Rashmika wishes on Sankranti : ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಏನೇ ಮಾಡಿದ್ರು ಟ್ರೋಲಿಗರು ಮಾತ್ರ ಸುಮ್ಮನಿರಲ್ಲ. ಅದನ್ನು ಟ್ರೋಲ್ ಮಾಡೇ ಬಿಡುತ್ತಾರೆ. ಇಷ್ಟು ದಿನ ರಶ್ಮಿಕಾಗೆ ಕನ್ನಡದ ಮೇಲೆ ಅಭಿಮಾನವಿಲ್ಲ ಎಂದು ಟ್ರೋಲ್ ಮಾಡುತ್ತಿದ್ದರು. ಆದರೆ ಇದೀಗ ರಶ್ಮಿಕಾ ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ಟರು ಅವರನ್ನು ಟ್ರೋಲಿಗರು ಬಿಟ್ಟಿಲ್ಲ. ಕಿರಿಕ್ ಪಾರ್ಟಿಯಿಂದ ಸಿನಿ ಜರ್ನಿ ಶುರು ಮಾಡಿ ಕೆಲವೇ ವರ್ಷಗಳಲ್ಲಿ ಸ್ಟಾರ್ಡಮ್ ಪಡೆದವರು ನಟಿ ರಶ್ಮಿಕಾ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಸಿನಿಮಾಗಳನ್ನು ಮಾಡಿದ್ದಾರೆ. ಅವರ ಬ್ಯೂಟಿಗೆ ಅನೇಕರು ಅಭಿಮಾನಿಗಳಾಗಿದ್ದಾರೆ. ಆದರೆ ಒಂದು ವರ್ಗದ ಜನರಿಗೆ ರಶ್ಮಿಕಾ ಕೂತ್ರು, ನಿಂತ್ರು ಸಮಾಧಾನವಾಗಲ್ಲ. ಟೀಕೆ ಮಾಡುವುದನ್ನು ಮುಂದುವರಿಸಿದ್ದಾರೆ. ಇದೇ ಕಾರಣಕ್ಕೆ ರಶ್ಮಿಕಾ ಪ್ರತಿಬಾರಿ ಟ್ರೋಲ್ ಆಗುತ್ತಲೇ ಇರುತ್ತಾರೆ.
ಇದನ್ನೂ ಓದಿ : Ramya: ʻಕೈʼ ಬಿಟ್ಟು ʻಕಮಲʼ ಮುಡಿಯುವ ಸುಳಿವು ಕೊಟ್ರಾ ಮೋಹಕತಾರೆ ರಮ್ಯಾ?
ಇದೀಗ ಸಂಕ್ರಾಂತಿ ಹಬ್ಬದ ಹಿನ್ನೆಲೆ ರಶ್ಮಿಕಾ ಶುಭಾಶಯ ಕೋರಿದ್ದಾರೆ. ತಮ್ಮ ಟ್ವಿಟರ್ನಲ್ಲಿ ವಿಶ್ ಮಾಡಿದ್ದು, ಅವರ ಪೋಸ್ಟ್ ಈಗ ಟ್ರೋಲ್ಗೆ ಗುರಿಯಾಗಿದೆ. ಸಾಂಪ್ರದಾಯಿಕ ಉಡುಗೆತೊಟ್ಟು ಕೈ ಮುಗಿದಿರುವ ರಶ್ಮಿಕಾ, ಹಲವು ಭಾಷೆಗಳಲ್ಲಿ ಶುಭಾಶಯ ತಿಳಿಸಿದ್ದಾರೆ. ಅದರಲ್ಲಿ ಮೊದಲು ಕನ್ನಡದಲ್ಲಿ "ಸಂಕ್ರಾಂತಿಯ ಶುಭಾಶಯಗಳು" ಎಂದು ಬರೆದಿದ್ದಾರೆ. ಆ ಬಳಿಕ ತಮಿಳು, ಹಿಂದಿ, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ನಲ್ಲಿ ಸಂಕ್ರಾಂತಿಗೆ ಶುಭಕೋರಿದ್ದಾರೆ.
ಸಂಕ್ರಾಂತಿಯ ಶುಭಾಶಯಗಳು!
அனைவருக்கும் இனிய பொங்கல் திருநாள் நல்வாழ்த்துக்கள்!
संक्रांति की शुभकामनाएं!
సంక్రాంతి శుభాకాంక్షలు!
പൊങ്കൽ ആശംസകൾ!
Happy Sankranti! ❤️❤️ pic.twitter.com/EWoLBtLd21— Rashmika Mandanna (@iamRashmika) January 15, 2023
ಕನ್ನಡವನ್ನು ಕಡೆಗಣಿಸಿ ಟೀಕೆಗೆ ಗುರಿಯಾಗಿದ್ದ ನಟಿ ಕನ್ನಡದಲ್ಲಿ ವಿಶ್ ಮಾಡಿದ್ದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. "ರಶ್ಮಿಕಾ ಅವರೇ ನೀವು ಈ ಮೊದಲು ಮಾಡಿದ್ದನ್ನು ನಾವು ಮರೆಯುವುದಿಲ್ಲ" ಎಂದು ಹೇಳಿದ್ದಾರೆ. ಅನೇಕರು ಟ್ರೋಲ್ ಕೂಡ ಮಾಡಿದ್ದಾರೆ. ಆದರೆ ರಶ್ಮಿಕಾ ಮಾತ್ರ ಈ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ.
ಇದನ್ನೂ ಓದಿ : Arjun Janya : 'ಲವ್ ಯು ಗಾಡ್ ಫಾದರ್' ಎಂದು ಕಿಚ್ವನಿಗೆ ವಿಶೇಷ ಗಿಫ್ಟ್ ನೀಡಿದ ಅರ್ಜುನ್ ಜನ್ಯ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.