ಲಡಾಖ್ ನಲ್ಲಿ ಭಾರತೀಯ ಸೈನಿಕರಿಗಾಗಿ ನಿರ್ಮಾಣಗೊಂಡ ವಿಶೇಷ ಮನೆಗಳು, -40 ಡಿಗ್ರಿ ತಾಪಮಾನ ಕೂಡ ಪರಿಣಾಮ ಬೀರಲ್ಲ

ಚೀನಾದೊಂದಿಗಿನ ಲಡಾಖ್‌ನಲ್ಲಿ ಮುಖಾಮುಖಿಗೆ ಯಾವುದೇ ರೀತಿಯ ಕೊರತೆಯಾಗಬಾರದು ಹಾಗೂ ಚಳಿಗಾಲದಲ್ಲಿ ಉಷ್ಣತೆಯ ತೀವ್ರ ಕುಸಿತದ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯು ಇಲ್ಲಿ ಬೀಡುಬಿಟ್ಟಿರುವ ಸಾವಿರಾರು ಸೈನಿಕರಿಗೆ ಆಧುನಿಕ ಸೌಕರ್ಯಗಳನ್ನು ಒದಗಿಸಿದೆ.

Last Updated : Nov 18, 2020, 05:30 PM IST
  • ಲಡಾಖ್ ನ LAC ಬಳಿ ಮುಂಚೂಣಿಯಲ್ಲಿರುವ ಭಾರತೀಯ ಸೈನಿಕರಿಗೆ ಆಧುನಿಕ ಸೌಕರ್ಯ.
  • ಪ್ರಕಾರ ಮುಂಚೂಣಿಯಲ್ಲಿರುವ ಸೈನಿಕರಿಗಾಗಿ ಬಿಸಿ ಗುಡಾರಗಳನ್ನು ನಿರ್ಮಿಸಲಾಗಿದೆ.
  • ಅಮೆರಿಕಾದಿಂದ 15 ಸಾವಿರಕ್ಕೂ ಅಧಿಕ ಎಕ್ಷಟೆಂಡೆಡ್ ವೆದರ್ ಕ್ಲೋಥಿಂಗ್ ಸಿಸ್ಟಂ ಆಮದು ಮಾಡಿಕೊಳ್ಳಲಾಗಿದೆ.
ಲಡಾಖ್ ನಲ್ಲಿ ಭಾರತೀಯ ಸೈನಿಕರಿಗಾಗಿ ನಿರ್ಮಾಣಗೊಂಡ ವಿಶೇಷ ಮನೆಗಳು, -40 ಡಿಗ್ರಿ ತಾಪಮಾನ ಕೂಡ ಪರಿಣಾಮ ಬೀರಲ್ಲ title=

ನವದೆಹಲಿ: ಚೀನಾದೊಂದಿಗಿನ ಲಡಾಖ್‌ನಲ್ಲಿ ಮುಖಾಮುಖಿಗೆ ಯಾವುದೇ ರೀತಿಯ ಕೊರತೆಯಾಗಬಾರದು ಹಾಗೂ ಚಳಿಗಾಲದಲ್ಲಿ ಉಷ್ಣತೆಯ ತೀವ್ರ ಕುಸಿತದ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯು (Indian Army) ಇಲ್ಲಿ ಬೀಡುಬಿಟ್ಟಿರುವ ಸಾವಿರಾರು ಸೈನಿಕರಿಗೆ ಆಧುನಿಕ ಸೌಕರ್ಯಗಳನ್ನು ಒದಗಿಸಿದೆ. ಇದಕ್ಕೆ  ಸಂಬಂಧಿಸಿದ ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ. ಯಾವುದೇ ಚೀನಾದ ದುಷ್ಕೃತ್ಯಗಳನ್ನು ತಡೆಗಟ್ಟಲು ಸಾವಿರಾರು ಸೈನಿಕರನ್ನು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾಗಿದೆ ಮತ್ತು ಮೇ ತಿಂಗಳಿನಿಂದ ಅವರು ಇಲ್ಲಿ ನಿಯೋಜನೆಗೊಂಡಿದ್ದಾರೆ.

