Shani Ashubha Yoga: ಜೀವನವನ್ನು ಸಂಪೂರ್ಣವಾಗಿ ನಾಶಪಡಿಸಬಲ್ಲ ಶನಿಯ ಈ 3 ಅಪಾಯಕಾರಿ ಯೋಗಗಳಿವು

Shani Ashubha Yoga: ಮನುಷ್ಯರ ಪಾಪಗಳಿಗೆ ತಕ್ಕಂತೆ ಶಿಕ್ಷೆ ನೀಡುವ ಶನಿ ದೇವನ ಹೆಸರು ಕೇಳಿದೊಡನೆ ಜನರು ಬೆಚ್ಚಿ ಬೀಳುತ್ತಾರೆ. ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದರೆ ಆತನ ಕಷ್ಟಗಳಿಗೆ ಕೊನೆಯೇ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಅದರಲ್ಲೂ, ಜಾತಕದಲ್ಲಿ ನಿರ್ಮಾಣವಾಗುವ ಶನಿಗೆ ಸಂಬಂಧಿಸಿದ ಕೆಲವು ಯೋಗಗಳನ್ನು ತುಂಬಾ ಅಪಾಯಕಾರಿ ಯೋಗಗಳು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Apr 26, 2023, 10:41 AM IST
  • ಶನಿ ಸೂರ್ಯ ಪುತ್ರನೇ ಆದರೂ ಸಹ ಇವರಿಬ್ಬರ ನಡುವೆ ಹೊಂದಾಣಿಕೆ ಇರುವುದಿಲ್ಲ.
  • ಹಾಗಾಗಿ, ಜಾತಕದಲ್ಲಿ ಶನಿ ಮತ್ತು ಸೂರ್ಯರಿಂದ ಉಂಟಾಗುವ ಯೋಗವು ವ್ಯಕ್ತಿಯ ಪ್ರತಿ ಕೆಲಸದಲ್ಲಿಯೂ ಅಡ್ಡಿಪಡಿಸುತ್ತದೆ.
  • ಎಷ್ಟೇ ಕಠಿಣ ಪರಿಶ್ರಮದ ಹೊರತಾಗಿಯೂ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯವಾಗುವುದೇ ಇಲ್ಲ.
Shani Ashubha Yoga: ಜೀವನವನ್ನು ಸಂಪೂರ್ಣವಾಗಿ ನಾಶಪಡಿಸಬಲ್ಲ ಶನಿಯ ಈ 3 ಅಪಾಯಕಾರಿ ಯೋಗಗಳಿವು title=

Remedies For Shani Ashubha Yoga: ಜ್ಯೋತಿಷ್ಯ ಶಾಸ್ತ್ರದಲ್ಲಿ, ಕರ್ಮಫಳದಾತ, ನ್ಯಾಯದ ದೇವರು ಎಂದು ಹೇಳಲ್ಪಡುವ ಶನಿ ದೇವನ ಹೆಸರು ಕೇಳಿದರೆ ಸಾಕು ಜನ ಕನಸಿನಲ್ಲಿಯೂ ಕೂಡ ಬೆಚ್ಚಿ ಬೀಳುತ್ತಾರೆ. ಶನಿ ಮಹಾತ್ಮನು ಪ್ರತಿಯೊಬ್ಬರಿಗೂ ಸಹ ಅವರ ಕರ್ಮಗಳಿಗೆ ತಕ್ಕಂತೆ ಒಳ್ಳೆಯ, ಕೆಟ್ಟ ಫಲಗಳನ್ನು ನೀಡುತ್ತಾನೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ದೇವನು ಶುಭ ಸ್ಥಾನದಲ್ಲಿದ್ದರೆ ಅವರ ಜೀವನದಲ್ಲಿ ಸುಖ-ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ. ಅಂತೆಯೇ, ವ್ಯಕ್ತಿಯ ಜಾತಕದಲ್ಲಿ ಶನಿಯ ವಕ್ರ ದೃಷ್ಟಿ ಬಿದ್ದರೆ ಆತ ಜೀವನದ ಪ್ರತಿ ಹಂತದಲ್ಲಿಯೂ ನಾನಾ ರೀತಿಯ ಕಷ್ಟಗಳನ್ನು ಅನುಸರಿಸುತ್ತಾನೆ ಎಂದು ನಂಬಲಾಗಿದೆ. ಅದರಲ್ಲೂ ಶನಿಯ ಕೆಲವು ದಶಾಗಳು ಮತ್ತು ಯೋಗಗಳನ್ನು ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮಹಾತ್ಮನಿಂದ ರೂಪುಗೊಳ್ಳುವ ಮೂರು ಯೋಗಗಳನ್ನು ತುಂಬಾ ಅಪಾಯಕಾರಿ ಯೋಗಗಳು ಎಂದು ಬಣ್ಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಈ ಅಪಾಯಕಾರಿ ಯೋಗಗಳು ನಿರ್ಮಾಣವಾದರೆ ಅದು ಅವರ ಜೀವನವನ್ನು ಸಂಪೂರ್ಣವಾಗಿ ನಾಶಪಡಿಸಬಲ್ಲದು ಎಂದು ಹೇಳಲಾಗುತ್ತದೆ. ಯಾವುದೀ ಅಪಾಯಕಾರಿ ಯೋಗಗಳು, ಅವುಗಳಿಂದ ಮುಕ್ತಿ ಪಡೆಯಲು ಏನು ಮಾಡಬೇಕು ಎಂದು ತಿಳಿಯಿರಿ. 

