Astro Tips: ಶನಿವಾರದಂದು ಈ ಸಣ್ಣ ಕೆಲಸ ಮಾಡಿದ್ರೆ ಶನಿದೇವನ ಕೋಪದಿಂದ ಪಾರಾಗಬಹುದು!

ಶನಿವಾರವನ್ನು ಶನಿ ದೇವನಿಗೆ ಸಮರ್ಪಿಸಲಾಗಿದೆ. ಈ ದಿನದಂದು ಶನಿದೇವನನ್ನು ನಿಯಮಗಳ ಪ್ರಕಾರ ಪೂಜಿಸುವುದರಿಂದ ಶನಿಯ ದುಷ್ಟ ದೃಷ್ಟಿ ವ್ಯಕ್ತಿಯ ಮೇಲೆ ಬೀಳುವುದಿಲ್ಲ. ಜ್ಯೋತಿಷ್ಯದಲ್ಲಿ ಶನಿಯಿಂದ ಉಂಟಾಗುವ ದುಷ್ಪರಿಣಾಮ ತಪ್ಪಿಸಲು ಕೆಲವು ವಿಷಯಗಳ ಬಗ್ಗೆ ವಿಶೇಷ ಒತ್ತು ನೀಡಲಾಗಿದೆ.

Written by - Puttaraj K Alur | Last Updated : Feb 11, 2023, 07:38 PM IST
  • ಶನಿ ದೇವನನ್ನು ನ್ಯಾಯ ಮತ್ತು ಕರ್ಮ ಫಲದಾತ ಎಂದೂ ಕರೆಯುತ್ತಾರೆ
  • ಶನಿವಾರ ಶನಿ ದೇವನನ್ನು ಪೂಜಿಸುವ ಜೊತೆಗೆ ಶನಿ ಸ್ತೋತ್ರ ಪಠಿಸುವುದು ತುಂಬಾ ಮಂಗಳಕರ
  • ಶನಿ ಸ್ತೋತ್ರಗಳನ್ನು ಕ್ರಮಬದ್ಧವಾಗಿ ಪಠಿಸುವುದರ ಅನೇಕ ಪ್ರಯೋಜನಗಳು ದೊರೆಯುತ್ತವೆ
Astro Tips: ಶನಿವಾರದಂದು ಈ ಸಣ್ಣ ಕೆಲಸ ಮಾಡಿದ್ರೆ ಶನಿದೇವನ ಕೋಪದಿಂದ ಪಾರಾಗಬಹುದು! title=
ಶನಿ ಸ್ತೋತ್ರ ಪಠಿಸುವುದರ ಪ್ರಯೋಜನ

ನವದೆಹಲಿ: ಹಿಂದೂ ಧರ್ಮಗ್ರಂಥಗಳಲ್ಲಿ ಪ್ರತಿ ದಿನವನ್ನೂ ದೇವ-ದೇವತೆಗಳಿಗೆ ಸಮರ್ಪಿಸಲಾಗಿದೆ. ಶನಿವಾರ ಶನಿದೇವನ ಆರಾಧನೆಯ ದಿನ. ಶನಿದೇವನ ಹೆಸರು ಕೇಳಿದ್ರೆ ಮನುಷ್ಯರಷ್ಟೇ ಅಲ್ಲ, ದೇವತೆಗಳೂ ನಡುಗುತ್ತಾರೆ. ಶನಿ ದೇವನನ್ನು ನ್ಯಾಯ ಮತ್ತು ಕರ್ಮ ಫಲದಾತ ಎಂದೂ ಕರೆಯುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ಅನುಗುಣವಾಗಿ ಫಲ ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶನಿದೇವನ ವಕ್ರ ದೃಷ್ಟಿಯಿಂದ ಪಾರಾಗಲು ಜ್ಯೋತಿಷ್ಯದಲ್ಲಿ ಕೆಲವು ವಿಶೇಷ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿವಾರದಂದು ಶನಿ ದೇವನನ್ನು ಪೂಜಿಸುವ ಜೊತೆಗೆ ಶನಿ ಸ್ತೋತ್ರವನ್ನು ಪಠಿಸುವುದು ತುಂಬಾ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಈ ಮೂಲವನ್ನು ಕ್ರಮಬದ್ಧವಾಗಿ ಹೇಳುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ ಮತ್ತು ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಸಂಕಟಗಳು ದೂರವಾಗಿ, ಜೀವನದಲ್ಲಿ ಸಂತೋಷ-ಶಾಂತಿ ದೊರೆಯುತ್ತದೆ. ಶನಿ ಸೋತ್ರಗಳನ್ನು ಪಠಿಸುವುದರ ಪ್ರಯೋಜನಗಳನ್ನು ತಿಳಿಯಿರಿ.

