ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದುಬಾರಿಯಾಗಿರುವುದು ಚಿನ್ನ ! ಹೊಸ ದಾಖಲೆ ಬರೆದ ಹಳದಿ ಲೋಹ

Gold Price in India:ಚಿನ್ನದ ಬೆಲೆ ದಾಖಲೆಯ ಮಟ್ಟ ತಲುಪಿದೆ. ಈ ಮೂಲಕ ಚಿನ್ನದ ಬೆಲೆ ಇದೀಗ 10 ಗ್ರಾಂಗೆ 62,000 ರೂ. ಆಗಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

Written by - Ranjitha R K | Last Updated : May 5, 2023, 10:03 AM IST
  • ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
  • ಇತಿಹಾಸದಲ್ಲಿ ಇದೇ ಮೊದಲು ಇಷ್ಟು ಏರಿಕೆ ಕಂಡಿರುವುದು
  • ಇಂದಿನ ದರ ಎಷ್ಟಿದೆ ಚೆಕ್ ಮಾಡಿಕೊಳ್ಳಿ
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದುಬಾರಿಯಾಗಿರುವುದು ಚಿನ್ನ ! ಹೊಸ ದಾಖಲೆ ಬರೆದ ಹಳದಿ ಲೋಹ title=

Gold Price in India : ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಚಿನ್ನದ ಬೆಲೆ ಐತಿಹಾಸಿಕ ಮಟ್ಟಕ್ಕೆ ತಲುಪಿದೆ. ಚಿನ್ನದ ಬೆಲೆಯಲ್ಲಿ ಭಾರೀ ಜಿಗಿತ ಕಂಡುಬಂದಿದೆ. ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ 900 ರೂ.ಗೂ ಅಧಿಕ ಏರಿಕೆ ಕಂಡು ಬಂದಿದ್ದು, ಚಿನ್ನದ ಬೆಲೆ ದಾಖಲೆಯ ಮಟ್ಟ ತಲುಪಿದೆ. ಈ ಮೂಲಕ ಚಿನ್ನದ ಬೆಲೆ ಇದೀಗ 10 ಗ್ರಾಂ.ಗೆ 62,000 ರೂ. ಆಗಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಚಿನ್ನದ ಬೆಲೆ : 
ಜಾಗತಿಕ ಮಾರುಕಟ್ಟೆಯ ಪ್ರಬಲ ಪ್ರವೃತ್ತಿಯ ನಡುವೆ ಗುರುವಾರ, ಚಿನ್ನದ ಬೆಲೆ 900 ರೂ.ಗಿಂತ ಹೆಚ್ಚು ಏರಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ 940 ರೂಪಾಯಿ ಏರಿಕೆಯಾಗುವ ಮೂಲಕ 10 ಹ್ಗ್ರಂ ಚಿನ್ನದ ಬೆಲೆ 62 ಸಾವಿರ ರೂಪಾಯಿ ದಾಟಿದೆ. ಪ್ರತಿ 10 ಗ್ರಾಂ ಚಿನ್ನದ ಬೆಲೆ ಈಗ 62,020 ರೂ. ಆಗಿದೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಈ ಮಾಹಿತಿಯನ್ನು ನೀಡಿದೆ. ಕಳೆದ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 61,080 ರೂ.ನಷ್ಟಾಗಿತ್ತು . 

ಇದನ್ನೂ ಓದಿ : ಆಧಾರ್ ಜೊತೆ ನಿಮ್ಮ ಮೊಬೈಲ್ ನಂಬರ್, ಇ-ಮೇಲ್ ಲಿಂಕ್ ಆಗಿದ್ಯಾ? ಈ ರೀತಿ ಚೆಕ್ ಮಾಡಿ

ಇನ್ನು ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ  660 ರೂಪಾಯಿಯಷ್ಟು ಏರಿಕೆಯಾಗಿದೆ. ಈ ಏರಿಕೆಯೊಂದಿಗೆ ಇದೀಗ ಬೆಳ್ಳಿಯ ಬೆಲೆ ಕೆಜಿಗೆ 76,700 ರೂ.ಗೆ ತಲುಪಿದೆ. 

ವಿದೇಶಿ ಮಾರುಕಟ್ಟೆಯಲ್ಲೂ ಏರಿಕೆ  : 
ವಿದೇಶಿ ಮಾರುಕಟ್ಟೆಯಲ್ಲಿ  ಚಿನ್ನ  ಪ್ರತಿ ಔನ್ಸ್‌ಗೆ 2,039.50 ಡಾಲರ್‌ಗೆ ಏರಿಕೆ ಕಂಡರೆ, ಬೆಳ್ಳಿ ಔನ್ಸ್‌ಗೆ 25.50 ಡಾಲರ್‌ಗೆ ಏರಿಕೆಯಾಗಿದೆ. ಸ್ಟ್ಯಾಂಡರ್ಡ್ ಬಡ್ಡಿ ದರದಲ್ಲಿ ಇತ್ತೀಚಿನ 25 ಬೇಸಿಸ್ ಪಾಯಿಂಟ್‌ಗಳ (ತ್ರೈಮಾಸಿಕ) ಹೆಚ್ಚಳದ ನಂತರ ಯುಎಸ್ ಫೆಡರಲ್ ರಿಸರ್ವ್ ತನ್ನ ಮುಂದಿನ ಸಭೆಯಿಂದ ಬಿಗಿಯಾದ ವಿತ್ತೀಯ ನೀತಿಯನ್ನು ತಡೆಹಿಡಿಯಬಹುದು ಎಂಬ ಸಂಕೇತಗಳಿವೆ. ಗುರುವಾರ ಏಷ್ಯನ್ ವಹಿವಾಟಿನ ಸಮಯದಲ್ಲಿ ಡಾಲರ್ ಮತ್ತು ಬಾಂಡ್ ಮೌಲ್ಯದಲ್ಲಿ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ  ಬಂಗಾರದ ಬೆಲೆ ಇಷ್ಟು ಏರಿಕೆ ಕಂಡಿದೆ. 

 

Trending News