Shani Gochar 2022: ಇಂದಿನಿಂದ ಬರೋಬ್ಬರಿ ಒಂದು ತಿಂಗಳ ಬಳಿಕ ಈ ಜನರ ಕೆಟ್ಟ ಕಾಲ ಆರಂಭ, ಪಾರಾಗಲು ಈ ಉಪಾಯ ಮಾಡಿ

Vakri Shani Gochar July 2022: ಶನಿ ಗ್ರಹದ ದೃಷ್ಟಿಕೋನದಿಂದ ವರ್ಷ 2022 ತುಂಬಾ ವಿಶೇಷವಾಗಿದೆ. ಏಪ್ರಿಲ್ 29, 2022 ರಿಂದ ಶನಿ ಗೋಚರ ಸಂಭವಿಸಿದೆ. 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶನಿ ತನ್ನದೇ ಆದ ಕುಂಭ ರಾಶಿಯಲ್ಲಿ ಗೋಚರಿಸಿದ್ದಾನೆ. ಆದರೆ, ಕೆಲವೇ ದಿನಗಳ ಬಳಿಕ ಆತ ಪುನಃ ಮಕರ ರಾಶಿಯಲ್ಲಿ ವಕ್ರನಡೆ ಅನುಸರಿಸಲಿದ್ದು, ಆತನ ಈ ಹಿಮ್ಮುಖ ಚಲನೆ ಕೆಲರಾಶಿಗಳ ಜನರ ಪಾಲಿಗೆ ಸಂಕಷ್ಟಗಳನ್ನು ತಂದೊಡ್ಡಲಿದೆ.  

Written by - Nitin Tabib | Last Updated : Jun 12, 2022, 07:26 PM IST
  • ಜೂನ್ 5 ರಿಂದ ಶನಿಗ್ರಹವು ತನ್ನ ವಕ್ರನಡೆಯನ್ನು ಅನುಸರಿಸಿದೆ.
  • ಶನಿಯು ಕುಂಭ ರಾಶಿಯಿಂದ ಹಿಮ್ಮುಖ ಸ್ಥಿತಿಯಲ್ಲಿ ಸಾಗಿ ಪುನಃ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಜುಲೈ 12 ರಂದು ಸಂಭವಿಸಲಿರುವ ಈ ಶನಿಯ ಸ್ಥಾನ ಪಲ್ಲಟ ಕೆಲವರಿಗೆ ತೊಂದರೆಗಳನ್ನು ತರಲಿದೆ.
Shani Gochar 2022: ಇಂದಿನಿಂದ ಬರೋಬ್ಬರಿ ಒಂದು ತಿಂಗಳ ಬಳಿಕ ಈ ಜನರ ಕೆಟ್ಟ ಕಾಲ ಆರಂಭ, ಪಾರಾಗಲು ಈ ಉಪಾಯ ಮಾಡಿ title=
Shani Gochar 2022

Shani Gochar 12 July 2022 Effect: ಜೂನ್ 5 ರಿಂದ ಶನಿಗ್ರಹವು ತನ್ನ ವಕ್ರನಡೆಯನ್ನು ಅನುಸರಿಸಿದೆ. ಶನಿಯ ಈ ಹಿಮ್ಮುಖ ಚಲನೆ ಕೆಲ ರಾಶಿಗಳ ಜನರಿಗೆ ಒಳ್ಳೆಯ ದಿನಗಳನ್ನು ದಯಪಾಲಿಸಿದ್ದರೆ, ಇನ್ನುಳಿದವರಿಗೆ ಕೆಟ್ಟ ದಿನಗಳು ಆರಂಭವಾಗಿವೆ. ಆದರೆ ಮುಂದಿನ ತಿಂಗಳು ಶನಿಯ ಸ್ಥಾನದಲ್ಲಿ ಮತ್ತೊಮ್ಮೆ ದೊಡ್ಡ ಬದಲಾವಣೆಯಾಗಲಿದೆ. ಶನಿಯು ಕುಂಭ ರಾಶಿಯಿಂದ ಹಿಮ್ಮುಖ ಸ್ಥಿತಿಯಲ್ಲಿ ಸಾಗಿ ಪುನಃ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜುಲೈ 12 ರಂದು ಸಂಭವಿಸಲಿರುವ ಈ ಶನಿಯ ಸ್ಥಾನ ಪಲ್ಲಟ ಕೆಲವರಿಗೆ ತೊಂದರೆಗಳನ್ನು ತರಲಿದೆ. ಶನಿಯ ಈ ಹಿಮ್ಮುಖ ಚಲನೆ ಯಾವ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿಯುವುದು ಇಲ್ಲಿ ಮಹತ್ವದ್ದಾಗುತ್ತದೆ.

