ಇಂದು ಭಾರತ-ಆಫ್ರಿಕಾ ನಡುವೆ ಕೊನೆಯ ಟಿ20 ಪಂದ್ಯ : ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಯಾರಿಗೆ ಸಿಗಲಿದೆ ಜಯ!

Ind vs SA T20: ಇಂದು ನಡೆಯಲಿರುವ ಪಂದ್ಯ ಭಾರತ ಮತ್ತು ದ.ಆಫ್ರಿಕಾ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯವೂ ಆಗಿದ್ದು ಇದು ಭಾರತ ತಂಡಕ್ಕೆ ಒಂದರ್ಥದಲ್ಲಿ ನಿರ್ಣಾಯಕ ಪಂದ್ಯ ಎಂತಲೇ ಹೇಳಬಹುದು. ಭಾರತ ತಂಡ ಈ ಪಂದ್ಯದಲ್ಲಿ ಗೆದ್ದರಷ್ಟೇ ಸರಣಿ ವಂಚಿತವಾಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯ. 

Written by - Yashaswini V | Last Updated : Dec 14, 2023, 12:27 PM IST
  • ಎರಡನೇ ಟಿ20 ಪಂದ್ಯದಲ್ಲಿ ಭಾರತ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 180 ರನ್‌ಗಳ ಉತ್ತಮ ಗುರಿಯನ್ನು ನೀಡಿದ್ದರೂ ಸಹ ಪಂದ್ಯವನ್ನು ಬಿಟ್ಟು ಕೊಡಬೇಕಾಯಿತು.
  • ಮಳೆ ಅಡ್ಡಿ ಹಾಗೂ ಭಾರತದ ಕಳಪೆ ಬೌಲಿಂಗ್‌ ಪ್ರದರ್ಶನವೇ ಈ ಪಂದ್ಯ ಸೋಲಲು ಪ್ರಮುಖ ಕಾರಣವಾಯಿತು.
  • ಬೌಲಿಂಗ್‌ ನಲ್ಲಿ ಮುಕೇಶ್ ಕುಮಾರ್‌ 2 ವಿಕೆಟ್ ತೆಗೆದರೂ ಸಹ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಅಬ್ಬರವನ್ನು ತಡೆಯಲು ಸಾಧ್ಯವಾಗಲಿಲ್ಲ.
ಇಂದು ಭಾರತ-ಆಫ್ರಿಕಾ ನಡುವೆ ಕೊನೆಯ ಟಿ20 ಪಂದ್ಯ : ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಯಾರಿಗೆ ಸಿಗಲಿದೆ ಜಯ! title=

Ind vs SA T20: ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಮೈದಾನದಲ್ಲಿ ಇಂದು ಭಾರತ ಮತ್ತು ದ.ಆಫ್ರಿಕಾದ ತಂಡಗಳ ನಡುವೆ 3ನೇ ಟಿ20 ಪಂದ್ಯ ನಡೆಯಲಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ರದ್ದಾಗಿದ್ದು, ಎರಡನೇ ಪಂದ್ಯದಲ್ಲಿ ಭಾರತವನ್ನು 5 ವಿಕೆಟ್‌ಗಳಿಂದ ಮಣಿಸಿರುವ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 1-0  ಮುನ್ನಡೆ ಕಾಯ್ದುಕೊಂಡಿದೆ. 

ಇಂದು ನಡೆಯಲಿರುವ ಪಂದ್ಯ ಭಾರತ ಮತ್ತು ದ.ಆಫ್ರಿಕಾ ನಡುವಿನ ಟಿ20 ಸರಣಿಯ ಕೊನೆಯ ಪಂದ್ಯವೂ ಆಗಿದ್ದು ಇದು ಭಾರತ ತಂಡಕ್ಕೆ ಒಂದರ್ಥದಲ್ಲಿ ನಿರ್ಣಾಯಕ ಪಂದ್ಯ ಎಂತಲೇ ಹೇಳಬಹುದು. ಭಾರತ ತಂಡ ಈ ಪಂದ್ಯದಲ್ಲಿ ಗೆದ್ದರಷ್ಟೇ ಸರಣಿ ವಂಚಿತವಾಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯ. ಹಾಗಾಗಿ, ಇದು ಭಾರತ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. 

