ರಾಹುಲ್ ಗಾಂಧಿ ತೋರಿಕೆಗೆ ಲಿಂಗಾಯತ ಮಠಗಳಿಗೆ ಭೇಟಿ: ಸಿಎಂ ಬಸವರಾಜ ಬೊಮ್ಮಾಯಿ

CM Basavaraj Bommai: ರಾಜ್ಯಕ್ಕೆ  ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸ್ಮೃತಿ ಇರಾನಿ, ಸೇರಿದಂತೆ ಹಲವು ನಾಯಕರು  ತಾರಾ ಪ್ರಚಾರಕರಾಗಿ  ಆಗಮಿಸುತ್ತಿದ್ದಾರೆ. ಸಿಎಂ ಆಗಬೇಕು ಎಂದು ನಾನು ಅಂದುಕೊಂಡಿರಲಿಲ್ಲ‌. ಹಿಂದೆಯೂ  ಹೈಕಮಾಂಡ್ ತೀರ್ಮಾನ ಮಾಡಿದ್ದು,  ಈಗಲೂ ಕೂಡ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

Written by - Prashobh Devanahalli | Edited by - Bhavishya Shetty | Last Updated : Apr 24, 2023, 01:16 PM IST
    • ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸೃತಿ ಇರಾನಿ ಸೇರಿದಂತೆ ಅನೇಕರು ಆಗಮನ
    • ಹಿಂದೆಯೂ ಹೈಕಮಾಂಡ್ ತೀರ್ಮಾನ ಮಾಡಿದ್ದು, ಈಗಲೂ ಕೂಡ ಹೈಕಮಾಂಡ್ ತೀರ್ಮಾನ ಮಾಡುತ್ತದೆ
    • ಕೆಶಿ ಹೇಳುವುದು ಒಂದು ಮಾಡೋದು ಒಂದು . ದೇವರು ಯಾರಿಗೆ ಆಶೀರ್ವಾದ ಮಾಡ್ತಾರೆ ಎಂದು ಕಾದು ನೋಡೋಣ
ರಾಹುಲ್ ಗಾಂಧಿ ತೋರಿಕೆಗೆ ಲಿಂಗಾಯತ ಮಠಗಳಿಗೆ ಭೇಟಿ: ಸಿಎಂ ಬಸವರಾಜ ಬೊಮ್ಮಾಯಿ title=
CM Basavaraj Bommai

CM Basavaraj Bommai: ದಾವಣಗೆರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೋರಿಕೆಗಾಗಿ ಲಿಂಗಾಯತ ಮಠಕ್ಕೆ ಹೋಗುತ್ತಿರುವುದಕ್ಕೆ  ಧನ್ಯವಾದಗಳನ್ನು ಹೇಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ‌. ಅವರು ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಇದನ್ನೂ ಓದಿ: ರಾಜ್ಯ ಚುನಾವಣಾ ಅಖಾಡಕ್ಕಿಂದು ರಾಹುಲ್‌ ಗಾಂಧಿ ಎಂಟ್ರಿ

ರಾಜ್ಯಕ್ಕೆ  ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸ್ಮೃತಿ ಇರಾನಿ, ಸೇರಿದಂತೆ ಹಲವು ನಾಯಕರು  ತಾರಾ ಪ್ರಚಾರಕರಾಗಿ  ಆಗಮಿಸುತ್ತಿದ್ದಾರೆ ಎಂದರು.

ಸಿಎಂ ಆಗಬೇಕು ಎಂದು ನಾನು ಅಂದುಕೊಂಡಿರಲಿಲ್ಲ‌. ಹಿಂದೆಯೂ  ಹೈಕಮಾಂಡ್ ತೀರ್ಮಾನ ಮಾಡಿದ್ದು,  ಈಗಲೂ ಕೂಡ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ಡಿಕೆಶಿ ಹೇಳುವುದು ಒಂದು ಮಾಡೋದು ಒಂದು!

ಭಾವನೆಗಳ ಜೊತೆ ಬಿಜೆಪಿ ಆಟವಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಲಿಂಗಾಯತ ವಿವಾದಗಳನ್ನು ತೆಗೆದಿದ್ದೇ ಅವರು. ಡಿಕೆಶಿ ಹೇಳುವುದು ಒಂದು ಮಾಡೋದು ಒಂದು . ದೇವರು ಯಾರಿಗೆ ಆಶೀರ್ವಾದ ಮಾಡ್ತಾರೆ ಎಂದು ಕಾದು ನೋಡೋಣ ಎಂದು ತಿಳಿಸಿದರು.

ಸವದಿ, ಶೆಟ್ಟರ್ ಕಾಂಗ್ರೆಸ್ ಗೆ ಹೋಗಿರೋದು ಬಿಜೆಪಿಗೆ ಒಳಿತಾಗಲಿದೆ. ಕಳೆದ ಬಾರಿಗಿಂತ ಈ ಬಾರಿ ನಮಗೆ ಮತಗಳು ಹೆಚ್ಚಾಗಲಿವೆ ಎಂದರು.

ಕಾಂಗ್ರೆಸ್ ಮಿತ್ರರಿಗೆ ನಾನು ಧನ್ಯವಾದ ಹೇಳಲು ಇಷ್ಟ ಪಡುತ್ತೇನೆ. ಸವದಿ, ಶೆಟ್ಟರ್ ಕಾಂಗ್ರೆಸ್ ಗೆ ಹೋಗಿರೋದು ಬಿಜೆಪಿಗೆ ಪ್ಲಸ್ ಆಗುತ್ತದೆ. ಅವರ ಕ್ಷೇತ್ರದಲ್ಲಿ ಅವರ ವಿರುದ್ದ ಜನರು ಮಾತನಾಡುತ್ತಿದ್ದಾರೆ. ಎಲ್ಲಾ ಪದವಿ ಪಡೆದು ನಂತರ ಕಾಂಗ್ರೇಸ್ ಗೆ ಹೋಗಿದ್ದು ಜನರು ಅವರನ್ನು ಒಪ್ಪುವುದಿಲ್ಲ ಎಂದರು.

ಇದನ್ನೂ ಓದಿ: Karnataka Election 2023: ವಿಪಕ್ಷ ನಾಯಕ ಸಿದ್ದರಾಮಯ್ಯರಿಂದ ‘ಮತಬೇಟೆ’ಯ ದಂಡಯಾತ್ರೆ!

ಮೀಡಿಯಾದಲ್ಲೇ ಸ್ಪಷ್ಟವಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಈಗ ಅವರ ಹೇಳಿಕೆಯನ್ನು ತಿರುಚಿ ಹೇಳುತ್ತಿದ್ದಾರೆ. ಜನರು ಏನು ದಡ್ಡರಲ್ಲ ಎಲ್ಲವನ್ನು ಗಮನಿಸಿದ್ದಾರೆ ಎಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News