Viral News: ವಿರಾಟ್ ಕೊಹ್ಲಿ ಬಯೋಪಿಕ್..! ನಾಯಕ ಯಾರು ಗೊತ್ತೆ?

Virat Kohli Biopic: ಕ್ರಿಕೆಟ್ ದೇವರು ಎನಿಸಿಕೊಂಡಿರುವ ಸಚಿನ್ ಅವರ ದಾಖಲೆಯನ್ನು ಸದ್ಯ ವಿರಾಟ್ ಕೊಹ್ಲಿ ಬ್ರೇಕ್‌ ಮಾಡಿದ್ದಾರೆ.. ಇದೇ ವೇಳೆ ಬಾಲಿವುಡ್ ನಲ್ಲಿ ವಿರಾಟ್ ಬಯೋಪಿಕ್ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗಾದರೆ ಈ ಚಿತ್ರದ ನಾಯಕ ಯಾರು ಗೊತ್ತಾ? 

Written by - Savita M B | Last Updated : Nov 16, 2023, 04:00 PM IST
  • ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ವಾಂಖೆಡೆ ಸ್ಟೇಡಿಯಂನ ವೀರಾವೇಶದ ವೇದಿಕೆಯಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.\
  • ಭಾರತ ತಂಡದ ಗೆಲುವನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ.
  • ಆದರೆ ಇದೀಗ ವಿರಾಟ್‌ ಬಯೋಫಿಕ್‌ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ
Viral News: ವಿರಾಟ್ ಕೊಹ್ಲಿ ಬಯೋಪಿಕ್..! ನಾಯಕ ಯಾರು ಗೊತ್ತೆ?  title=

Virat Kohli: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ವಾಂಖೆಡೆ ಸ್ಟೇಡಿಯಂನ ವೀರಾವೇಶದ ವೇದಿಕೆಯಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಬುಧವಾರ ನಡೆದ ಸೆಮಿಫೈನಲ್ ಕದನದಲ್ಲಿ ಟೀಂ ಇಂಡಿಯಾ 70 ರನ್ ಗಳ ಜಯ ಸಾಧಿಸಿದ್ದು ಗೊತ್ತೇ ಇದೆ. 

ಭಾರತ ತಂಡದ ಗೆಲುವನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ.. ಈ ಪಂದ್ಯದಲ್ಲಿ ಕ್ರಿಕೆಟ್ ನ ರೆಕಾರ್ಡ್ ಕಿಂಗ್ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಸಚಿನ್ ಅವರ 49 ಶತಕಗಳ ದಾಖಲೆಯನ್ನು ಮುರಿದಿದ್ದಾರೆ. ಆದರೆ ಇದೀಗ ಕೊಹ್ಲಿ ಅವರ 50 ಶತಕಗಳ ದಾಖಲೆಯ ಬಗ್ಗೆ ಸುದ್ದಿ ವೈರಲ್ ಆಗಿದೆ. 

ಇದನ್ನೂ ಓದಿ-ಸೌತ್‌ ನಟಿ ನಮಿತಾ ಪತಿಗೆ ಸಂಕಷ್ಟ: ವೀರೇಂದ್ರ ಚೌಧರಿಗೆ ಪೋಲೀಸರಿಂದ ನೋಟಿಸ್‌!