ಇದನ್ನೂ ಓದಿ- ಮೇ ತಿಂಗಳಿನಲ್ಲಿ 4 ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಯವರಿಗೆ ಬಂಪರ್ ಲಾಭ

ಶನಿಯ ಅಪಾಯಕಾರಿ ಯೋಗಗಳು, ಅವುಗಳಿಂದ ಪರಿಹಾರ ಪಡೆಯುವ ಮಾರ್ಗಗಳು:
ಶನಿ ಮತ್ತು ಸೂರ್ಯರ ಯೋಗ: 

ಶನಿ ಸೂರ್ಯ ಪುತ್ರನೇ ಆದರೂ ಸಹ ಇವರಿಬ್ಬರ ನಡುವೆ ಹೊಂದಾಣಿಕೆ ಇರುವುದಿಲ್ಲ. ಹಾಗಾಗಿ, ಜಾತಕದಲ್ಲಿ ಶನಿ ಮತ್ತು ಸೂರ್ಯರಿಂದ ಉಂಟಾಗುವ ಯೋಗವು ವ್ಯಕ್ತಿಯ ಪ್ರತಿ ಕೆಲಸದಲ್ಲಿಯೂ ಅಡ್ಡಿಪಡಿಸುತ್ತದೆ. ಎಷ್ಟೇ ಕಠಿಣ ಪರಿಶ್ರಮದ ಹೊರತಾಗಿಯೂ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯವಾಗುವುದೇ ಇಲ್ಲ. ಈ ಯೋಗದಿಂದಾಗಿ ಪಿತೃ ಸಮಾನರೊಂದಿಗೆ ಇಲ್ಲವೇ ಪುತ್ರ ಸಮಾನರೊಂದಿಗಿನ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಹೆಚ್ಚಾಗಿರುತ್ತದೆ. 

ಶನಿ-ಸೂರ್ಯ ಯೋಗದ ಆಶುಭ ಪರಿಣಾಮಗಳನ್ನು ತಪ್ಪಿಸಲು ಈ ಪರಿಹಾರಗಳನ್ನು ಕೈಗೊಳ್ಳಿ: 
* ಮುಂಜಾನೆ ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿ, ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ.
* ಈ ಸಮಯದಲ್ಲಿ "ಓಂ ಸೂರ್ಯಪುತ್ರಾಯ ನಮಃ" ಎಂಬ ಸೂರ್ಯ ಮಂತ್ರವನ್ನು ಪಠಿಸಿ.
*ಸಂಜೆ ವೇಳೆ ಅರಳಿ ಮರಕ್ಕೆ ನೀರನ್ನು ಅರ್ಪಿಸಿ.

