ಭಾರತೀಯ ರೈಲ್ವೆಯ ಪ್ರಯಾಣದ ನಿಯಮಗಳು: ಇಂದಿಗೂ ಸಹ, ದೂರದ ಪ್ರಯಾಣವನ್ನು ಬಯಸಿದರೆ ರೈಲು ಪ್ರಯಾಣಕ್ಕೆ ಆದ್ಯತೆ ನೀಡಲಾಗುತ್ತದೆ. ರೈಲು ಪ್ರಯಾಣ ಆರಾಮದಾಯಕ ಮತ್ತು ಸುರಕ್ಷಿತವಾಗಿರುವುದೇ ಇದಕ್ಕೆ ಕಾರಣ. ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಸುವವರು ರೈಲ್ವೆಯ ನಿಯಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿರಬೇಕು. ರೈಲ್ವೆ ಮಂಡಳಿಯು ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ರೂಪಿಸುತ್ತದೆ ಮತ್ತು ಅವುಗಳನ್ನು ಜಾರಿಗೊಳಿಸುತ್ತದೆ. ಈ ನಿಯಮಗಳನ್ನು ಕಾಲಕಾಲಕ್ಕೆ ಅಗತ್ಯಕ್ಕೆ ಅನುಗುಣವಾಗಿ ಬದಲಾಯಿಸಲಾಗುತ್ತದೆ. ಯಾವ ಸಮಯದಲ್ಲಿ ಬೇರೆ ಯಾವುದೇ ಪ್ರಯಾಣಿಕರು ನಿಮ್ಮ ಆಸನದ ಮೇಲೆ ಕುಳಿತುಕೊಳ್ಳಬಾರದು ಎಂಬ ರೈಲ್ವೆ ನಿಯಮದ ಬಗ್ಗೆ ನಿಮಗೆ ತಿಳಿದಿದೆಯೇ?
ಥರ್ಡ್ ಎಸಿ ಅಥವಾ ಸ್ಲೀಪರ್‌ನಲ್ಲಿ ಸಮಸ್ಯೆ ಇದೆ:
ಸಾಮಾನ್ಯವಾಗಿ ರೈಲಿನ ಎಸಿ ಥರ್ಡ್ ಕ್ಲಾಸ್ ಅಥವಾ ಸ್ಲೀಪರ್‌ನಲ್ಲಿ ಪ್ರಯಾಣಿಸುವಾಗ, ಮಧ್ಯಮ ಬರ್ತ್‌ನ ಪ್ರಯಾಣಿಕರಿಗೆ ದೊಡ್ಡ ಸಮಸ್ಯೆ ಎಂದರೆ ಬೇಕೆಂದಾಗ ಕೂರಲು ಅಥವಾ ಮಲಗಲು ಸಮಸ್ಯೆ. ಕೆಳಗಿನ ಬರ್ತ್‌ನ ಪ್ರಯಾಣಿಕರು ತಡರಾತ್ರಿಯವರೆಗೆ ಕುಳಿತಿದ್ದರೆ ಆಗ ಮಲಗಲು ಸಮಸ್ಯೆ ಕಂಡುಬರುತ್ತದೆ, ಆದ್ದರಿಂದ ಮಧ್ಯದ ಬರ್ತ್‌ನ ಪ್ರಯಾಣಿಕರು ವಿಶ್ರಾಂತಿ ಪಡೆಯಲು ತೊಂದರೆ ಆಗುತ್ತದೆ. ಇಲ್ಲವೇ ಹಲವು ಬಾರಿ ಮಧ್ಯದ ಬರ್ತ್‌ನ ಪ್ರಯಾಣಿಕರು ತಡರಾತ್ರಿಯವರೆಗೂ ಕೆಳಗಿನ ಬರ್ತ್‌ನಲ್ಲಿಯೇ ಕುಳಿತುಕೊಳ್ಳುತ್ತಾರೆ, ಇದರಿಂದಾಗಿ ಕೆಳಗಿನ ಬರ್ತ್‌ನ ಪ್ರಯಾಣಿಕರಿಗೆ ಮಲಗಲು ತೊಂದರೆಯಾಗುತ್ತದೆ. ಈ ತೊಂದರೆಗೆ ಪರಿಹಾರ ನೀಡಲು ರೈಲ್ವೆ ನಿಯಮವನ್ನು ರೂಪಿಸಿದೆ.
24 ಗಂಟೆಗಳಲ್ಲಿ ಈ 8 ಗಂಟೆಗಳು ಮುಖ್ಯ:
ರೈಲ್ವೆ ನಿಯಮಗಳ ಪ್ರಕಾರ, ನೀವು ಮಧ್ಯದ ಬರ್ತ್ ಅನ್ನು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ತೆರೆಯಬಹುದು. ಅಂದರೆ, ನೀವು ಲೋವರ್ ಬರ್ತ್ ಹೊಂದಿದ್ದರೆ, ರಾತ್ರಿ 10 ಗಂಟೆಯ ನಂತರ, ಮಧ್ಯಮ ಬರ್ತ್ ಅಥವಾ ಮೇಲಿನ ಬರ್ತ್ ಪ್ರಯಾಣಿಕರು ನಿಮ್ಮ ಸೀಟಿನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ರೈಲ್ವೆ ನಿಯಮಗಳನ್ನು ಉಲ್ಲೇಖಿಸುವ ಮೂಲಕ ನೀವು ಅವರ ಆಸನಕ್ಕೆ ಹೋಗಲು ಅವರನ್ನು ಕೇಳಬಹುದು. ಇದಲ್ಲದೆ, ಮಧ್ಯದ ಬರ್ತ್ ಹೊಂದಿರುವ ಪ್ರಯಾಣಿಕರು ಹಗಲಿನಲ್ಲಿ ತನ್ನ ಆಸನವನ್ನು ತೆರೆದರೂ, ನೀವು ಈ ಸಂದರ್ಭದಲ್ಲಿಯೂ ಸಹ ರೈಲ್ವೆ ನಿಯಮಗಳನ್ನು ಹೇಳುವ ಮೂಲಕ ಇದನ್ನು ನಿರಾಕರಿಸಬಹುದು.
