Ramya In Chikkaballapur Utsav : ನಟಿ ರಮ್ಯಾ ನಟನೆ ಮಾತ್ರವಲ್ಲ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸಂಸದೆಯಾಗಿದ್ದ ರಮ್ಯಾ ರಾಜಕೀಯ ಜೀವನದ ಬಗ್ಗೆ ಕೆಲವು ಅನುಮಾನಗಳು ಹುಟ್ಟಿಕೊಂಡಿವೆ. ಇಷ್ಟು ವರ್ಷ ಕಾಂಗ್ರೆಸ್ ಪಕ್ಷದಲ್ಲಿದ್ದ ರಮ್ಯಾ ಇದೀಗ ಬಿಜೆಪಿ ಸೇರ್ಪಡೆಯಾಗುತ್ತಾರಾ ಎಂಬ ಅನುಮಾನಗಳು ಕಾಡಲು ಆರಂಭಿಸಿವೆ. ಅದಕ್ಕೆ ಕಾರಣ ಚಿಕ್ಕಬಳ್ಳಾಪುರ ಉತ್ಸವದಲ್ಲಿ ರಮ್ಯಾ ಆಡಿದ ಮಾತುಗಳು.
ಇದನ್ನೂ ಓದಿ : ಇಸ್ಲಾಂಗೆ ಮತಾಂತರ ಆದ್ರಾ ಕರ್ನಾಟಕದ ಸೊಸೆ?; ಹಿಜಾಬ್ ಧರಿಸಿದ ರಾಖಿ ಈಗ ಫಾತಿಮಾ..!
ಜನವರಿ 7 ರಿಂದ 14ರ ವರೆಗೂ ಚಿಕ್ಕಬಳ್ಳಾಪುರ ಉತ್ಸವ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ, ನಟಿ ರಮ್ಯಾ ಕೂಡ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ರಮ್ಯಾ, ಬಿಜೆಪಿ ಪಕ್ಷದ ಸಚಿವ ಸುಧಾಕರ್ ಅವರನ್ನು ಹಾಡಿ ಹೊಗಳಿದ್ದಾರೆ. ಆದರೆ ರಮ್ಯಾ ನಡೆ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿರುವ ಸಾಧ್ಯತರಗಳು ದಟ್ಟವಾಗಿವೆ. ಇದು ಕೇವಲ ಕಾಂಗ್ರೆಸ್ಸಿಗರ ಅಸಮಾಧಾನ ಮಾತ್ರವಲ್ಲ, ರಮ್ಯಾ ಕೈ ತೊರೆದು ಕಮಲ ಮುಡಿಯುತ್ತಾರಾ ಎಂಬ ಚರ್ಚೆಗೆ ಗ್ರಾಸವಾಗಿದೆ.
ಇಡೀ ಕರ್ನಾಟಕದಾದ್ಯಂತ ಚಿಕ್ಕಬಳ್ಳಾಪುರ ಉತ್ಸವ ಚರ್ಚೆಯಲ್ಲಿದೆ. ಟಿವಿ, ಪೇಪರ್ ಎಲ್ಲೇ ನೋಡಿದರೂ ಚಿಕ್ಕಬಳ್ಳಾಪುರ ಉತ್ಸವದ್ದೇ ಸುದ್ದಿ ಹರಿದಾಡುತ್ತಿದೆ. ನಾನು ಚಿಕ್ಕಬಳ್ಳಾಪುರಕ್ಕೆ ಬಹಳ ವರ್ಷಗಳ ಹಿಂದೆ ಬಂದಿದ್ದೆ. ಅಂದಿನ ಚಿಕ್ಕಬಳ್ಳಾಪುರಕ್ಕೂ ಇವತ್ತಿನ ಚಿಕ್ಕಬಳ್ಳಾಪುರಕ್ಕೂ ತುಂಬಾ ವ್ಯತ್ಯಾಸವಿದೆ. ಚಿಕ್ಕಬಳ್ಳಾಪುರದಲ್ಲಿ ಹೀರೋಗಿಂತ ಸುಧಾಕರ್ ಅವರ ಹವಾ ಜೋರಾಗಿದೆ. ಸುಧಾಕರ್ ಅವರು ನನ್ನ ತಂದೆಗೆ ಪರಿಚಯದವರು, ಬಳಿಕ ನನಗೆ ಸ್ನೇಹಿತರು. ಫ್ರೆಂಡ್ ಆಗಿ ಹೆಮ್ಮೆ ಎನಿಸುತ್ತಿದೆ ಎಂದು ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ : Kranti : ಡೋಂಟ್ ಮೆಸ್ ವಿತ್ ಹಿಮ್.. 'ಕ್ರಾಂತಿ'ಯ ಮಾಸ್ ಹಾಡಿಗೆ ಫ್ಯಾನ್ಸ್ ಫಿದಾ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.