ಆಧಾರ್ ಜೊತೆ ನಿಮ್ಮ ಮೊಬೈಲ್ ನಂಬರ್, ಇ-ಮೇಲ್ ಲಿಂಕ್ ಆಗಿದ್ಯಾ? ಈ ರೀತಿ ಚೆಕ್ ಮಾಡಿ

Aadhaar Mobile Number Verify: ನಿಮ್ಮ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ, ಇಮೇಲ್ ಐಡಿಗೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂದು ನೀವು ಚಿಂತಿಸುತ್ತಿದ್ದರೆ ನಿಮಗಾಗಿ ಯುಐಡಿಎಐ ಇದಕ್ಕಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ನೀವು ಕುಳಿತಲ್ಲಿಯೇ ಕೆಲವು ಸುಲಭ ಹಂತಗಳನ್ನು ಅನುಸರಿಸಿ,  ಆಧಾರ್‌ಗೆ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಲಿಂಕ್ ಆಗಿದ್ಯಾ ಅಥವಾ ಇಲ್ಲವಾ ಎಂದು ಪರಿಶೀಲಿಸಬಹುದು.

Written by - Yashaswini V | Last Updated : May 5, 2023, 08:58 AM IST
  • ಆಧಾರ್ ಬಳಕೆದಾರರು ಯುಐಡಿಎಐ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇಲ್ಲವೇ mAadhaar ಅಪ್ಲಿಕೇಶನ್‌ನಲ್ಲಿ 'ವೆರಿಫೈ ಇಮೇಲ್/ಮೊಬೈಲ್ ಸಂಖ್ಯೆ' ವೈಶಿಷ್ಟ್ಯದ ಅಡಿಯಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
  • ಈ ಹೊಸ ವೈಶಿಷ್ಟ್ಯದ ಸೌಲಭ್ಯವನ್ನು ಬಳಸಿಕೊಂಡು ನೀವು ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿ ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆಯೇ, ಇಲ್ಲವೇ ಎಂಬುಯದನ್ನು ಪರಿಶೀಲಿಸಬಹುದಾಗಿದೆ.
ಆಧಾರ್ ಜೊತೆ ನಿಮ್ಮ ಮೊಬೈಲ್ ನಂಬರ್, ಇ-ಮೇಲ್ ಲಿಂಕ್ ಆಗಿದ್ಯಾ? ಈ ರೀತಿ ಚೆಕ್ ಮಾಡಿ  title=
Aadhaar Mobile Number Link

Step By Step Process To Check Aadhaar Mobile Number Verify: ಪ್ರತಿ ಭಾರತೀಯ ನಾಗರೀಕರಿಗೆ ಪ್ರಮುಖ ದಾಖಲೆಯಾಗಿರುವ ಆಧಾರ್ ಕಾರ್ಡ್ ಅನ್ನು ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಗೆ ಲಿಂಕ್ ಮಾಡುವುದು ಕೂಡ ತುಂಬಾ ಅತ್ಯಗತ್ಯ. ಬಳಕೆದಾರರ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಆಧಾರ್‌ಗೆ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಲು ಆಧಾರ್ ಬಳಕೆದಾರರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಅವಕಾಶ ಕಲ್ಪಿಸಿದೆ. 

ವಾಸ್ತವವಾಗಿ, ಯಾವುದೇ ರೀತಿಯ ಆಧಾರ್ ವೆರಿಫಿಕೇಶನ್ ಮಾಡಿದಾಗ ಬಳಕೆದಾರರು ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ, ಇಲ್ಲವೇ ಮೇಲ್ ಐಡಿಯಲ್ಲಿ ವೆರಿಫಿಕೇಶನ್ ಕೋಡ್ ಅನ್ನು ಸ್ವೀಕರಿಸುತ್ತಾರೆ. ಆದರೆ, ನಮ್ಮಲ್ಲಿ ಬಹುತೇಕ ಮಂದಿಗೆ ತಮ್ಮ ಆಧಾರ್ ಕಾರ್ಡ್ ಯಾವ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರಬಹುದು ಎಂಬುದು ಕೂಡ ತಿಳಿದಿರುವುದಿಲ್ಲ. ಬಳಕೆದಾರರಲ್ಲಿ ಇಂತಹ ಆತಂಕವನ್ನು ನಿವಾರಿಸಲು ಯುಐಡಿಎಐ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. 

