ಮಂಗಳ ಗೋಚರ : ಈ ಮೂರು ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸಿಗಲಿದೆ ಬಹು ದೊಡ್ಡ ಯಶಸ್ಸು ..!

ಮಂಗಳನ ಸಾಗಣೆಯು ಜೀವನದ ಹಲವು ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್ 27 ರಂದು ಮಂಗಳ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಮಂಗಳನ ಈ ಬದಲಾವಣೆಯು 3 ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿರುತ್ತದೆ.   

Written by - Ranjitha R K | Last Updated : Jun 13, 2022, 08:39 AM IST
  • ಈ ಮೂರು ರಾಶಿಯವರಿಗೆ ಭಾರೀ ಅದೃಷ್ಟ
  • ಉದ್ಯೋಗದಲ್ಲಿ ಸಿಗಲಿದೆ ಬಡ್ತಿ
  • ಪ್ರತಿ ಕೆಲಸದಲ್ಲೂ ಸಿಗಲಿದೆ ಯಶಸ್ಸು
ಮಂಗಳ ಗೋಚರ : ಈ ಮೂರು ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸಿಗಲಿದೆ ಬಹು ದೊಡ್ಡ ಯಶಸ್ಸು ..! title=
Mangala gochara effect (file photo)

ಬೆಂಗಳೂರು : ಜ್ಯೋತಿಷ್ಯದಲ್ಲಿ, ಮಂಗಳ ಗ್ರಹವನ್ನು ಶಕ್ತಿ, ಧೈರ್ಯ, ಭೂಮಿ, ಮದುವೆಯ ಅಂಶ ಎಂದು ಹೇಳಲಾಗಿದೆ. ಆದ್ದರಿಂದ, ವ್ಯಕ್ತಿಯ ಜಾತಕದಲ್ಲಿ ಮಂಗಳ ಸರಿಯಾದ ಸ್ಥಾನದಲ್ಲಿರುವುದು ಬಹಳ ಮುಖ್ಯವಾಗಿರುತ್ತದೆ. ಜೂನ್ 27 ರಂದು ಮಂಗಳ ಗ್ರಹವು ತನ್ನ ರಾಶಿಯನ್ನು ಬದಲಾಯಿಸುತ್ತಿದೆ. ಈ ದಿನ ಮಂಗಳ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳನ ರಾಶಿ ಬದಲಾವಣೆ ಇತರ ರಾಶಿಗಳ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಅದರಲ್ಲೂ ಮಂಗಳ ಸಂಕ್ರಮಣವು 3 ರಾಶಿಯ ಜನರಿಗೆ ಬಹಳ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ.  ಈ ಮೂರು ರಾಶಿಯವರ ವೃತ್ತಿ ಜೀವನದಲ್ಲಿ ಭಾರೀ ಪ್ರಗತಿಯಾಗಲಿದೆ. 

ಮಿಥುನ : ಮಿಥುನ ರಾಶಿಯವರಿಗೆ ಮಂಗಳನ ಸಂಚಾರವು ಶುಭ ಎಂದು ಸಾಬೀತಗಲಿದೆ. ಈ ಸಮಯದಲ್ಲಿ ಮಿಥುನ ರಾಶಿಯವರ ಆದಾಯವನ್ನು ಹೆಚ್ಚಿಸುತ್ತದೆ. ವೃತ್ತಿಯಲ್ಲಿ ಲಾಭವನ್ನು ನೀಡುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಕೂಡಾ ಸುಧಾರಣೆಯಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ಕೂಡಾ ದೊಡ್ಡ ಮಟ್ಟದ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ವಿವಾಹಿತರು ತಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. 

ಇದನ್ನೂ ಓದಿ : Shani Gochar 2022: ಇಂದಿನಿಂದ ಬರೋಬ್ಬರಿ ಒಂದು ತಿಂಗಳ ಬಳಿಕ ಈ ಜನರ ಕೆಟ್ಟ ಕಾಲ ಆರಂಭ, ಪಾರಾಗಲು ಈ ಉಪಾಯ ಮಾಡಿ

ಕರ್ಕಾಟಕ: ಮಂಗಳ ಸಂಚಾರವು ಕರ್ಕ ರಾಶಿಯವರ ವೃತ್ತಿಜೀವನಕ್ಕೆ ಉತ್ತಮ ಸಮಯವನ್ನು ತರುತ್ತದೆ. ಉದ್ಯೋಗ ಬದಲಾಯಿಸುವ ಅವಕಾಶ ಬರಬಹುದು. ಹೊಸ ಉದ್ಯೋಗಾವಕಾಶವು ನಿಮಗೆ ಸಂತೋಷವನ್ನು ನೀಡುತ್ತದೆ. ಉದ್ಯೋಗದಲ್ಲಿ ಬಡ್ತಿಯಾಗಲಿದ್ದು, ವೇತನ ಹೆಚ್ಚಳವಾಗಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ. ಹೊಸ ಆಸ್ತಿ ಖರೀದಿಸಬಹುದು. ವ್ಯಾಪಾರದಲ್ಲಿ ಹೂಡಿಕೆ ಮಾಡುವುದಾದರೆ  ಅದರಲ್ಲೂ ಲಾಭವಾಗಲಿದೆ. 

ಸಿಂಹ: ಮಂಗಳನ ರಾಶಿಯ ಬದಲಾವಣೆಯೊಂದಿಗೆ ಸಿಂಹ ರಾಶಿಯವರ ಅದೃಷ್ಟ ಕೂಡಾ ಬದಲಾಗಲಿದೆ. ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಕೆಲಸಗಳು ಮತ್ತೆ ಬಿರುಸು ಪಡೆಯಲಿದೆ. ಅದೃಷ್ಟದ ಸಹಾಯದಿಂದ ಹೊಸ  ಹೊಸ ಅವಕಾಶಗಳು ಬರುತ್ತವೆ.  ಈ ಸಮಯದಲ್ಲಿ ಮಾಡುವ  ಪ್ರಯಾಣದಿಂದ ಭವಿಷ್ಯದಲ್ಲಿ ದೊಡ್ಡ ಮಟ್ಟದ ಲಾಭವಾಗಬಹುದು. 

ಇದನ್ನೂ ಓದಿ : Early Marriage Tips: ವಿವಾಹ ಯೋಗ ಕೂಡಿ ಬರುತ್ತಿಲ್ಲವೇ? ಇಂದೇ ಈ ಉಪಾಯ ಅನುಸರಿಸಿ

 
( ಸೂಚನೆ : ಈ ಮೇಲಿನ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News