Guru Gochar Labha: ತನ್ನ ಸ್ವಂತ ರಾಶಿಯಲ್ಲಿ ದೇವಗುರು ಬೃಹಸ್ಪತಿ ಗೋಚರ, ಒಂದು ವರ್ಷದವರೆಗೆ ಈ ಜಾತಕದವರಿಗೆ ಧನವೃಷ್ಟಿಯ ಯೋಗ

Jupiter Transit 2022: ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹದ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ದೇವಗುರು ಎಂದೇ ಕರೆಯಲಾಗುವ ಬೃಹಸ್ಪತಿಯ ತನ್ನದೇ ಆದ ರಾಶಿಯಗಿರುವ ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದು, 4 ರಾಶಿಗಳ ಜಾತಕದವರಿಗೆ ಭಾರಿ ಲಾಭ ತರಲಿದೆ.  

Written by - Nitin Tabib | Last Updated : Jun 11, 2022, 06:17 PM IST
  • ಗುರು ಗ್ರಹವನ್ನು ಜ್ಞಾನ, ಮಕ್ಕಳು, ವೈವಾಹಿಕ ಜೀವನ, ವೃತ್ತಿ ಇತ್ಯಾದಿಗಳ ಕಾರಕ ಎನ್ನಲಾಗುತ್ತದೆ.
  • ಜಾತಕದಲ್ಲಿ ಗುರು ಗ್ರಹ ಪ್ರಬಲ ಸ್ಥಾನದಲ್ಲಿದ್ದರೆ, ಭಾರಿ ಸುಖ ಸಂತೋಷ ಪ್ರಾಪ್ತಿಯಾಗುತ್ತದೆ.
  • ದೇವಗುರು ಬೃಹಸ್ಪತಿ ಸ್ವಂತ ರಾಶಿ ಪ್ರವೇಶ 4 ರಾಶಿಗಳ ಜಾತಕದವರಿಗೆ ಬಂಪರ್ ಲಾಭ ಸಿಗಲಿದೆ.
Guru Gochar Labha: ತನ್ನ ಸ್ವಂತ ರಾಶಿಯಲ್ಲಿ ದೇವಗುರು ಬೃಹಸ್ಪತಿ ಗೋಚರ, ಒಂದು ವರ್ಷದವರೆಗೆ ಈ ಜಾತಕದವರಿಗೆ ಧನವೃಷ್ಟಿಯ ಯೋಗ title=
Guru Gochar Labh 2022

Brihaspati Gochar In Pisces: ಕಾಲಕಾಲಕ್ಕೆ ಸಂಭವಿಸುವ ಗ್ರಹಗಳ ಮತ್ತು ನಕ್ಷತ್ರಗಳ ರಾಶಿ ಪರಿವರ್ತನೆಯ ಪ್ರಭಾವ ಎಲ್ಲಾ 12 ಜಾತಕದವರ ಜೀವನದ ಮೇಲೆ ಗೋಚರಿಸುತ್ತದೆ. ಈ ಪ್ರಭಾವಗಳು ಒಳ್ಳೆಯ ಪ್ರಭಾವಗಲೇ ಆಗಿರಬಹುದು ಅಥವಾ ಕೆಟ್ಟ ಪ್ರಭಾವಗಲೇ ಆಗಿರಬಹುದು. ಅಂದರೆ, ಪ್ರತಿಯೊಂದು ರಾಶಿ ಮೇಲೆ ಈ ಪ್ರಭಾವವು ಭಿನ್ನವಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದೇವಗುರು ಬುಹಸ್ಪತಿ 13 ಏಪ್ರಿಲ್ 2022 ರಂದು ತನ್ನದೇ ಆದ ರಾಶಿಯಲ್ಲಿ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ ಮತ್ತು 22 ಏಪ್ರಿಲ್ 2023 ರವರೆಗೆ ಅಲ್ಲಿಯೇ ವಿರಾಜಮಾನನಾಗಿರಲಿದ್ದಾನೆ. ಗುರುವಿನ ಈ ರಾಶಿ ಪರಿವರ್ತನೆ 4 ರಾಶಿಯವರಿಗೆ ತುಂಬಾ ಪ್ರಯೋಜನಗಳನ್ನು ನೀಡಲಿದೆ. ಈ ಸಮಯದಲ್ಲಿ ಈ ರಾಶಿಯವರಿಗೆ ಧನಲಾಭ ಪ್ರಾಪ್ತಿಯಾಗಲಿದೆ. ಗುರು ಗ್ರಹವು ತನ್ನ ರಾಶಿಯನ್ನು ಬದಲಾಯಿಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಜೋತಿಷ್ಯ ಶಾಸ್ತ್ರದ ಪ್ರಕಾರ  ಗುರು ಗ್ರಹವನ್ನು ಜ್ಞಾನ, ಮಕ್ಕಳು, ವೈವಾಹಿಕ ಜೀವನ, ವೃತ್ತಿ ಇತ್ಯಾದಿಗಳ ಕಾರಕ ಎಂದು ಪರಿಗಣಿಸಲಾಗುತ್ತದೆ. ಯಾರ ಜಾತಕದಲ್ಲಿ ಗುರು ಗ್ರಹವು ಪ್ರಬಲ ಸ್ಥಾನದಲ್ಲಿದೆಯೋ ಅವರು ಜೀವನದ ಎಲ್ಲಾ ಸುಖಗಳನ್ನು ಪಡೆಯುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ದೇವಗುರು ಬೃಹಸ್ಪತಿ ತನ್ನ ಸ್ವಂತ ರಾಶಿಯಾದ ಮೀನ ರಾಶಿಯಲ್ಲಿ ಪ್ರವೇಶ ಮಾಡುವುದರಿಂದ 4 ರಾಶಿಗಳ ಜನರು ಬಂಪರ್ ಲಾಭವನ್ನು ಪಡೆಯಲಿದ್ದಾರೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ - ಈ ಒಂದು ವರ್ಷದವರೆಗೆ ಮೇಷ ರಾಶಿಯವರಿಗೆ ಬೃಹಸ್ಪತಿಯ ಮೀನ ಗೊಚರದ ಲಾಭ ಸಿಗಲಿದೆ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಸ್ಥಾನ ಅಥವಾ ಪ್ರತಿಷ್ಠೆ ಹೆಚ್ಚಾಗಲಿದೆ ಎನ್ನಲಾಗಿದೆ. ಈ ಅವಧಿಯಲ್ಲಿ ಕಾನೂನಿಗೆ ಸಂಬಂಧಿಸಿದ ವಿಷಯಗಳಿಂದ ದೂರವಿರಿ. ಇದೇ ವೇಳೆ ಆಸ್ತಿ ಅಥವಾ ಭೂಮಿ ಇತ್ಯಾದಿಗಳಿಂದ ಲಾಭದ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಿಮಗೆ ವಿದೇಶಿ ಅಥವಾ ಧಾರ್ಮಿಕ ಪ್ರಕರಣಗಳಿಂದ ನಿಮಗೆ ಲಾಭ ಸಿಗುವ ನಿರೀಕ್ಷೆ ಇದೆ.