ಯುಐಡಿಎಐ ಪರಿಚಯಿಸಿರುವ ಹೊಸ ವೈಶಿಷ್ಟ್ಯದ ಸಹಾಯದಿಂದ ನೀವು  ಆಧಾರ್‌ಗೆ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ಪರಿಶೀಲಿಸಬಹುದು ಎಂದು ಐಟಿ ಸಚಿವಾಲಯದ ಮೂಲಗಳು ಮಾಹಿತಿ ಹಂಚಿಕೊಂಡಿವೆ. 

ಇದನ್ನೂ ಓದಿ- ವಿಸ್ತಾರ ಮತ್ತು ಏರ್ ಇಂಡಿಯಾ ಮಧ್ಯೆ ಒಪ್ಪಂದ ! ಯಾತ್ರಿಗಳಿಗೆ ಆಗುವುದು ಭಾರೀ ಲಾಭ

ಲಭ್ಯವಿರುವ ಮಾಹಿತಿಗಳ ಪ್ರಕಾರ, ಆಧಾರ್ ಬಳಕೆದಾರರು ಯುಐಡಿಎಐ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇಲ್ಲವೇ  mAadhaar ಅಪ್ಲಿಕೇಶನ್‌ನಲ್ಲಿ 'ವೆರಿಫೈ ಇಮೇಲ್/ಮೊಬೈಲ್ ಸಂಖ್ಯೆ' ವೈಶಿಷ್ಟ್ಯದ ಅಡಿಯಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಅರ್ಥಾತ್, ಈ ಹೊಸ ವೈಶಿಷ್ಟ್ಯದ ಸೌಲಭ್ಯವನ್ನು ಬಳಸಿಕೊಂಡು ನೀವು ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿ ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆಯೇ, ಇಲ್ಲವೇ ಎಂಬುಯದನ್ನು ಪರಿಶೀಲಿಸಬಹುದಾಗಿದೆ.  

ಅಧಿಕೃತ ವೆಬ್‌ಸೈಟ್‌ನಲ್ಲಿ ಇಲ್ಲವೇ  mAadhaar ಅಪ್ಲಿಕೇಶನ್‌ನಲ್ಲಿ ಲಾಗ್ ಇನ್ ಆಗುವ ಮೂಲಕ ನೀವು ಇದನ್ನು ಪರಿಶೀಲಿಸಬಹುದಾಗಿದೆ. ನೀವು ಈಗಾಗಲೇ ಆಧಾರ್‌ಗೆ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಲಿಂಕ್ ಆಗಿರುವುದನ್ನು ಪರಿಶೀಲಿಸಿದ್ದರೆ,  'ನೀವು ನಮೂದಿಸಿದ ಮೊಬೈಲ್ ಸಂಖ್ಯೆಯನ್ನು ನಮ್ಮ ದಾಖಲೆಗಳಿಂದ ಈಗಾಗಲೇ ಪರಿಶೀಲಿಸಲಾಗಿದೆ' ಎಂಬ ಸಂದೇಶವನ್ನು ಬಳಕೆದಾರರು ಸ್ಕ್ರೀನ್ ಮೇಲೆ ಕಾಣುತ್ತಾರೆ. 