ಇದನ್ನು ಓದಿ-ಪಾಕ್ ಸೇನೆಯ ಉದ್ಧಟತನಕ್ಕೆ ದಿಟ್ಟ ಉತ್ತರ ನೀಡಿದ Indian Army, 7-8 ಸೈನಿಕರ ಹತ್ಯೆ

ಭಾರತೀಯ ಸೈನಿಕರು ಬೀಡುಬಿಟ್ಟಿರುವ ಕೆಲವು ಪ್ರದೇಶಗಳಲ್ಲಿ, ತಾಪಮಾನವು -40. C ವರೆಗೆ ಹೋಗಬಹುದು. ಇದಲ್ಲದೆ, ಎತ್ತರದ ಪ್ರದೇಶಗಳು 30 ರಿಂದ 40 ಅಡಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. "ಹಲವಾರು ವರ್ಷಗಳಿಂದ ಇಲ್ಲಿ ಸರಿಯಾದ ವ್ಯವಸ್ಥೆಗಳನ್ನು ಹೊಂದಿರುವ ಸ್ಮಾರ್ಟ್ ಕ್ಯಾಂಪ್‌ಗಳ ಹೊರತಾಗಿ, ಆಧುನಿಕ ವಸತಿ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ, ಇದರಲ್ಲಿ ವಿದ್ಯುತ್, ನೀರು, ಹೀಟಿಂಗ್ ಸೌಲಭ್ಯ, ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಹೆಚ್ಚಿನ ಗಮನವಹಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೈನಿಕರಿಗೆ ಯಾವುದಕ್ಕೂ ಕೊರತೆಯಿಲ್ಲ ಮತ್ತು ಅವರು ಯಾವುದೇ ಸವಾಲಿಗೆ ಸಿದ್ಧರಾಗಿದ್ದಾರೆ. ''

ಇದನ್ನು ಓದಿ- ಗಾಲ್ವಾನ್ ಘಟನೆ ನಂತರ ಭಾರತ-ಚೀನಾ ನಡುವೆ ಗಂಭೀರ ಸ್ಥಿತಿ ನಿರ್ಮಾಣ: ಸಚಿವ ಜೈಶಂಕರ್

ಬುಧವಾರ, ಎಲ್‌ಎಸಿಯಿಂದ ಕೆಲವು ಛಾಯಾಚಿತ್ರಗಳು ಬಹಿರಂಗಗೊಂಡಿದ್ದು, ಇವು  ಸೇನೆಯು ನಿರ್ಮಿಸಿರುವ ಮೂಲಸೌಕರ್ಯಗಳನ್ನು ಎತ್ತಿ ತೋರಿಸುತ್ತಿವೆ.ಮುಂಚೂಣಿಯಲ್ಲಿ ಬೀಡುಬಿಟ್ಟಿರುವ ಸೈನಿಕರಿಗೆ ಸಹಾಯ ಮಾಡಲು ಇವುಗಳನ್ನು ನಿರ್ಮಿಸಲಾಗಿದೆ. ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮತ್ತು ಚೀನಾ ಮಿಲಿಟರಿ ಕಮಾಂಡರ್‌ಗಳ ಮಟ್ಟದ ಮಾತುಕತೆಗಳನ್ನು ನಡೆಸಲಾಗಿದೆ. ಆದರೆ ನೆಲದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಇದನ್ನು ಓದಿ- ಎಲ್‌ಎಸಿಯಲ್ಲಿ T-90 ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದ ಭಾರತ