ವೃಷಭ ರಾಶಿ - ವೃಷಭ ರಾಶಿಯವರಿಗೆ ಈ ಸಮಯ ಆರ್ಥಿಕವಾಗಿ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ವಿತ್ತೀಯ ಲಾಭದ ಎಲ್ಲಾ ಸಾಧ್ಯತೆಗಳಿವೆ ಮತ್ತು ನಿಮ್ಮ ಸಂಪತ್ತು ಹೆಚ್ಚಾಗಬಹುದು. ಆದರೆ ಈ ರಾಶಿಯ ಜನರು ಲಾಟರಿ ಅಥವಾ ಬೆಟ್ಟಿಂಗ್ ಇತ್ಯಾದಿಗಳಿಂದ ದೂರವಿದ್ದರೆ ಒಳ್ಳೆಯದು.

ಸಿಂಹ ರಾಶಿ - ಸಿಂಹ ಜಾತಕದವರಿಗೆ  ಈ ಸಮಯವು ತುಂಬಾ ಫಲಪ್ರದವಾಗಿರಲಿದೆ. ಈ ಅವಧಿಯಲ್ಲಿ ಹಣ ಹಾಗೂ ಕೌಟುಂಬಿಕ ಆಸ್ತಿಯಿಂದ ಲಾಭವಾಗಬಹುದು. ಇದೇ ವೇಳೆ ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಬೇಕಾಗುತ್ತದೆ. ನೀವು ಗುರುವಿನ ಪರವಾಗಿರುವುದರಿಂದ ನಿಮಗೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲಿದೆ.

ಇದನ್ನೂ ಓದಿ-Zodiac Sign: ನಿಜ ಪ್ರೀತಿ ಸಂಪಾದಿಸಲು ಈ ರಾಶಿಗಳ ಜನರು ಸಾಕಷ್ಟು ಕಷ್ಟಪಡಬೇಕು

ಕುಂಭ ರಾಶಿ - ಕುಂಭ ರಾಶಿಯವರಿಗೆ ಈ ಸಮಯ ತುಂಬಾ ಒಳ್ಳೆಯದಾಗಿರಲಿದೆ. ಈ ಅವಧಿಯಲ್ಲಿ ಹಣದ ಆಗಮನವಾಗಲಿದೆ. ಈ ರಾಶಿಯವರಿಗೆ ಈ ಸಮಯವು ಅನುಕೂಲಕರವಾಗಿರುತ್ತದೆ. ದುಂದುವೆಚ್ಚವನ್ನು ಆದಷ್ಟು ತಪ್ಪಿಸಿ.

ಇದನ್ನೂ ಓದಿ-Zodiac signs: ತಾವು ಹೇಳಿದ್ದೇ ಸರಿ ಎನ್ನುವ ರಾಶಿಯವರು ಇವರು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News