ಹೌದು ಸದ್ಯ ವಿರಾಟ್ ಬಯೋಪಿಕ್ ಮತ್ತೊಮ್ಮೆ ತೆರೆಗೆ ಬಂದಿದೆ. ಈ ಹಿಂದೆ ಕ್ರಿಕೆಟ್ ದೇವರು ಸಚಿನ್.. ಧೋನಿ ಬಯೋಪಿಕ್ ಸಿನಿಮಾ ಕೂಡ ತೆರೆಗೆ ಬಂದಿದ್ದವು. ಕಪಿಲ್ ದೇವ್ ಅವರ ಬಯೋಪಿಕ್ ಕೂಡ ಇತ್ತೀಚೆಗೆ ತೆರೆಕಂಡಿದೆ. ಹೀಗಾಗಿ ವಿರಾಟ್ ಕೊಹ್ಲಿ ಅವರ ಬಯೋಪಿಕ್‌ಗಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ ಈ ವಿರಾಟ್ ಬಯೋಪಿಕ್ ಸಿನಿಮಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹಾಗಾದ್ರೆ ಬಾಲಿವುಡ್ ನಲ್ಲಿ ಕೊಹ್ಲಿ ಬಯೋಪಿಕ್ ಮಾಡೋಕೆ ಯಾರಾದ್ರು ರೆಡಿ ಇದ್ದಾರಾ?.. ಹಾಗೊಂದು ವೇಳೆ ಇದ್ದರೂ ಆ ಸಿನಿಮಾದಲ್ಲಿ ಹೀರೋ ಯಾರು ಆಗ್ತಾರೆ..? ಈ ಪ್ರಶ್ನೆಗಳು ಈಗ ಬಲವಾಗಿ ಕೇಳಿಬರುತ್ತಿವೆ. ಆದರೆ ಈ ವಿಚಾರದಲ್ಲಿ ಇತ್ತೀಚಿನ ಪ್ರತಿಕ್ರಿಯೆ ಬಾಲಿವುಡ್ ಸ್ಟಾರ್ ಹೀರೋ.. ಹ್ಯಾಡ್ಸಮ್ ಸ್ಟಾರ್ ರಣಬೀರ್ ಕಪೂರ್. ಹೌದು ಈ ಕೊಹ್ಲಿ ಬಯೋಪಿಕ್‌ ವಿಚಾರದಲ್ಲಿ ರಣಬೀರ್ ಕಪೂರ್ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ. 

ಇದನ್ನೂ ಓದಿ-Tiger 3: OTT ಅಂಗಳಕ್ಕೆ ಸಲ್ಲು ಬಾಯ್‌ ನ್ಯೂ ಸಿನಿಮಾ..! ಎಲ್ಲಿ? ಯಾವಾಗ?

ಮುಂಬೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದ ನೇರಪ್ರಸಾರ ವೀಕ್ಷಿಸಿದ ರಣಬೀರ್.. ಹೊರಗೆ ಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ರಣಬೀರ್ ಕಪೂರ್ ಸದ್ಯ ಅನಿಮಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಪ್ರಚಾರದ ಭಾಗವಾಗಿ ರಣಬೀರ್ ಪಂದ್ಯಕ್ಕೆ ಬಂದಿದ್ದರು. 

ಈ ಸಂದರ್ಭದಲ್ಲಿ ಕೊಹ್ಲಿ ಬಯೋಪಿಕ್ ಬಗ್ಗೆ ಮಾತನಾಡಿದ್ದಾರೆ. ನೀವು ವಿರಾಟ್ ಕೊಹ್ಲಿ ಜೀವನಾಧಾರಿತ ಚಿತ್ರದಲ್ಲಿ ನಟಿಸಲು ಬಯಸುತ್ತೀರಾ? ಆ್ಯಂಕರ್ ಪ್ರಶ್ನೆಗೆ ರಣಬೀರ್ ಒಳ್ಳೆ ಉತ್ತರ ಕೊಟ್ಟಿದ್ದಾರೆ. "ಕೊಹ್ಲಿ ಬಯೋಪಿಕ್ ಮಾಡಿದರೆ ಅವರೇ ನಾಯಕನಾಗಿ ನಟಿಸಬೇಕು. ಏಕೆಂದರೆ ವಿರಾಟ್ ಭಾರತದ ಬಹುತೇಕ ನಟರಿಗಿಂತ ಹೆಚ್ಚು ಸುಂದರ ಮತ್ತು ಫಿಟ್ ಆಗಿದ್ದಾರೆ. ಹಾಗಾಗಿ ಆ ಪಾತ್ರವನ್ನು ಕೊಹ್ಲಿ ನಿರ್ವಹಿಸಬೇಕು,’’ ಎಂದು ಹೇಳಿದ್ದಾರೆ. ರಣಬೀರ್ ಮಾಡಿರುವ ಈ ಕಾಮೆಂಟ್‌ಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News