ಒಂದೊಮ್ಮೆ ಆಧಾರ್ ಬಳಕೆದಾರರು ಆಧಾರ್ ರಿಜಿಸ್ಟ್ರೆಶನ್ ಸಮಯದಲ್ಲಿ ನೀಡಲಾದ ಮೊಬೈಲ್ ಸಂಖ್ಯೆಯನ್ನು ಮರೆತಿದ್ದರೆ ಅವರು ನನ್ನ ಆಧಾರ್ ಪೋರ್ಟಲ್ ಅಥವಾ m-Aadhaar ಅಪ್ಲಿಕೇಶನ್‌ನಲ್ಲಿನ ವೆರಿಫೈ ಆಧಾರ್ ವೈಶಿಷ್ಟ್ಯದಲ್ಲಿ ಮೊಬೈಲ್‌ನ ಕೊನೆಯ ಮೂರು ಅಂಕೆಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಇದರ ಸಹಾಯದಿಂದ ಕಂಡು ಹಿಡಿಯಲು ಸಹಾಯಕವಾಗಲಿದೆ. 

ಇದನ್ನೂ ಓದಿ- ಇಂಜಿನ್ ಸಮಸ್ಯೆಗಳ ಕಾರಣದಿಂದ ದಿವಾಳಿಯಾಗುವ ಹಾದಿಯಲ್ಲಿ ಉದ್ಯಮಿ ವಾಡಿಯಾ ಮಾಲಕತ್ವದ ವಿಮಾನಯಾನ ಸಂಸ್ಥೆ

ಇದಲ್ಲದೆ, ಆಧಾರ್ ಕಾರ್ಡ್ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿಯನ್ನು ಆಧಾರ್‌ಗೆ ಲಿಂಕ್ ಮಾಡಲು, ನವೀಕರಿಸಲು ಬಯಸಿದರೆ ಅದಕ್ಕಾಗಿ ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿರುವ ಮೂಲಕ ಈ ಕೆಲಸವನ್ನು ಪೂರ್ಣಗೊಳಿಸಬಹುದಾಗಿದೆ. 

ಆಧಾರ್‌ಗೆ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಲಿಂಕ್ ಆಗಿದೆಯೇ/ಇಲ್ಲವೇ ಎಂದು ಪರಿಶೀಲಿಸಲು ಈ ಹಂತ-ಹಂತದ ಪ್ರಕ್ರಿಯೆಯನ್ನು ಅನುಸರಿಸಿ: 
>> ಮೊದಲಿಗೆ ಯುಐಡಿಎಐನ  ಅಧಿಕೃತ ವೆಬ್‌ಸೈಟ್ https://myaadhaar.uidai.gov.in ಅಥವಾ mAadhaar ಅಪ್ಲಿಕೇಶನ್‌ಗೆ ಭೇಟಿ ನೀಡಿ. 
>> ವೆರಿಫೈ ಇಮೇಲ್/ಮೊಬೈಲ್ ಸಂಖ್ಯೆ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ಈ ಸಮಯದಲ್ಲಿ ಆಧಾರ್ ನೋಂದಣಿಯ ಸಮಯದಲ್ಲಿ ಬಳಸಿದ ಇಮೇಲ್ ಐಡಿ ಅಥವಾ ಫೋನ್ ಸಂಖ್ಯೆಯ ಜೊತೆಗೆ ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ.
>>  ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. Get ಒಟಿಪಿ (One Time Password) ಎಂಬ ಆಯ್ಕೆಯನ್ನು ಆರಿಸಿ.
>> ಆಧಾರ್ ಜೊತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್‌ನಲ್ಲಿ ಒಟಿಪಿ ಬರುತ್ತದೆ. ಈ ಒಟಿಪಿ ಸಂಖ್ಯೆಯನ್ನು ನಿಗದಿತ ಜಾಗದಲ್ಲಿ ನಮೂದಿಸಿ ಮತ್ತು ಚೆಕ್ ಮಾಡಿ. 

ಈ ಹಂತಗಳು ಪೂರ್ಣಗೊಂಡ ನಂತರ ನಿಮ್ಮ ನೋಂದಾಯಿತ  'ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ' ಎಂಬ ಸಂದೇಶವು ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಇದರರ್ಥ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲಾಗಿದೆ ಎಂದು ಇದು ಸೂಚಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News