ ಗಮ್ಯಸ್ಥಾನಕ್ಕೆ ನಿಗದಿತ ಟಿಕೆಟ್ ಮೊತ್ತವನ್ನು ನೀಡಿ ಟಿಕೆಟ್ ಪಡೆಯಬಹುದು. ಪ್ರಯಾಣಿಕರ ಅನುಕೂಲಕ್ಕಾಗಿ, ರೈಲ್ವೆ ಈ ನಿಯಮವನ್ನು ಮಾಡಿದೆ. ಆದರೆ ಪ್ಲಾಟ್‌ಫಾರ್ಮ್ ಟಿಕೆಟ್ ತೆಗೆದುಕೊಂಡು ರೈಲು ಹತ್ತಿದ ಬಳಿಕ ನೀವು ತಕ್ಷಣ ಟಿಟಿಇಯನ್ನು ಸಂಪರ್ಕಿಸಿ ಟಿಕೆಟ್ ಪಡೆಯಬೇಕು ಎಂಬುದನ್ನು ನೆನಪಿನಲ್ಲಿಡಿ. 

ಸೀಟ್ ಖಾಲಿ ಇಲ್ಲದಿದ್ದರೂ ಒಂದು ಆಯ್ಕೆ ಇದೆ:
ತುರ್ತು ಸಂದರ್ಭಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಪಡೆದು ರೈಲು ಹತ್ತಿ ನಂತರ ಟಿಕೆಟ್ ಪಡೆದು ಪ್ರಯಾಣಿಸಬಹುದು. ಆದರೆ, ಸೀಟ್ ಸಿಗುವುದು ಅಷ್ಟು ಸುಲಭವಲ್ಲ. ಹಲವು ವೇಳೆ ಮೊದಲೇ ಟಿಕೆಟ್ ಬುಕ್ ಮಾಡಿದಾಗಲೂ ಮೀಸಲಾಟಿ ಆಸನ ಸಿಗದೆ ಪ್ರಯಾಣಿಸಬೇಕಾಗುತ್ತದೆ. ಅಂತಹ ಸನ್ನಿವೇಶದಲ್ಲಿ ತುರ್ತಾಗಿ ಟಿಕೆಟ್ ಪಡೆದಾಗ ಸೀಟ್ ಸಿಗದೇ ಇರಬಹುದು. ರೈಲ್ವೇ ನಿಯಮಗಳ ಪ್ರಕಾರ, ರೈಲಿನಲ್ಲಿ ಸೀಟು ಖಾಲಿ ಇಲ್ಲದಿದ್ದರೆ, ಟಿಟಿಇ ನಿಮಗೆ ಮೀಸಲು ಆಸನವನ್ನು ನೀಡಲು ನಿರಾಕರಿಸಬಹುದು, ಆದರೆ ನಿಮ್ಮ ಪ್ರಯಾಣವನ್ನು ತಡೆಯಲು ಸಾಧ್ಯವಿಲ್ಲ. ಒಂದೊಮ್ಮೆ ನೀವು ಮೀಸಲಾತಿ ಆಸನ ಪಡೆಯದ ಕಾರಣ ನಿಮ್ಮ ಪ್ರಯಾಣವನ್ನು ಮುಂದುವರೆಸಲು ಬಯಸದಿದ್ದರೆ, ಕೇವಲ 250 ರೂ.ಗಳ ದಂಡದ ಶುಲ್ಕದೊಂದಿಗೆ, ನಿಮ್ಮ ಗಮ್ಯಸ್ಥಾನಕ್ಕಾಗಿ ಟಿಟಿಯಿಂದ ಪಡೆದ ಟಿಕೆಟ್ ಅನ್ನು ನೀವು ಕ್ಯಾನ್ಸಲ್ ಮಾಡಬಹುದು. ಇದಕ್ಕಾಗಿ, ನೀವು ತೆಗೆದುಕೊಂಡ ಟಿಕೆಟ್‌ನ ವೆಚ್ಚವನ್ನು ಕಡಿತಗೊಳಿಸಿದ ನಂತರ ಉಳಿದ ಹಣವನ್ನು ಮರಳಿಸಲಾಗುತ್ತದೆ.

ಇದನ್ನೂ ಓದಿ- LPG Gas Subsidy: ನಿಮ್ಮ ಖಾತೆಗೆ ಬರುತ್ತಿದೆಯೇ ಗ್ಯಾಸ್ ಸಿಲಿಂಡರ್ ಸಬ್ಸಿಡಿ ? ಸುಲಭವಾಗಿ ಹೀಗೆ ತಿಳಿದುಕೊಳ್ಳಿ

ಪ್ಲಾಟ್‌ಫಾರ್ಮ್ ಟಿಕೆಟ್ ನಿಯಮಗಳು :
ಪ್ಲಾಟ್‌ಫಾರ್ಮ್ ಟಿಕೆಟ್ ನಿಮಗೆ ರೈಲ್ವೆ ಪ್ಲಾಟ್‌ಫಾರ್ಮ್‌ಗೆ ಹೋಗಲು ಮಾತ್ರವಲ್ಲ, ರೈಲು ಹತ್ತಲು ಸಹ ಅರ್ಹವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ವಿಶೇಷವೆಂದರೆ ನೀವು ರೈಲು ಹತ್ತಿದ ನಂತರ ನೀವು ಪ್ರಯಾಣಿಸಲು ಬಯಸುವ ಅದೇ ಕ್ಲಾಸ್ (ಸ್ಲೀಪರ್, ಎಸಿ) ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ.  

ಇದಲ್ಲದೆ, ಯಾವುದೇ ಕಾರಣದಿಂದ ನಿಮ್ಮ ರೈಲು ತಪ್ಪಿಹೋದರೆ, ಮುಂದಿನ ಎರಡು ನಿಲ್ದಾಣಗಳವರೆಗೆ ಟಿಟಿಇ ನಿಮ್ಮ ಆಸನವನ್ನು ಯಾರಿಗೂ ನೀಡಲು ಸಾಧ್ಯವಿಲ್ಲ ಎಂದು ನೀವು ತಿಳಿದಿರಬೇಕು. ಮುಂದಿನ ಎರಡು ನಿಲ್ದಾಣಗಳವರೆಗೆ ರೈಲು ಹಿಡಿಯಲು ನಿಮಗೆ ಅವಕಾಶವಿದ್ದರೆ ನೀವು ಮುಂದಿನ ನಿಲ್ದಾಣಕ್ಕೆ ಹೋಗಿ ರೈಲು ಹತ್ತಬಹುದು. ಆದರೆ ಎರಡು ನಿಲ್ದಾಣಗಳ ಒಳಗೆ ಬಂದು ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದಿದ್ದರೆ ನಂತರ ಟಿಟಿಇ RAC ಟಿಕೆಟ್‌ನೊಂದಿಗೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಈ ಆಸನವನ್ನು ನೀಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News