ಇದನ್ನೂ ಓದಿ- Indian Railways: ಚಾರ್ಟ್ ಸಿದ್ಧಪಡಿಸಿದ ನಂತರವೂ ಕ್ಯಾನ್ಸಲ್ ರೈಲ್ವೆ ಟಿಕೆಟ್‌ಗೆ ಸಿಗುತ್ತೆ ರೀಫಂಡ್
ಈ ಸಮಯದಲ್ಲಿ ಟಿಟಿಇಗೆ ಟಿಕೆಟ್ ಪರಿಶೀಲಿಸುವ ಹಕ್ಕು ಇಲ್ಲ:
ಸಾಮಾನ್ಯವಾಗಿ ಪ್ರಯಾಣಿಕರು ಮಲಗಿದ ನಂತರ ಟಿಟಿಇ ಟಿಕೆಟ್ ಪರಿಶೀಲಿಸಲು ಬರುತ್ತಾರೆ ಎಂದು ಹಲವು ಪ್ರಯಾಣಿಕರು ದೂರುತ್ತಾರೆ. ಇದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ರೈಲ್ವೇ ಮ್ಯಾನುಯಲ್ ಪ್ರಕಾರ, ಟಿಟಿಇ ಪ್ರಯಾಣಿಕರು ಮಲಗುವ ಸಮಯದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಟಿಕೆಟ್ ಪರಿಶೀಲಿಸುವಂತಿಲ್ಲ. ಆದರೆ ನಿಮ್ಮ ಪ್ರಯಾಣವು ರಾತ್ರಿ 10 ಗಂಟೆಯ ನಂತರ ಪ್ರಾರಂಭವಾದರೆ, ಈ ರೈಲ್ವೆ ನಿಯಮವು ಅನ್ವಯಿಸುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ರಾತ್ರಿ 10 ಗಂಟೆಯ ನಂತರ ಟಿಟಿಇ ತಪಾಸಣೆಯನ್ನೂ ಮಾಡಬಹುದು.
ದೊಡ್ಡ ಧ್ವನಿಯಲ್ಲಿ ಹಾಡುಗಳನ್ನು ಕೇಳುವುದನ್ನು ನಿಷೇಧಿಸಲಾಗಿದೆ:
ರಾತ್ರಿ ವೇಳೆ ಸಹ ಪ್ರಯಾಣಿಕರು ಮೊಬೈಲ್‌ನಲ್ಲಿ ಗಟ್ಟಿ ಧ್ವನಿಯಲ್ಲಿ ಹಾಡುಗಳನ್ನು ಕೇಳುವುದು ಅಥವಾ ವೀಡಿಯೊಗಳನ್ನು ವೀಕ್ಷಿಸುವ ಬಗ್ಗೆ ಪ್ರಯಾಣಿಕರು ಆಗಾಗ್ಗೆ ರೈಲ್ವೆ ಮಂಡಳಿಗೆ ದೂರು ನೀಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆಯು ರಾತ್ರಿ 10 ಗಂಟೆಯ ನಂತರ ಇಯರ್‌ಫೋನ್ ಇಲ್ಲದೆ ಹಾಡುಗಳನ್ನು ಕೇಳುವುದನ್ನು ಅಥವಾ ವೀಡಿಯೊಗಳನ್ನು ವೀಕ್ಷಿಸುವುದನ್ನು ನಿಷೇಧಿಸಿದೆ. ನಿಯಮಗಳ ಪ್ರಕಾರ, ರಾತ್ರಿ 10 ಗಂಟೆಯ ನಂತರ ಇಯರ್ ಫೋನ್ ಇಲ್ಲದೆ ಹಾಡುಗಳನ್ನು ಕೇಳುವಂತಿಲ್ಲ ಅಥವಾ ವೀಡಿಯೊಗಳನ್ನು ವೀಕ್ಷಿಸುವಂತಿಲ್ಲ.
ಇದನ್ನೂ ಓದಿ- Indian Railways Rules : ರೈಲಿನಲ್ಲಿ ಲೋವರ್ ಬರ್ತ್ ಬೇಕಿದ್ದರೆ ಟಿಕೆಟ್ ಬುಕ್ ಮಾಡುವಾಗ ಈ ನಿಯಮಗಳನ್ನು ಪಾಲಿಸಬೇಕು
ಇಂತಹ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಬಹುದು:
ನಿಮ್ಮ ಸಹ-ಪ್ರಯಾಣಿಕರು ನಿಮ್ಮ ಮಾತನ್ನು ಕೇಳದಿದ್ದರೆ, ಇದಕ್ಕಾಗಿ ನೀವು ರೈಲಿನಲ್ಲಿರುವ ರೈಲ್ವೆ ಸಿಬ್ಬಂದಿಗೆ ದೂರು ನೀಡಬಹುದು. ಸ್ಥಳಕ್ಕೆ ಆಗಮಿಸಿ ನಿಮ್ಮ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ರೈಲ್ವೆ ಸಿಬ್ಬಂದಿ ಅವರದ್ದಾಗಿರುತ್ತದೆ. ಆಗಲೂ ಸಹ ಪ್ರಯಾಣಿಕರು ಒಪ್ಪದಿದ್ದರೆ, ರೈಲ್ವೆ ನಿಯಮಗಳ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.