ಮೇ ತಿಂಗಳಿನಲ್ಲಿ 4 ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಯವರಿಗೆ ಬಂಪರ್ ಲಾಭ

May Graha Gochar: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹಗಳು ಕೂಡ ಒಂದು ನಿರ್ದಿಷ್ಟ ಸಮಯದಲ್ಲಿ ರಾಶಿ ಚಕ್ರವನ್ನು ಬದಲಿಸುತ್ತವೆ. ಮೇ ತಿಂಗಳಿನಲ್ಲಿ ಕೆಲವು ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ ನಡೆಯಲಿದ್ದು ಇದು ಕೆಲವು ರಾಶಿಯವರಿಗೆ ಅಪಾರ ಕೀರ್ತಿ, ಯಶಸ್ಸಿನ ಜೊತೆಗೆ ಬಂಪರ್ ಲಾಭವನ್ನೂ ನೀಡಲಿದೆ ಎಂದು ಹೇಳಲಾಗುತ್ತಿದೆ.   

Written by - Yashaswini V | Last Updated : Apr 26, 2023, 08:44 AM IST
  • ಮೇ ತಿಂಗಳ ಆರಂಭದಲ್ಲಿ ಶುಕ್ರನು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ
  • ಮಂಗಳನು ಮಿಥುನ ರಾಶಿಯನ್ನು ಬಿಟ್ಟು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಮೇ ಮಧ್ಯಂತರದಲ್ಲಿ ಎಂದರೆ ಮೇ 15 ರಂದು ಗ್ರಹಗಳ ರಾಜ ಸೂರ್ಯ ವೃಷಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
ಮೇ ತಿಂಗಳಿನಲ್ಲಿ 4 ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಯವರಿಗೆ ಬಂಪರ್ ಲಾಭ  title=

Planets Transits In May: ವೈದಿಕ ಜ್ಯೋತಿಷ್ಯ ಲೆಕ್ಕಾಚಾರಗ್ಲಾ ಪ್ರಕಾರ, ಮೇ 2023ರಲ್ಲಿ ಕೆಲವು ಪ್ರಮುಖ ಗ್ರಹಗಳು ರಾಶಿಚಕ್ರವನ್ನು ಬದಲಿಸಲಿವೆ. ಮೇ ತಿಂಗಳಿನಲ್ಲಿ ಶುಕ್ರ, ಬುಧ, ಮಂಗಳ ಮತ್ತು ಸೂರ್ಯ ಗ್ರಹಗಳು ರಾಶಿ ಪರಿವರ್ತನೆ ಮಾಡಲಿದ್ದು, ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದಾಗ್ಯೂ, ಮೇ ತಿಂಗಳಿನಲ್ಲಿ ಗ್ರಹಗಳ ರಾಶಿ ಪರಿವರ್ತನೆಯು ಕೆಲವು ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದು, ಅವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ. 

ವಾಸ್ತವವಾಗಿ, ಮೇ ತಿಂಗಳ ಆರಂಭದಲ್ಲಿ ಶುಕ್ರನು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿದರೆ, ಮಂಗಳನು ಮಿಥುನ ರಾಶಿಯನ್ನು ಬಿಟ್ಟು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮೇ ಮಧ್ಯಂತರದಲ್ಲಿ  ಎಂದರೆ ಮೇ 15 ರಂದು ಗ್ರಹಗಳ ರಾಜ ಸೂರ್ಯ ವೃಷಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರ ಶುಭ-ಅಶುಭ ಫಲಗಳು ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಈ ಗ್ರಹಗಳ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಉದ್ಯೋಗದಲ್ಲಿ ಯಶಸ್ಸು, ಕೀರ್ತಿ ಜೊತೆಗೆ ಬಂಪರ್ ಲಾಭವನ್ನು ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ... 

