Puneeth Rajkumar: ಅಪ್ಪನ ಜನ್ಮ ದಿನಕ್ಕೆ ಕೊಡಗಿನಲ್ಲಿ ಹುಣಸೆ ಗಿಡ ನೆಟ್ಟಿದ್ರು ಪುನೀತ್‌!

Puneeth Rajkumar: ಶಿವರಾಜ್‌ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಡೈರೆಕ್ಟರ್ ಶ್ರೀನಿ ಫ್ಯಾಮಿಲಿ ಜೊತೆಗೆ ಕೊಡಗಿಗೆ ಹೋಗಿದ್ದರು. ಈ ವೇಳೆ ಅಲ್ಲಿ ತೆಗೆದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಅಪ್ಪು ಅಭಿಮಾಣಿಗಲ ಸಂತಸಕ್ಕೆ ಕಾರಣವಾಗಿದೆ. ಕೊಡಗಿನಲ್ಲಿ ಶ್ರೀನಿ ಇದ್ದ ರೂಮ್‌ ಪಕದಲ್ಲಿಯೇ ಒಂದು ಮರವಿತ್ತು. 

Written by - Chetana Devarmani | Last Updated : Jan 16, 2023, 01:09 PM IST
  • ಅಪ್ಪನ ಜನ್ಮ ದಿನಕ್ಕೆ ಮರ ನೆಟ್ಟಿದ್ದ ಅಪ್ಪು
  • ಕೊಡಗಿನಲ್ಲಿ ಹುಣಸೆ ಗಿಡ ನೆಟ್ಟಿದ್ರು ಪುನೀತ್
  • ಫೋಟೋ ಹಂಚಿಕೊಂಡ ಡೈರೆಕ್ಟರ್‌ ಶ್ರೀನಿ
Puneeth Rajkumar: ಅಪ್ಪನ ಜನ್ಮ ದಿನಕ್ಕೆ ಕೊಡಗಿನಲ್ಲಿ ಹುಣಸೆ ಗಿಡ ನೆಟ್ಟಿದ್ರು ಪುನೀತ್‌!  title=

Puneeth Rajkumar: ಶಿವರಾಜ್‌ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಡೈರೆಕ್ಟರ್ ಶ್ರೀನಿ ಫ್ಯಾಮಿಲಿ ಜೊತೆಗೆ ಕೊಡಗಿಗೆ ಹೋಗಿದ್ದರು. ಈ ವೇಳೆ ಅಲ್ಲಿ ತೆಗೆದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಅಪ್ಪು ಅಭಿಮಾಣಿಗಲ ಸಂತಸಕ್ಕೆ ಕಾರಣವಾಗಿದೆ. ಕೊಡಗಿನಲ್ಲಿ ಶ್ರೀನಿ ಇದ್ದ ರೂಮ್‌ ಪಕದಲ್ಲಿಯೇ ಒಂದು ಮರವಿತ್ತು. ಅದು ಬಕು ವಿಶೇಷ ಮರ. ಪುನೀತ್ ರಾಜ್​ಕುಮಾರ್ ಎಲ್ಲರ ಮನದಲ್ಲಿ ಸದಾ ನೆಲೆಸಿರುತ್ತಾರೆ. ಅವರ ನೆನಪು ಇಂದಿಗೂ ಎಲ್ಲರನ್ನ ಕಾಡುತ್ತಿದೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವವೇ ಅವರ ಮೇಲಿನ ಈ ಅಭಿಮಾನಕ್ಕೆ ಕಾರಣ. 

ಇದನ್ನೂ ಓದಿ : Rashmika Mandanna: ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ಟ್ರೋಲ್‌ ಆದ ರಶ್ಮಿಕಾ ಮಂದಣ್ಣ.!

ಡೈರೆಕ್ಟರ್ ಶ್ರೀನಿ ಉಳಿದುಕೊಂಡ ರೂಮ್ ಪಕ್ಕದಲ್ಲಿ ಪುನೀತ್ ನೆಟ್ಟ ಮರವಿತ್ತು. ಅಪ್ಪು ಅವರ ತಂದೆ ಡಾ.ರಾಜ್​ ಕುಮಾರ್ ಅವರ 92 ನೇ ಜನ್ಮ ದಿನದ ನೆನಪಿಗೆ ಇಲ್ಲಿ ಮರ ನೆಟ್ಟಿದ್ದರಂತೆ. ಕೊಡಗಿಗೆ ಹೋದಾಗ ಇಲ್ಲಿಯ ರೆಸಾರ್ಟ್​ ಒಂದರಲ್ಲಿ ಮಲಬಾರ್ ಹುಣಸೆ ಗಿಡವನ್ನ ಪುನೀತ್‌ ರಾಜ್‌ ಕುಮಾರ್‌ ನೆಟ್ಟಿದ್ದಾರೆ. ಅಲ್ಲದೇ, ಅದರ ಪಕ್ಕದಲ್ಲಿಯೇ ಒಂದು ಫಲಕವಿದ್ದು ಎಲ್ಲ ಮಾಹಿತಿ ಅದರ ಮೇಲಿದೆ. ಈ ಮರದ ಫೋಟೋ ತೆಗೆದಿರೋ ಶ್ರೀನಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. You are rooted in our memories ಎಂದು ಶೀರ್ಷಿಕೆ ನೀಡಿದ್ದಾರೆ. 

 

 

ಸದ್ಯ ಘೋಸ್ಟ್‌ ಸಿನಿಮಾದ ಎರಡು ಹಂತದ ಚಿತ್ರೀಕರಣ ಮುಗಿದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಘೋಸ್ಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಸಹಜವಾಗಿಯೇ ಎಲ್ಲರ ನಿರೀಕ್ಷೆ ದುಪ್ಪಟ್ಟಾಗಿದೆ. ಬಿಡುವಿನ ವೇಳೆಯಲ್ಲಿ ಡೈರೆಕ್ಟರ್‌ ಶ್ರೀನಿ ತೆಗೆದು, ಶೇರ್‌ ಮಾಡಿದ ಈ ಫೋಟೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಇದನ್ನೂ ಓದಿ : Ramya: ʻಕೈʼ ಬಿಟ್ಟು ʻಕಮಲʼ ಮುಡಿಯುವ ಸುಳಿವು ಕೊಟ್ರಾ ಮೋಹಕತಾರೆ ರಮ್ಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News