ಮೊಡವೆಯಿಂದ ಮುಕ್ತಿ ಪಡೆಯಲು ಸಿಂಪಲ್ ಮನೆ ಮದ್ದು..!

ಮುಖದ ಮೇಲಿನ ಮೊಡವೆಯ ಸಮಸ್ಯೆ ಅದನ್ನು ಅನುಭವಿಸಿದವರಿಗೇ ಗೊತ್ತು. ಒಂದು ಬದಿಯಲ್ಲಿ ಮುಖದ ಅಂದ ಗೆಡಿಸುತ್ತದೆ. ಇನ್ನೊಂದು ಬದಿಯಲ್ಲಿ ಅಸಾಧ್ಯ ನೋವನ್ನುಂಟು ಮಾಡುತ್ತದೆ.    

Written by - Ranjitha R K | Last Updated : Jun 24, 2021, 02:04 PM IST
  • ಮುಖದ ಮೇಲಿನ ಮೊಡವೆಯ ಸಮಸ್ಯೆ ಅದನ್ನು ಅನುಭವಿಸಿದವರಿಗೇ ಗೊತ್ತು
  • ನಾನಾ ಕಾರಣಗಳಿಂದಾಗಿ ನಿಮ್ಮ ಮುಖದಲ್ಲಿ ಮೊಡವೆಗಳು ಏಳಬಹುದು.
  • ಮೊಡವೆಗಳಿಂದ ಮುಕ್ತಿ ಪಡೆಯಲು ಸಿಂಪಲ್ ಮನೆ ಮದ್ದು ಇಲ್ಲಿದೆ.
ಮೊಡವೆಯಿಂದ ಮುಕ್ತಿ ಪಡೆಯಲು ಸಿಂಪಲ್ ಮನೆ ಮದ್ದು..! title=
ಮುಖದ ಮೇಲಿನ ಮೊಡವೆಯ ಸಮಸ್ಯೆ ಅದನ್ನು ಅನುಭವಿಸಿದವರಿಗೇ ಗೊತ್ತು (file photo zee news)

ನವದೆಹಲಿ : ಮುಖದ ಮೇಲಿನ ಮೊಡವೆಯ ಸಮಸ್ಯೆ (pimple treatment) ಅದನ್ನು ಅನುಭವಿಸಿದವರಿಗೇ ಗೊತ್ತು. ಒಂದು ಬದಿಯಲ್ಲಿ ಮುಖದ ಅಂದ ಗೆಡಿಸುತ್ತದೆ. ಇನ್ನೊಂದು ಬದಿಯಲ್ಲಿ ಅಸಾಧ್ಯ ನೋವನ್ನುಂಟು ಮಾಡುತ್ತದೆ.  ನಿಮಗೆ ಗೊತ್ತಿರಲಿ.  ನಿಮ್ಮ ಹದಗೆಟ್ಟ ಊಟೋಪಚಾರ, ಶರೀರದಲ್ಲಿ ಯಾವುದೋ ಒಂದು ಪೋಷಕಾಂಶದ ಕೊರತೆ, ಧೂಳು, ಮಣ್ಣು ಇತ್ಯಾದಿ ಕಾರಣಗಳಿಂದಲೂ ಮುಖದ ಮೇಲೆ ಮೊಡವೆಗಳು ಏಳಬಹುದು.  ಅಧಿಕ ಎಣ್ಣೆಯ ಖಾದ್ಯ, ಮಸಾಲೆ ಖಾದ್ಯ ತಿನ್ನುವುದರಿಂದಲೂ ಮೊಡವೆಗಳು ಏಳಬಹುದು.  ಅನಾರೋಗ್ಯಕರ ಸ್ಕಿನ್ ಕೂಡಾ (unhealthy skin) ಮೊಡವೆಗಳ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಗಾಬರಿಯಾಗಬೇಕಿಲ್ಲ. ಮೊಡವೆಗಳ ಸಮಸ್ಯೆ ನಿವಾರಿಸಲು ಕೆಲವೊಂದು ಮನೆ ಮದ್ದುಗಳ (Home remedies for pimple) ಪರಿಹಾರ ಹೇಳುತ್ತೇವೆ. 