ಪ್ರಸ್ತುತ ಈ ಜನರ ಮೇಲೆ ಶನಿಯ ಸಾಡೆಸಾತಿ ಹಾಗೂ ಎರಡೂವರೆ ವರ್ಷಗಳ ಕಾಟ ನಡೆಯುತ್ತಿದೆ
ಏಪ್ರಿಲ್ 29 ರಂದು ಕುಂಭ ರಾಶಿಯಲ್ಲಿ ಶನಿ ಪ್ರವೇಶದ ನಂತರ ಮೀನ ರಾಶಿಯವರಿಗೆ ಮೊದಲ ಹಂತದ ಸಾಡೇ ಸತಿ ಆರಂಭವಾಗಿದೆ. ಕುಂಭ ರಾಶಿಯವರ ಮೇಲೆ ಎರಡನೇ ಹಂತದ ಸಾಡೇ ಸತಿ ಶುರುವಾಗಿದೆ. ಮಕರ ರಾಶಿಯವರಿಗೆ ಅತ್ಯಂತ ನೋವಿನಿಂದ ಕೂಡಿರುವ ಮತ್ತು ತೊಂದರೆಗಳಿಂದ ತುಂಬಿರುವ ಸಾಡೇ ಸತಿಯ ಕೊನೆಯ ಹಂತವು ನಡೆಯುತ್ತಿದೆ. ಇದಲ್ಲದೆ, ಕರ್ಕ ಹಾಗೂ ವೃಶ್ಚಿಕ ರಾಶಿಯವರ ಮೇಲೆ ಶನಿಯ ಎರಡೂವರೆ ವರ್ಷಗಳ ಕಾಟ ಸಾಗುತ್ತಿದೆ.

ಇದನ್ನೂ ಓದಿ-Feng Shui Tips: ಅವಿವಾಹಿತರು ತಮ್ಮ ಬೇಡ ರೂಂನಲ್ಲಿ ಈ ವಸ್ತುಗಳನ್ನು ಇಡಬಾರದು, ಕಾರಣ ಇಲ್ಲಿದೆ

ಜುಲೈ 12 ರಿಂದ ಈ ಜನರಿಗೆ ತೊಂದರೆಗಳು ಎದುರಾಗಲಿವೆ
ಜುಲೈ 12, 2022 ರಂದು, ಶನಿಯು ತನ್ನ ಹಿಮ್ಮುಖ ಚಲನೆಯ ಮೂಲಕ ಮತ್ತೆ ಮಕರ ರಾಶಿಯನ್ನು ಪ್ರವೆಶಿಸಲಿದ್ದಾನೆ, ಇದರಿಂದಾಗಿ 2 ತಿಂಗಳ ಕಾಲ ಕೆಲ ಜನರಿಗೆ ಸಾಡೆಸಾತಿಯಿಂದ ಮುಕ್ತಿ ಸಿಗಲಿದೆ. ಧನು ರಾಶಿಯವರಿಗೆ ಮತ್ತೊಮ್ಮೆ ಹೊಡೆತ ಬೀಳಲಿದೆ. ನಂತರ ಅವರಿಗೆ ಮತ್ತೆ ಜನವರಿ 17, 2023 ರಂದು ಸಾಡೇ ಸಾತಿಯಿಂದ ಮುಕ್ತಿ ಸಿಗಲಿದೆ. ಶನಿಯು ಹಿಮ್ಮುಖ ಸ್ಥಿತಿಯಲ್ಲಿ ಮಕರ ರಾಶಿ ಪ್ರವೇಶದ ನಂತರೆ ತುಲಾ ಮತ್ತು ಮಿಥುನ ರಾಶಿಯವರಿಗೆ ಶನಿಯ ಎರಡೂವರೆ ವರ್ಷಗಳ ಕಾಟ ಆರಂಭವಾಗಲಿದೆ.

ಇದನ್ನೂ ಓದಿ-Early Marriage Tips: ವಿವಾಹ ಯೋಗ ಕೂಡಿ ಬರುತ್ತಿಲ್ಲವೇ? ಇಂದೇ ಈ ಉಪಾಯ ಅನುಸರಿಸಿ

ಶನಿದೆಸೆಯಿಂದ ಪಾರಾಗಲು ಇಲ್ಲಿವೆ ಉಪಾಯಗಳು
ಜುಲೈ 12 ರಿಂದ ಸಾಡೆಸಾತಿ ಮತ್ತು ಎರಡೂವರೆ ವರ್ಷಗಳ ಕಾಟವನ್ನು ಎದುರಿಸುವವರು ಇಂದಿನಿಂದಲೇ ಕೆಲ ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಬೇಕು. ಶನಿವಾರದಂದು ಶನಿ ಚಾಲೀಸವನ್ನು ಓದಿ, ಶನಿ ದೇವಸ್ಥಾನದಲ್ಲಿ ಛಾಯಾದಾನ ಕೈಗೊಳ್ಳಿ. ಅಷ್ವಸ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಒಳ್ಳೆಯ ಕಾರ್ಯಗಳನ್ನು ಮಾಡಿ, ಅಸಹಾಯಕರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಿ. ಶನಿಯು ಕರ್ಮಕ್ಕೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ, ಆದ್ದರಿಂದ ಈ ಸಮಯದಲ್ಲಿ ಒಳ್ಳೆಯ ಕರ್ಮಗಳನ್ನು ಮಾಡಿ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
         

Trending News