Mangala Shukra Yuti: ಐದು ದಿನಗಳ ಬಳಿಕ ಈ ರಾಶಿಯವರಿಗೆ ಹಣದ ಮಳೆಯನ್ನೇ ಸುರಿಸಲಿದ್ದಾರೆ ಮಂಗಳ-ಶುಕ್ರ!

Mars-Venus Conjunction in Gemini: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿ ಚಕ್ರದಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸಂಧಿಸಿದಾಗ ಅದನ್ನು ಗ್ರಹಗಳ ಸಂಯೋಗ, ಇಲ್ಲವೇ ಗ್ರಹಗಳ ಯುತಿ ಎಂದು ಕರೆಯಲಾಗುತ್ತದೆ. ಇದೀಗ ಶೀಘ್ರದಲ್ಲೇ ಮಿಥುನ ರಾಶಿಯಲ್ಲಿ ಮಂಗಳ, ಶುಕ್ರ ಗ್ರಹಗಳು ಒಟ್ಟಿಗೆ ಸೇರಲಿದ್ದು ಇದು ಮೂರು ರಾಶಿಯವರ ಜೀವನದಲ್ಲಿ ಧನ ವೃಷ್ಟಿಯನ್ನು ಸುರಿಸಲಿದೆ ಎಂದು ಹೇಳಲಾಗುತ್ತಿದೆ.  

Written by - Yashaswini V | Last Updated : Apr 27, 2023, 11:05 AM IST
  • ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಬೆಂಕಿ ಮತ್ತು ಹೊಳಪಿನ ಅಂಶವೆಂದು ಹೇಳಲಾಗುತ್ತದೆ.
  • ಮಂಗಳನು ದೇಹದ ರಕ್ತದ ಮೇಲೆ ಹೆಚ್ಚು ಪ್ರಭಾವ ಬೀರುತ್ತಾನೆ ಎನ್ನಲಾಗುತ್ತದೆ.
  • ಇದಲ್ಲದೆ, ಶುಕ್ರನನ್ನು ಪ್ರೀತಿ, ಪ್ರೇಮ, ಸೌಂದರ್ಯ, ಸಂಪತ್ತಿನ ಅಂಶವೆಂದು ಹೇಳಲಾಗುತ್ತದೆ.
Mangala Shukra Yuti: ಐದು ದಿನಗಳ ಬಳಿಕ ಈ ರಾಶಿಯವರಿಗೆ ಹಣದ ಮಳೆಯನ್ನೇ ಸುರಿಸಲಿದ್ದಾರೆ ಮಂಗಳ-ಶುಕ್ರ! title=

Mangala Shukra Yuti: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ಗ್ರಹದ ಚಲನೆಯಲ್ಲಿನ ಸಣ್ಣ ಬದಲಾವಣೆಯೂ ಸಹ ವ್ಯಕ್ತಿಯ ಜೀವನದ ಮೇಲೆ ಬಹಳ ಮಹತ್ತರ ಪರಿಣಾಮವನ್ನು ಬೀರುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಇನ್ನು ಐದು ದಿನಗಳಲ್ಲಿ ಪ್ರೀತಿ, ಸೌಂದರ್ಯ, ಐಷಾರಾಮಿ, ಸಂಪತ್ತು ಕಾರಕ ಗ್ರಹ ಎಂದು ಬಣ್ಣಿಸಲ್ಪಡುವ ಶುಕ್ರನು ಮೇ 2ರಂದು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈಗಾಗಲೇ ಮಂಗಳನು ಮಿಥುನ ರಾಶಿಯಲ್ಲಿ ಇರುವುದರಿಂದ ಈ ಸಂದರ್ಭದಲ್ಲಿ ಮಂಗಳ-ಶುಕ್ರರ ಯುತಿ ಸಂಭವಿಸಲಿದೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಬೆಂಕಿ ಮತ್ತು ಹೊಳಪಿನ ಅಂಶವೆಂದು ಹೇಳಲಾಗುತ್ತದೆ. ಮಂಗಳನು ದೇಹದ ರಕ್ತದ ಮೇಲೆ ಹೆಚ್ಚು ಪ್ರಭಾವ ಬೀರುತ್ತಾನೆ ಎನ್ನಲಾಗುತ್ತದೆ. ಇದಲ್ಲದೆ, ಶುಕ್ರನನ್ನು ಪ್ರೀತಿ, ಪ್ರೇಮ, ಸೌಂದರ್ಯ, ಸಂಪತ್ತಿನ ಅಂಶವೆಂದು ಹೇಳಲಾಗುತ್ತದೆ. 