ಇದನ್ನೂ ಓದಿ: Venus transit 2023: ಶುಕ್ರ ಸಂಚಾರದಿಂದ ರಾಜಯೋಗ ಫಲ, ಈ 4 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ!

ಶನಿ ಸ್ತೋತ್ರ ಪಠಿಸುವುದರ ಪ್ರಯೋಜನಗಳು

ಧಾರ್ಮಿಕ ಗ್ರಂಥಗಳ ಪ್ರಕಾರ, ರಾಜ ದಶರಥನ ರಾಜ್ಯದಲ್ಲಿ ಕ್ಷಾಮ ಉಂಟಾದಾಗ ಅವನು ಶನಿ ದೇವನನ್ನು ಮೆಚ್ಚಿಸಲು ಶನಿ ಸೋತ್ರಗಳನ್ನು ರಚಿಸಿದನು. ಶನಿದೇವನು ಇದರಿಂದ ಬಹಳ ಸಂತೋಷಪಟ್ಟನು. ಬಳಿಕ ರಾಜ ದಶರಥನ ಇಚ್ಛೆಯನ್ನು ಪೂರೈಸಿದನು. ಶನಿ ಸ್ತೋತ್ರವನ್ನು ಯಾರು ಪೂರ್ಣ ಹೃದಯ ಮತ್ತು ಶುದ್ಧತೆಯಿಂದ ಪಠಿಸುತ್ತಾರೋ ಶನಿ ದೇವನು ಅವರನ್ನು ರಕ್ಷಿಸುತ್ತಾನೆ ಎಂದು ನಂಬಲಾಗಿದೆ.

ಶನಿ ಸೋತ್ರಗಳನ್ನು ಸಂಸ್ಕೃತದಲ್ಲಿ ಬರೆಯಲಾಗಿದ್ದರೂ, ಅದನ್ನು ನಿಯಮಿತವಾಗಿ ಅಭ್ಯಾಸ ಮಾಡಿದ್ರೆ ಓದಲು ಸುಲಭವಾಗುತ್ತದೆ. ನಿಮಗೆ ಓದಲು ಕಷ್ಟವಾದರೆ ಆಡಿಯೋ ಅಥವಾ ವಿಡಿಯೋವನ್ನು ಸಹ ಕೇಳಬಹುದು. ಇದನ್ನು ಪ್ರತಿ ಶನಿವಾರ ಓದಬೇಕು. ಶನಿಯ ಸಾಡೇ ಸತಿ ಮತ್ತು ಧೈಯಾದಿಂದ ಯಾವುದೇ ವ್ಯಕ್ತಿಗೆ ತೊಂದರೆಯಾಗಿದ್ದರೆ, ಪೂಜೆಯ ಸಮಯದಲ್ಲಿ ನಿಯಮಿತವಾಗಿ ಶನಿ ಸ್ತೋತ್ರವನ್ನು ಪಠಿಸಬೇಕು. ಇದರಿಂದ ನೀವು ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತೀರಿ.

ಇದನ್ನೂ ಓದಿ: ಮದುವೆ-ಉದ್ಯೋಗ ಸಮಸ್ಯೆ ನಿವಾರಣೆಗೆ ಶನಿವಾರ ಈ ಐದು ಪರಿಹಾರಗಳನ್ನು ಮಾಡಿ: ಅದೃಷ್ಟದ ಬಾಗಿಲು ತೆರೆಯುವುದು ಖಚಿತ!