ಈ ಕುರಿತು ಹೇಳಿಕೆ ನೀಡಿರುವ ಮತ್ತೊಬ್ಬ ಅಧಿಕಾರಿ ಯುದ್ಧದ ತಂತ್ರಗಾರಿಕೆಯ ನಿಯೋಜನೆಯ ಪ್ರಕಾರ ಮುಂಚೂಣಿಯಲ್ಲಿರುವ ಸೈನಿಕರಿಗಾಗಿ ಬಿಸಿ ಗುಡಾರಗಳನ್ನು ನಿರ್ಮಿಸಲಾಗಿದೆ. ಆಪತ್ಕಾಲದ ಪರಿಸ್ಥಿತಿಯಲ್ಲಿ ಸಾಕಷ್ಟು ನಾಗರಿಕರಿಗಾಗಿ ಸಂರಚನೆಗಳನ್ನು ಸಹ ಗುರಿತಿಸಲಾಗಿದೇ" ಎಂದಿದ್ದಾರೆ. ಎಲ್ಎಸಿ ಬಳಿ ನಿಯೋಜಿಸಲಾಗಿರುವ ಸೈನಿಕರಿಗೆ ಲಾಜಿಸ್ಟಿಕ್ ಸಪೋರ್ಟ್ ಒದಗಿಸಲು ಭಾರತ ಸಾಕಷ್ಟು ಪ್ರಯತ್ನ ನಡೆಸಿದೆ. ಇವುಗಳಲ್ಲಿ ಅಮೆರಿಕಾದಿಂದ ಬಿಸಿ ಉಡುಪುಗಳ ಆಮದು ಕೂಡ ಶಾಮೀಲಾಗಿದೆ. ಭಾರತ ಅಮೆರಿಕಾದಿಂದ 15 ಸಾವಿರಕ್ಕೂ ಅಧಿಕ ಎಕ್ಷಟೆಂಡೆಡ್ ವೆದರ್ ಕ್ಲೋಥಿಂಗ್ ಸಿಸ್ಟಂ ಆಮದು ಮಾಡಿಕೊಂಡಿದೆ. 

ಇದನ್ನು ಓದಿ- Mission Blue: ಸಾಗರದಿಂದ ಆಗಸದವರೆಗೆ ಭಾರತೀಯ ಶೌರ್ಯಕ್ಕೆ ಸಿಗಲಿದೆ ನೂತನ ಶಕ್ತಿ

ಭಾರತೀಯ ಸೇನೆ ಹಾಗೂ ಪಿಎಲ್ಎ ನಡುವೆ LAC ಬಳಿ ನಡೆಯುವ ಸಂಭಾವ್ಯ ಘರ್ಷಣೆಯ ಸ್ಥಳದಲ್ಲಿ. ಸಂಘರ್ಷ ತಡೆಯಲು ಈಗಾಗಲೇ 8 ಸುತ್ತುಗಳ ಮಾತುಕತೆ ನಡೆದಿವೆ. ನವೆಂಬರ್ 6 ರಂದು ನಡೆದ ಮಾತುಕತೆಯ ವೇಳೆ ಎರಡು ಪಕ್ಷಗಳು ಮುಂಚೂಣಿಯಲ್ಲಿರುವ ಸೈನಿಕರು ತಾಳ್ಮೆ ಸುನಿಶ್ಚಿತಗೊಳಿಸಲಿದ್ದಾರೆ ಹಾಗೂ ತಪ್ಪು ತಿಳುವಳಿಕೆ ಮತ್ತು ತಪ್ಪು ಸಮೀಕ್ಷೆಗಳಿಂದ ದೂರ ಉಳಿಯಲಿದ್ದಾರೆ ಎಂಬುದಕ್ಕೆ ಸಮ್ಮತಿ ಸೂಚಿಸಿವೆ. ಶೀಘ್ರದಲ್ಲಿಯೇ ಕಮಾಂಡರ್ ಮಟ್ಟದ 9ನೆ ಸುತ್ತಿನ ಮಾತುಕತೆ ನಡೆಯಲಿದೆ.

Trending News