ಮಂಗಳನು 10 ಮೇ 2023ರಂದು ಮಿಥುನ ರಾಶಿಯಿಂದ ಹೊರನಡೆಯಲಿದ್ದಾನೆ. ಎಂದರೆ ಎಂಟು ದಿನಗಳ ಕಾಲ ಮಿಥುನ ರಾಶಿಯಲ್ಲಿ ಮಂಗಳ-ಶುಕ್ರರ ಸಂಯೋಜನೆ ಇರಲಿದೆ. ಮಂಗಳ-ಶುಕ್ರರ ಯುತಿಯು ಎಲ್ಲಾ 12 ರಾಶಿಗಳ ಮೇಲೆ ಕಂಡು ಬರುತ್ತದೆ. ಆದರೂ, ಇದನ್ನು ಮೂರು ರಾಶಿಯವರಿಗೆ ಸುವರ್ಣ ಸಮಯ ಎಂದು ಬಣ್ಣಿಸಲಾಗುತ್ತಿದೆ. ಈ ಸಮಯದಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಏನು ತಿಳಿಯೋಣ... 

ಇದನ್ನೂ ಓದಿ- Lucky Zodiac Signs: ಈ ರಾಶಿಯವರ ಮೇಲೆ ಸದಾ ಇರುತ್ತೆ ತಾಯಿ ಲಕ್ಷ್ಮಿ ಕೃಪೆ

ಮಿಥುನ ರಾಶಿಯಲ್ಲಿ ಮಂಗಳ-ಶುಕ್ರರ ಸಂಯೋಗ- ಈ ರಾಶಿಯವರಿಗೆ ಧನ ವೃಷ್ಟಿ: 
ಮೇಷ ರಾಶಿ: 

ಮಿಥುನ ರಾಶಿಯಲ್ಲಿ ನಿರ್ಮಾಣವಾಗುತ್ತಿರುವ ಮಂಗಳ- ಶುಕ್ರರ ಯುತಿ ಅಥವಾ ಮಂಗಳ ಶುಕ್ರರ ಸಂಯೋಗವು ಮೇಷ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಬಲವನ್ನು ನೀಡಲಿದೆ. ಈ ರಾಶಿಯವರು ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗವನ್ನು ಏರುವರು. ಮಾತ್ರವಲ್ಲ, ವ್ಯಾಪಾರ-ವ್ಯವಹಾರದಲ್ಲಿಯೂ ಹೆಚ್ಚಿನ ಲಾಭವನ್ನು ಗಳಿಸುವರು. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಯತ್ನಿಸುತ್ತಿರುವವರಿಗೂ ಸಹ ಅತ್ಯುತ್ತಮ ಸಮಯ ಇದಾಗಿದೆ. 

ವೃಷಭ ರಾಶಿ: 
ಇನ್ನು ಐದು ದಿನಗಳಲ್ಲಿ ಶುಕ್ರ ರಾಶಿ ಪರಿವರ್ತನೆಯಿಂದ ನಿರ್ಮಾಣಗೊಳ್ಳಲಿರುವ ಮಂಗಳ-ಶುಕ್ರರ ಸಂಯೋಜನೆಯು ವೃಷಭ ರಾಶಿಯವರಿಗೆ ಬಂಗಾರದ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ವೃಷಭ ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗಲಿದ್ದು ಮನೆಯಲ್ಲಿ ಸುಖ, ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ. ಎಂತಹ ಬೆಟ್ಟದಂತ ಸಮಸ್ಯೆಗಳು ಎದುರಾದರೂ ಸಹ ಮಂಜಿನಂತೆ ಕರಗುವುದು. ಇದರಿಂದ ನೀವು ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದ್ದು ಐಷಾರಾಮಿ ಜೀವನವನ್ನು ಆನಂದಿಸುವಿರಿ. 

ಇದನ್ನೂ ಓದಿ- ಮೇ ಮಾಸದಲ್ಲಿ ಗುರು ರಾಶಿ ಪರಿವರ್ತನೆ: ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ ಯೋಗ

ಕನ್ಯಾ ರಾಶಿ: 
ಮೇ ತಿಂಗಳಿನಲ್ಲಿ ರೂಪುಗೊಳ್ಳಲಿರುವ ಮಂಗಳ ಶುಕ್ರರ ಸಂಯೋಜನೆಯಿಂದಾಗಿ ಕನ್ಯಾ ರಾಶಿಯವರು ಮುತ್ತಿದ್ದೆಲ್ಲಾ ಚಿನ್ನ ಎಂಬಂತಹ ಸ್ಥಿತಿ ಇದೆ. ಈ ಸಮಯದಲ್ಲಿ ಕನ್ಯಾ ರಾಶಿಯವರು ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವರು. ಮಾತ್ರವಲ್ಲ, ವ್ಯಾಪಾರ-ವ್ಯವಹಾರದಲ್ಲಿಯೂ ಕೂಡ ಬಂಪರ್ ಲಾಭದ ನಿರೀಕ್ಷೆ ಇದ್ದು ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ನೀವು ಪಡೆಯುವಿರಿ. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದ್ದು ಕೌಟುಂಬಿಕ ಸುಖವನ್ನು ಅನುಭವಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News