ಬದಲಾಗುತ್ತಿರುವ ಹಮಾನದಿಂದ ಶೀತ ಮತ್ತು ಕೆಮ್ಮು ಹೆಚ್ಚಾಗಿದೆ. ವಿಶೇಷವಾಗಿ ಕೋವಿಡ್ 19 ಸಮಯದಲ್ಲಿ ಜನರು ಕೆಮ್ಮಿನಿಂದ ತುಂಬಾ ಬೇಸತ್ತಿದ್ದಾರೆ. ಇದಕ್ಕೆ ಭಯ ಪಡುವ ಅಗತ್ಯವಿಲ್ಲ. ಇದಕ್ಕೆಲ್ಲ ರಾಮಬಾಣ ನಿಮ್ಮ ಮನೆಯಲ್ಲಿ ಲಭ್ಯವಿದೆ. ಹೌದು, ನಿಮ್ಮ ಅಡುಗೆಮನೆಯ ಕೆಲವು ಮಸಾಲೆ ಪುಡಿ ಜೊತೆ ಜೇನುತುಪ್ಪವನ್ನ ಪ್ರತಿದಿನ ರಾತ್ರಿ ತಿನ್ನುವುದರಿಂದ ಇವೆಲ್ಲ ನಿಯಂತ್ರ ಮಾಡಬಹುದು. ಹೇಗೆ ಅನ್ನುವುದನ್ನೇ ಈ ಕೆಳೆಗೆ ಓದಿ..
ಮಸಾಲೆಗಳ ಮಿಶ್ರಣ ಮಾಡುವುದು ಹೇಗೆ ?
ಅಡಿಗೆಮನೆ(Kitchen Room)ಯಲ್ಲಿ ಸಿಗುವ ಕರಿಮೆಣಸು, ಲವಂಗ, ಒಣ ಶುಂಠಿ ಮತ್ತು ಪಿಪಾಲಿ ಇವುಗಳನ್ನ ಸಮ ಪ್ರಮಾಣ ತೆಗೆದುಕೊಂಡು ಎಲ್ಲವನ್ನೂ ಪುಡಿ ಮಾಡಿ. ಪುಡಿ ಮಾಡಲು ಮಿಕ್ಸಿ ಬದಲಿಗೆ ಕಲ್ಲು ಬಳಸಿ.
ಇದನ್ನೂ ಓದಿ : Corona Second Wave ಶ್ವಾಸಕೋಶಗಳನ್ನು ಆರೋಗ್ಯಕರವಾಗಿರಿಸುವುದು ಹೇಗೆ? ಇಲ್ಲಿದೆ ನೋಡಿ
ಸೇವಿಸುವುದು ಹೇಗೆ?
ಈ ಮಿಶ್ರಣದ ಬಳಕೆಯಲ್ಲಿ ಸಮ ಪ್ರಮಾಣವು ಬಹಳ ಮುಖ್ಯವಾಗಿದೆ. ಅಧಿಕವಾಗಿ ತಿನ್ನುವುದರಿಂದ ಅಪಾಯ ತಪ್ಪಿದಲ್ಲ. ಆದ್ದರಿಂದ ಅರ್ಧ ಟೀ ಚಮಚ ಮಸಾಲೆ(special Masala) ಮಿಶ್ರಣವನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಬೇಕು. ಸೇವಿಸಿದ ಕೂಡಲೇ ನೀರು ಕುಡಿಯಬೇಡಿ.
ಇದನ್ನೂ ಓದಿ : Badam For Health: ದಿನ ಬೆಳಿಗ್ಗೆ ನೆನೆಸಿದ 5 ಬಾದಾಮಿ ಸೇವಿಸಿ; ಇದರಿಂದ ಮೆದುಳು ಚುರುಕಾಗುತ್ತದೆ!
ಇದರ ಸೇವನೆಯಿಂದ ಪ್ರಯೋಜನವೇನು?
ಜೇನುತುಪ್ಪ ಮತ್ತು ವಿಶೇಷ ಮಸಾಲೆ ಪದಾರ್ಥಗಳ ಸೇವನೆಯು ಅನೇಕ ಪ್ರಯೋಜನಗಳನ್ನು ನೀಡುತ್ತದೆ.
1. ಈ ರಾಮಬಾಣವು ಶೀತ ಮತ್ತು ಕೆಮ್ಮನ್ನು ನಿವಾರಿಸುವ ಶಕ್ತಿ ಇದೆ. ನಿಮಗೆ ಜೇನು ತುಪ್ಪ ಸಿಗದಿದ್ದರೆ ಅದನ್ನು ಬೆಲ್ಲದೊಂದಿಗೆ ಸಹ ತಿನ್ನಬಹುದು. ಕೆಮ್ಮು ಮತ್ತು ಗಂಟಲು ನೋವನ್ನು ಗುಣಪಡಿಸಲು ಇದು ತುಂಬಾ ಸಹಾಯಕವಾಗಿದೆ.
2. ಕರಿಮೆಣಸಿನಲ್ಲಿ ರೋಗ ನಿರೋಧಕ ಶಕ್ತಿ(Immunity Power)ಯನ್ನು ಹೆಚ್ಚಿಸುವ ಸಾಮರ್ಥ್ಯ ಇದೆ.
ಜೇನುತುಪ್ಪದೊಂದಿಗೆ ಹೆಚ್ಚಾಗುತ್ತವೆ. ಇದಲ್ಲದೆ, ಇದು ಹೊಟ್ಟೆಯ ಸಮಸ್ಯೆಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು.
ಇದನ್ನೂ ಓದಿ : ಕರೋನಾ ಕಾಲದಲ್ಲಿ ಸೇಫ್ ಸಂಸಾರಕ್ಕೆ ಇಪ್ಪತ್ತು ಸೂತ್ರಗಳು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.