ಈ ತಿಂಗಳಲ್ಲಿ ಎರಡು ಬಾರಿ ಸಿಗಲಿದೆ ಉಚಿತ ರೇಷನ್ ! ಲಾಭ ಪಡೆಯುವುದು ಹೇಗೆ?

Ration Card News:ಇದೀಗ ಮೇ ತಿಂಗಳಲ್ಲಿ ಕಾರ್ಡ್ ದಾರರಿಗೆ ಎರಡು ಬಾರಿ ಪಡಿತರ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಬಡ ಕುಟುಂಬಗಳಿಗೆ ಸಾಕಷ್ಟು ಸಹಾಯವಾಗುತ್ತದೆ. 

Written by - Ranjitha R K | Last Updated : May 5, 2023, 11:25 AM IST
  • ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿ.
  • ಮೇ ತಿಂಗಳಲ್ಲಿ ಡಬಲ್ ಪಡಿತರ ಸಿಗಲಿದೆ.
  • ಡಬಲ್ ಪಡಿತರ ಪಡೆಯುವುದು ಹೇಗೆ ?
ಈ  ತಿಂಗಳಲ್ಲಿ ಎರಡು ಬಾರಿ ಸಿಗಲಿದೆ ಉಚಿತ ರೇಷನ್ !  ಲಾಭ ಪಡೆಯುವುದು ಹೇಗೆ?  title=

Ration Card News : ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿ. ಸರ್ಕಾರ ನೀಡುವ ಪಡಿತರದ ಲಾಭವನ್ನು ನೀವೂ ಪಡೆಯುತ್ತಿದ್ದರೆ ಮೇ ತಿಂಗಳಲ್ಲಿ ಡಬಲ್ ಪಡಿತರ ಸಿಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ ಮೇ ತಿಂಗಳಲ್ಲಿ ಕಾರ್ಡ್ ದಾರರಿಗೆ ಎರಡು ಬಾರಿ ಪಡಿತರ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಬಡ ಕುಟುಂಬಗಳಿಗೆ ಸಾಕಷ್ಟು ಸಹಾಯವಾಗುತ್ತದೆ. 

ಡಬಲ್ ಪಡಿತರ ಪಡೆಯುವುದು ಹೇಗೆ ? : 
ಈ ಬಗ್ಗೆ ಮಾಹಿತಿ ನೀಡಿದ ಹರಿಯಾಣ ಸರ್ಕಾರ ಇದುವರೆಗೆ ಏಪ್ರಿಲ್ ತಿಂಗಳ ಪಡಿತರವನ್ನು ಬಡ ಕುಟುಂಬಗಳಿಗೆ ನೀಡಿರಲಿಲ್ಲ.   ಇದರಿಂದ ಬಡವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಏಪ್ರಿಲ್ ಮತ್ತು ಮೇ ಎರಡು ತಿಂಗಳ ಪಡಿತರವನ್ನು ಮೇ ತಿಂಗಳಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ. 

ಇದನ್ನೂ ಓದಿ : ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದುಬಾರಿಯಾಗಿರುವುದು ಚಿನ್ನ ! ಹೊಸ ದಾಖಲೆ ಬರೆದ ಹಳದಿ ಲೋಹ

ರಾಜ್ಯ ಸರ್ಕಾರ ಹೊರಡಿಸಿದ ಸೂಚನೆಗಳು : 
ರಾಜ್ಯ ಸರ್ಕಾರ ಹೊರಡಿಸಿದ ಸೂಚನೆಗಳ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಪಡಿತರ ಪ್ರಯೋಜನವನ್ನು ಪಡೆಯದ ಎಲ್ಲಾ ಫಲಾನುಭವಿಗಳಿಗೆ ಈ ತಿಂಗಳಲ್ಲಿ ಡಬಲ್ ಪಡಿತರ ಸಿಗುತ್ತದೆ. ಇದೇ ವೇಳೆ ಏಪ್ರಿಲ್ ತಿಂಗಳ ಪಡಿತರ ದಾಸ್ತಾನು ಕೂಡಾ ಪಡಿತರ ಡಿಪೋಗೆ ಬಂದಿದೆ. ಆದರೆ ಬಿಪಿಎಲ್ ಮತ್ತು ಎಎವೈ ಕಾರ್ಡ್ ಹೊಂದಿರುವವರಿಗೆ ಮಾತ್ರ ಇದರ ಲಾಭ ಸಿಗಲಿದೆ. 

ಮೇ 8 ರವರೆಗೆ ಪಡಿತರ ಲಭ್ಯ : 
ಹರಿಯಾಣದ ಪಡಿತರ ಚೀಟಿದಾರರು ಏಪ್ರಿಲ್ ತಿಂಗಳ ಪಡಿತರವನ್ನು ಮೇ 8 ರವರೆಗೆ ಪಡೆಯಬಹುದು. ಆಹಾರ ಮತ್ತು ಸರಬರಾಜು ಇಲಾಖೆಯಿಂದ ಆದೇಶ ಹೊರಡಿಸಿದ ನಂತರ ಡಿಪೋದಾರರು ಮತ್ತು ಗ್ರಾಹಕರು  ನಿಟ್ಟುಸಿರು ಬಿಡುವಂತಾಗಿದೆ. ಪಡಿತರ ವಿತರಣೆ ವಿಳಂಬಕ್ಕೆ ಪಡಿತರ ಡಿಪೋದಾರರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಪಡಿತರ ವಿತರಣೆಯ ಅವಧಿಯನ್ನು ಇಲಾಖೆ ವಿಸ್ತರಿಸಿದೆ.

ಇದನ್ನೂ ಓದಿ : ಆಧಾರ್ ಜೊತೆ ನಿಮ್ಮ ಮೊಬೈಲ್ ನಂಬರ್, ಇ-ಮೇಲ್ ಲಿಂಕ್ ಆಗಿದ್ಯಾ? ಈ ರೀತಿ ಚೆಕ್ ಮಾಡಿ

ಪಡಿತರ ದೊರೆಯದ ಕಾರಣ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಲಾಖೆಯಿಂದ ಪಡಿತರ ದೊರೆಯದ ಕಾರಣ ಕಾರ್ಡ್ ದಾರರಿಗೆ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಡಿಪೋದಾರರು ಮಾಹಿತಿ ನೀಡಿದ್ದಾರೆ. ಕಳೆದ ವಾರ ಆಹಾರ ಮತ್ತು ಸರಬರಾಜು ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಜ್ಞಾಪಕ ಪತ್ರ ನೀಡುವ ಮೂಲಕ ಪಡಿತರ ವಿತರಣೆ ಅವಧಿಯನ್ನು ವಿಸ್ತರಿಸುವಂತೆ ಒತ್ತಾಯಿಸಲಾಗಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News