ಮೊಡವೆಗಳಿಗೆ ಮನೆಮದ್ದು..!
1. ಜೇನು:
ಜೇನಿನಲ್ಲಿ (Honey) ಆಂಟಿಬ್ಯಾಕ್ಟೀರಿಯಲ್ ಗುಣ ಇರುತ್ತದೆ.  ಇದು ಮೊಡವೆಗಳ ವಿರುದ್ಧ ಕೆಲಸ ಮಾಡುತ್ತವೆ. ನಿತ್ಯವೂ ಜೇನು ತಿಂದರೆ ಅಥವಾ ಜೇನನ್ನು ಮುಖದ ಮೇಲೆ ಲೇಪಿಸಿಕೊಂಡರೆ ಮೊಡವೆಯ (Pimple) ಸಮಸ್ಯೆಯಿಂದ ಪಾರಾಗಬಹುದು. 

ಇದನ್ನೂ ಓದಿ : ಹೀಗೆ ಮಾಡಿದರೆ ಸೊಳ್ಳೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ

2. ಗ್ರೀನ್ ಟೀ
ಗ್ರೀನ್ ಟೀ (green tea) ಇಂದ ಶರೀರಕ್ಕೆ ಹಲವು ಲಾಭ ಇದೆ.  ಬೊಜ್ಜು ಕರಗಿಸಲು ಗ್ರೀನ್ ಟೀ ಬಹಳ ಉಪಯೋಗಿ.  ಗ್ರೀನ್ ಟೀಯಲ್ಲಿ ಆಂಟಿ ಇನಫ್ಲಮೇಟರಿ ಗುಣ ಇದೆ. ಇದು ನೋವು ಕಡಿಮೆ ಮಾಡುತ್ತದೆ. ಗ್ರೀನ್ ಟಿ ಕುಡಿದರೆ ಪಿಂಪಲ್ಸ್ ಸಮಸ್ಯೆ ಕಡಿಮೆಯಾಗುತ್ತದೆ. 

3. ಅಲೋವೇರಾ
ಔಷಧೀಯ ಗುಣಗಳಿಂದ ಸಮೃದ್ಧವಾಗಿರು ಗಿಡ ಅಲೋವೇರಾ (Aloevera). ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಅತೀಮುಖ್ಯ ಅಲೋವೇರಾ. ಅಲೋವೇರಾ ಜ್ಯೂಸ್ (Alovera juice) ಕುಡಿದರೆ ದೇಹದಲ್ಲಿ ರುವ ವಿಷಯುಕ್ತ ವಸ್ತುಗಳು ದೇಹದಿಂದ ಹೊರಕ್ಕೆ ಹೋಗುತ್ತವೆ.  ಅಲೋವೇರಾ ಕುಡಿದರೆ ಮೊಡವೆ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. 
ಸಲಹೆಯ ರೂಪದಲ್ಲಿ ಮೇಲಿನ ಮಾಹಿತಿಯನ್ನು ನೀಡಲಾಗಿದೆ. ಇದು ಯಾವುದೇ ಯೋಗ್ಯ ಚಿಕಿತ್ಸಾ ಕ್ರಮಕ್ಕೆ ಇದು ಪರ್ಯಾಯ ಅಲ್ಲ. ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಬಹುದು.

ಇದನ್ನೂ ಓದಿ : Yoga For PCOD, PCOS: ಔಷಧಿಯಲ್ಲ, ಈ 3 ಯೋಗಾಸನಗಳಿಂದ ದೂರವಾಗುತ್ತೆ ಪಿಸಿಒಡಿ, ಪಿಸಿಓಎಸ್ ಸಮಸ್ಯೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News