ಶನಿ-ಚಂದ್ರರ ಯೋಗ:
ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ಮತ್ತು ಚಂದ್ರನಿಂದ ನಿರ್ಮಾಣವಾಗುವ ಯೋಗವು ವ್ಯಕ್ತಿಯನ್ನು ಮಾದಕ ವ್ಯಸನದಂತಹ ಚಟಕ್ಕೆ ಬಲಿಯಾಗುವಂತೆ ಮಾಡಬಹುದು. ಮಾತ್ರವಲ್ಲ, ಆತ ಯಾರು ಎಷ್ಟೇ ಒಳ್ಳೆಯ ಬುದ್ದಿ ಹೇಳಿದರು ಸಹ ತಪ್ಪು ದಾರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. 

ಶನಿ-ಚಂದ್ರರ ಯೋಗದ ದುಷ್ಪರಿಣಾಮವನ್ನು ತಪ್ಪಿಸಲು ಈ ಸುಲಭ ಕ್ರಮಗಳನ್ನು ಅನುಸರಿಸಿ: 
>> ಯಾರ ಜಾತಕದಲ್ಲಿ ಶನಿ-ಚಂದ್ರರ ಯೋಗದ ದುಷ್ಪರಿಣಾಮಗಳು ಕಂಡು ಬರುತ್ತೋ ಅಂತಹವರು ಸೋಮವಾರದಂದು ಭಗವಾನ್ ಶಿವನಿಗೆ ಕಬ್ಬಿನ ರಸದಿಂದ ಅಭಿಷೇಕವನ್ನು ಮಾಡಿ ಉಪವಾಸ ವ್ರತವನ್ನು ಆಚರಿಸಬೇಕು.
>> ಇದಲ್ಲದೆ, ಶನಿವಾರದಂದು ಅಗತ್ಯವಿರುವವರಿಗೆ ಔಷಧಿಗಳನ್ನು ದಾನ ಮಾಡಬೇಕು. 

ಇದನ್ನೂ ಓದಿ- Rudraksh Rule: ರುದ್ರಾಕ್ಷಿ ಧರಿಸುವ ಮುನ್ನ ಈ ನಿಯಮಗಳನ್ನು ತಪ್ಪದೇ ತಿಳಿಯಿರಿ

ಶನಿ-ರಾಹು ಯೋಗ: 
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಮತ್ತು ರಾಹು ಎರಡೂ ಗ್ರಹಗಳನ್ನು ಕ್ರೂರ ಗ್ರಹಗಳು ಎಂದು ಪರಿಗಣಿಸಲಾಗುತ್ತದೆ. ಈ ಎರಡೂ ಗ್ರಹಗಳು ಒಟ್ಟಿಗೆ ಇದ್ದಾಗ ಅದು ವ್ಯಕ್ತಿಯ ಜೀವನವನ್ನೇ ನಾಶಪಡಿಸಬಹುದು ಎಂದು ಹೇಳಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಶನಿ-ರಾಹು ಒಟ್ಟಿಗೆ ಸೇರಿ ರಹಸ್ಯ ಯೋಗ ನಿರ್ಮಾಣವಾಗುತ್ತದೆ. ಈ ಯೋಗವು ವ್ಯಕ್ತಿಯ ಕುಟುಂಬದಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಮಾತ್ರವಲ್ಲ, ವ್ಯಕ್ತಿಯ ಜೀವನದಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದಕ್ಕಿದ್ದಂತೆ ಉಲ್ಬಣಗೊಳ್ಳುತ್ತವೆ. 

ಶನಿ-ರಾಹು ಯೋಗದ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಸರಳ ಪರಿಹಾರ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಶನಿ-ರಾಹುವಿನ ದುಷ್ಪರಿಣಾಮಗಳನ್ನು ತಪ್ಪಿಸಲು ಶನಿವಾರದಂದು ಸಂಜೆ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯನ್ನು ಬೆಳಗಿಸಿ. ಜೊತೆಗೆ ಸಾಧ್ಯವಾದರೆ, ಸಾಸಿವೆ ಎಣ್ಣೆಯನ್ನು ದಾನವಾಗಿ ನೀಡಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News