ಮೇ ತಿಂಗಳಿನಲ್ಲಿ ಶುಕ್ರ, ಬುಧ, ಮಂಗಳ, ಸೂರ್ಯನ ರಾಶಿ ಬದಲಾವಣೆ: ಬೆಳಗಲಿದೆ ಈ ರಾಶಿಯವರ ಅದೃಷ್ಟ:- 
ಮಿಥುನ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಿಥುನ ರಾಶಿಯವರಿಗೆ ಮೇ ತಿಂಗಳು ತುಂಬಾ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಮಿಥುನ ರಾಶಿಯವರು ವೃತ್ತಿ ಬದುಕಿನಲ್ಲಿ ಭಾರೀ ಯಶಸ್ಸನ್ನು ಕಾಣುವರು. ಪ್ರಮೋಷನ್, ಸಂಬಳ ಹೆಚ್ಚಳದಿಂದಾಗಿ ಮನಸ್ಸು ಕೂಡ ಉಲ್ಲಾಸದಿಂದ ಇರಲಿದೆ. 

ಇದನ್ನೂ ಓದಿ- Shani Vakri: ಕೆಲವೇ ದಿನಗಳಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭ- ಈ ರಾಶಿಯವರಿಗೆ ಭಾಗ್ಯೋದಯ

ಸಿಂಹ ರಾಶಿ: 
ಮೇ ತಿಂಗಳಿನಲ್ಲಿ ಪ್ರಮುಖ ಗ್ರಹಗಳ ಗೋಚಾರದ ಫಲವಾಗಿ ಸಿಂಹ ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಈ ಸಮಯದಲ್ಲಿ ನಿಮ್ಮ ನೆಚ್ಚಿನ ಉದ್ಯೋಗ ದೊರೆಯುವ ಸಾಧಯ್ತೆ ಇದೆ. ಮಾತ್ರವಲ್ಲ, ವ್ಯಾಪಾರ-ವ್ಯವಹಾರದಲ್ಲಿಯೂ ಭಾರೀ ಯಶಸ್ಸು ನಿಮ್ಮದಾಗಲಿದ್ದು, ಹಣದ ಹರಿವು ಉತ್ತಮವಾಗಿರಲಿದೆ. 

ವೃಶ್ಚಿಕ ರಾಶಿ: 
ಮೇ ತಿಂಗಳು ವೃಶ್ಚಿಕ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ದೊಡ್ಡ ಪ್ರಗತಿಯನ್ನು ತರಲಿದೆ. ನಿಮ್ಮ ಬಹುದಿನಗಳ ಕನಸು ನನಸಾಗಳಿದ್ದು ಉನ್ನತ ಹುದ್ದೆಯನ್ನು ಅಲಂಕರಿಸುವಿರಿ. ವ್ಯಾಪಾರಸ್ಥರಿಗೂ ಬಂಪರ್ ಲಾಭ ಸಾಧ್ಯತೆ ಇದ್ದು, ಭೂಮಿ, ವಾಹನ ಖರೀದಿ ಯೋಗವೂ ಇದೆ. 

ಮಕರ ರಾಶಿ: 
ಮಕರ ರಾಶಿಯವರಿಗೆ ಮೇ ತಿಂಗಳಿನಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುವಿರಿ. ಉದ್ಯೋಗ ರಂಗದಲ್ಲಿಯೂ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಹಠಾತ್ ಆರ್ಥಿಕ ಲಾಭದಿಂದಾಗಿ ನಿಮ್ಮ ವಿತ್ತೀಯ ಸ್ಥಿತಿ ಸುಧಾರಿಸಲಿದೆ. 

ಇದನ್ನೂ ಓದಿ- ಇನ್ನೆರಡು ದಿನಗಳಲ್ಲಿ ಗುರು ಪುಷ್ಯ ಯೋಗ: ಈ ಕೆಲಸಗಳನ್ನು ಆರಂಭಿಸಿದರೆ ಭಾರೀ ಯಶಸ್ಸು

ಮೀನ ರಾಶಿ: 
ಮೇ ತಿಂಗಳ ಗ್ರಹ ಗೋಚಾರದ ಫಲವಾಗಿ ಮೀನ ರಾಶಿಯವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸುವರು. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು ಆದಾಯದಲ್ಲೂ ಹೆಚ್ಚಳವಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News