ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ

Indian Army Recruitment Rally 2020: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಈ ವಿಷಯಗಳನ್ನು ಎಚ್ಚರಿಕೆಯಿಂದ ಓದಬೇಕು.  

Last Updated : Dec 17, 2020, 03:52 PM IST
  • COVID-19 ಪ್ರಕರಣಗಳು ಕಡಿಮೆ ಇರುವ ರಾಜ್ಯಗಳು ಮತ್ತು ನಗರಗಳಲ್ಲಿ ಭಾರತೀಯ ಸೇನಾ ರ್ಯಾಲಿ 2020 ಆಯೋಜಿಸಲಾಗುತ್ತಿದೆ
  • ಭಾರತೀಯ ಸೇನಾ ನೇಮಕಾತಿ ರ್ಯಾಲಿ 2020 ರಲ್ಲಿ ಹಾಜರಾಗಲು ಅಭ್ಯರ್ಥಿಗಳು ಮೊದಲು ತಮ್ಮನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು
ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ title=

Indian Army Recruitment Rally 2020: COVID-19 ರ ಪ್ರಸ್ತುತ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಮತ್ತು ರಂಗಾಪಹರ ನೇಮಕಾತಿ ರ್ಯಾಲಿಗಳನ್ನು ಭಾರತೀಯ ಸೇನೆ ಮುಂದೂಡಿದೆ. ಶೀಘ್ರದಲ್ಲೇ ಹೊಸ ದಿನಾಂಕಗಳನ್ನು ಅಭ್ಯರ್ಥಿಗಳಿಗೆ ಸರಿಯಾದ ಸಮಯದಲ್ಲಿ ತಿಳಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. 

ಇದಲ್ಲದೆ COVID-19 ಪ್ರಕರಣಗಳು ಕಡಿಮೆ ಇರುವ ರಾಜ್ಯಗಳು ಮತ್ತು ನಗರಗಳಲ್ಲಿ ಭಾರತೀಯ ಸೇನಾ ರ್ಯಾಲಿ 2020 (Indian Army Recruitment Rally 2020) ಆಯೋಜಿಸಲಾಗುತ್ತಿದೆ. ಈ ರಾಜ್ಯಗಳಲ್ಲಿ ಹಾಜರಾಗಲು ಬಯಸುವ ಅಭ್ಯರ್ಥಿಗಳು ನಿಗದಿತ ದಿನಾಂಕ ಮತ್ತು ಸಮಯದಲ್ಲಿ ನೇಮಕಾತಿ ರ್ಯಾಲಿಗೆ ಹಾಜರಾಗಬಹುದು. ಭಾರತೀಯ ಸೇನಾ ನೇಮಕಾತಿ ರ್ಯಾಲಿ 2020 ರಲ್ಲಿ ಹಾಜರಾಗಲು ಅಭ್ಯರ್ಥಿಗಳು ಮೊದಲು ತಮ್ಮನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

ಲಡಾಖ್ ನಲ್ಲಿ ಭಾರತೀಯ ಸೈನಿಕರಿಗಾಗಿ ನಿರ್ಮಾಣಗೊಂಡ ವಿಶೇಷ ಮನೆಗಳು, -40 ಡಿಗ್ರಿ ತಾಪಮಾನ ಕೂಡ ಪರಿಣಾಮ ಬೀರಲ್ಲ

ಭಾರತೀಯ ಸೇನೆಯು (Indian Army) ವಿವಿಧ ರಾಜ್ಯಗಳಲ್ಲಿ ಅನೇಕ ನೇಮಕಾತಿ ರ್ಯಾಲಿಗಳನ್ನು ಆಯೋಜಿಸುತ್ತಿರುವುದರಿಂದ ಇದು ಭಾರತೀಯ ಸೇನೆಯಲ್ಲಿ ಕೆಲಸ (Job) ಮಾಡಲು ಒಂದು ಸುವರ್ಣಾವಕಾಶವಾಗಿದೆ. ಭಾರತೀಯ ಸೇನೆಯು ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್, ಸೋಲ್ಜರ್ ಕ್ಲರ್ಕ್, ಸೋಲ್ಜರ್ ಟ್ರೇಡ್ಸ್ಮನ್ ಮತ್ತು ಸೋಲ್ಜರ್ ಟೆಕ್ನಿಕಲ್ ಹುದ್ದೆಗಳನ್ನು ವಿವಿಧ ಇಲಾಖೆಗಳಲ್ಲಿ ವರದಿ ಮಾಡಿದೆ.

ತ್ರಿಪುರ ರಾಜ್ಯದ ಅರ್ಹ ಅಭ್ಯರ್ಥಿಗಳಿಗಾಗಿ 2021 ರಲ್ಲಿ ಭಾರತೀಯ ಸೇನಾ ನೇಮಕಾತಿ ರ್ಯಾಲಿ ನಡೆಯಲಿದೆ. ಪ್ರವೇಶ ಪತ್ರದಲ್ಲಿ, ಅಭ್ಯರ್ಥಿಗಳಿಗೆ ಸ್ಥಳ ಮತ್ತು ರ್ಯಾಲಿಯ ನಿಖರವಾದ ದಿನಾಂಕಗಳನ್ನು ತಿಳಿಸಲಾಗುತ್ತದೆ. ಇದಕ್ಕಾಗಿ ಆನ್‌ಲೈನ್ ನೋಂದಣಿ ಕಡ್ಡಾಯವಾಗಿದೆ ಮತ್ತು 2020 ಡಿಸೆಂಬರ್ 07 ರಿಂದ 2021 ಜನವರಿ 05 ರವರೆಗೆ ತೆರೆದಿರುತ್ತದೆ ಆನ್‌ಲೈನ್ ನೋಂದಣಿ ಮಾಡಲು ಅವಕಾಶವಿದೆ.

ಪಾಕ್ ಸೇನೆಯ ಉದ್ಧಟತನಕ್ಕೆ ದಿಟ್ಟ ಉತ್ತರ ನೀಡಿದ Indian Army, 7-8 ಸೈನಿಕರ ಹತ್ಯೆ

ರ್ಯಾಲಿಗಾಗಿ ಅಡ್ಮಿಟ್ ಕಾರ್ಡ್‌ಗಳನ್ನು ನೋಂದಾಯಿತ ಇಮೇಲ್ ಮೂಲಕ 06 ಜನವರಿ 2021 ರಿಂದ 08 ಜನವರಿ 2021 ರವರೆಗೆ ಕಳುಹಿಸಲಾಗುತ್ತದೆ. ಪ್ರವೇಶ ಪತ್ರದಲ್ಲಿ ನಮೂದಿಸಲಾದ ದಿನಾಂಕಗಳಲ್ಲಿ ಅಭ್ಯರ್ಥಿಗಳು ರ್ಯಾಲಿಯ ಸ್ಥಳದಲ್ಲಿ ಹಾಜರಾಗಬೇಕಾಗುತ್ತದೆ.

ಇದಲ್ಲದೆ ಅಭ್ಯರ್ಥಿಗಳು ಈ ಲಿಂಕ್ http://joinindianarmy.nic.in/default.aspx ಅನ್ನು ಕ್ಲಿಕ್ ಮಾಡುವುದರ ಮೂಲಕ ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

Trending News