ಶನಿ ಸ್ತೋತ್ರಗಳು

"ಓಂ ಶಂ ಶನೈಶ್ಚರಾಯ ನಮಃ"

 

" ಓಂ ಶನ್ನೋ ದೇವಿರಭಿಷ್ಟ್ದಾಪೋ ಭವಂತು ಪಿತಯೇ"

 

''ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ

ಓಂ ಐಂಗ್‌ ಹ್ರಿಂಗ್‌ ಶ್ರೀಂಗ್‌ ಶಂಗ್‌ ಶನೈಶ್ಚರಾಯ ನಮಃ ಓಂ

ಓಂ ಹಿಂ ಶಂ ಶನಯೇ ನಮಃ

ಓಂ ಶಂ ಶನೈಶ್ಚರಾಯ ನಮಃ''

 

''ನಮಸ್ತೇ ಕೋಣಸಂಸ್ಥಾಯ

ಪಿಂಗಲಾಯ ನಮೋಸ್ತುತೇ

ನಮಸ್ತೇ ರೌದ್ರದೇಹಾಯ

ನಮಸ್ತೇ ಚಾಂತಕಾಯಚ

ನಮಸ್ತೇ ಮಂದಸಂಜ್ಞಾಯ

ನಮಸ್ತೇ ಸೌರಯೇವಿಭೋ

ನಮಸ್ತೇ ಯಮಸಂಜ್ಞಾಯ

ಶನೈಶ್ಚರ ನಮೋಸ್ತುತೇ

ಪ್ರಸಾದಂ ಕುರು ದೇವೇಶಃ

ದೀನಸ್ಯ ಪ್ರಣತಸ್ಯಚ''

 

"ಓಂ ಶನೈಶ್ಚರಾಯ ವಿದ್ಮಹೇ

ಸೂರ್ಯಪುತ್ರಾಯ ಧೀಮಹೀ

ತನ್ನೋ ಮಂದಃ ಪ್ರಚೋದಯಾತ್‌"

 

"ಓಂ ತ್ರಯಂಬಕಂ ಯಜಾಮಹೇ

ಸುಗಂಧಿಂ ಪುಷ್ಟಿವರ್ಧನಂ

ಉರ್ವಾರುಕಮೇವ ಬಂಧನಾನ್

ಮೃತ್ಯೊರ್ಮುಕ್ಷೀಯ ಮಾಂಮೃತಾತ್"‌

 

ಕೋಣಸ್ಥಃ ಪಿಂಗಲೋ ಬಭ್ರುಃ

ಕೃಷ್ಣೌ ರೌದ್ರೋಂತಕೋ ಯಮಃ

ಸೌರೀಃ ಶನಿಶ್ಚರೋ ಮಂದಃ

ಪಿಪ್ಪಲಾದೇನ ಸಂಸ್ತುತಃ

 

"ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ

ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ"

''ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಪಿತಯೇ

ಶನ್ಯೋರಭಿಸ್ತವಂತು ನಃ, ಓಂ ಶಂ ಶನೈಶ್ಚರಾಯ ನಮಃ"

 

"ಅಸ್ಯ ಶ್ರೀ ಶನೈಶ್ಚರ ಸ್ತೋತ್ರಸ್ಯ ದಶರಥ ಋಷಿಃ

ಶನೈಶ್ಚರೋ ದೇವತಾ ತ್ರಿಷ್ಟುಪ್ ಛಂದಃ

ಶನೈಶ್ಚರ ಪ್ರೀತ್ಯರ್ಥಂ ಜಪೇ ವಿನಿಯೋಗಃ

ದಶರಥ ಉವಾಚಃ ಕೋಣೋ ಅಂತಕೋ ರೌದ್ರಯಮೋಥ ಬಭ್ರುಃ

ಕೃಷ್ಣಃ ಶನಿಃ ಪಿಂಗಲ ಮಂದ ಸೌರಿ

ನಿತ್ಯಂ ಸ್ಮೃತೋಯೋ ಹರತೇ ಚ ಪೀಡಾಂ

ತಸ್ಮೈನಮಃ ಶ್ರೀ ರವಿನಂದನಾಯ "

ಇದನ್ನೂ ಓದಿ: ಮಕರ ರಾಶಿಯಲ್ಲಿ ಪವರ್ಫುಲ್ ಬುಧಾದಿತ್ಯ ರಾಜಯೋಗ, 4 ರಾಶಿಗಳ ಜನರಿಗೆ ಬಂಪರ್ ಲಾಭ!

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News