ಇದನ್ನೂ ಓದಿ- ವಿಶ್ವಕಪ್ ಸೋಲಿನ ಬಳಿಕ ಮೊದಲ ಬಾರಿ ಮೌನ ಮುರಿದು ಹೀಗಂದ ರೋಹಿತ್ ಶರ್ಮಾ

ವಾಸ್ತವವಾಗಿ, ಎರಡನೇ ಟಿ20 ಪಂದ್ಯದಲ್ಲಿ  ಭಾರತ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 180 ರನ್‌ಗಳ ಉತ್ತಮ ಗುರಿಯನ್ನು ನೀಡಿದ್ದರೂ ಸಹ ಪಂದ್ಯವನ್ನು ಬಿಟ್ಟು ಕೊಡಬೇಕಾಯಿತು. ಮಳೆ ಅಡ್ಡಿ ಹಾಗೂ ಭಾರತದ ಕಳಪೆ ಬೌಲಿಂಗ್‌ ಪ್ರದರ್ಶನವೇ ಈ ಪಂದ್ಯ ಸೋಲಲು ಪ್ರಮುಖ ಕಾರಣವಾಯಿತು. ಬೌಲಿಂಗ್‌ ನಲ್ಲಿ ಮುಕೇಶ್ ಕುಮಾರ್‌ 2 ವಿಕೆಟ್ ತೆಗೆದರೂ ಸಹ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಅಬ್ಬರವನ್ನು ತಡೆಯಲು ಸಾಧ್ಯವಾಗಲಿಲ್ಲ. 

ಇನ್ನು ಬ್ಯಾಟಿಂಗ್‌ ವಿಷಯಕ್ಕೆ ಬಂದರೆ ನಾಯಕ ಸೂರ್ಯ ಕುಮಾರ್‌ ಯಾದವ್‌ ಮತ್ತು ರಿಂಕು ಸಿಂಗ್‌ ಬಿಟ್ಟರೆ ಮತ್ಯಾವ ಆಟಗಾರರಿಂದಲು ಉತ್ತಮ ಪ್ರದರ್ಶನ ಕಂಡು ಬಂದಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶುಬ್ಮನ್‌ ಗಿಲ್‌ ಮತ್ತು ಯಶಸ್ವಿ ಜೈಸ್ವಾಲ್‌ ಇಬ್ಬರು ಶೂನ್ಯಕ್ಕೆ ಔಟ್‌ ಆಗಿ ಪೆವೆಲಿಯನ್‌ ಗೆ ಮರಳಿದ್ದರು. ಹಿಂದಿನ ಪಂದ್ಯದಿಂದ ಪಾಠ ಕಲಿತಿರುವ ಟೀಂ ಇಂಡಿಯಾ ಪಂದ್ಯದ  ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸಿದೆ. ಅಷ್ಟೇ ಅಲ್ಲದೆ, ಪ್ಲೇಯಿಂಗ್ XIನಲ್ಲಿ ಭಾರೀ ಬದಲಾವಣೆ ತರುವ ಸಾಧ್ಯತೆ ಇದೆ. 

ಇದನ್ನೂ ಓದಿ- ಚಿಕನ್ ಟಿಕ್ಕಾ ತಿಂದು ‘ವಾರೆ ವ್ಹಾ’ ಎಂದ ಸಸ್ಯಹಾರಿ ವಿರಾಟ್ ಕೊಹ್ಲಿ! ಫೋಟೋ ವೈರಲ್

ಎರಡನೇ ಟಿ-20 ಪಂದ್ಯದಲ್ಲಿ ಶೂನ್ಯಕ್ಕೆ ಔಟ್‌ ಆದ ಯಶಸ್ವಿ ಜೈಸ್ವಾಲ್‌ ಬದಲಿಗೆ  ಆರಂಭಿಕ ಆಟಗಾರರಾಗಿ ಇಶಾನ್‌ ಕಿಶನ್‌ ಆಡಿದರೆ ಬ್ಯಾಟಿಂಗ್‌ ಮತ್ತು ಕೀಪಿಂಗ್‌ ಗೆ ಬಲ ಬರಲಿದೆ. ಉತ್ತಮ ಫಾರ್ಮ್‌ ನಲ್ಲಿರುವ ಶ್ರೆಯಸ್‌ ಅಯ್ಯರ್‌ನನ್ನು ತಂಡದಲ್ಲಿ ಆಡಿಸುವ ಸಾಧ್ಯತೆ ಇದೆ. ಇನ್ನು ಬೌಲಿಂಗ್‌ ವಿಭಾಗಕ್ಕೆ ಬಂದರೆ ಆಸಿಸ್‌ ಸರಣಿಯಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ರವಿ ಬಿಷ್ಣೋಯಿ ಅವರಿಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಜೋಹಾನ್ಸ್‌ ಬರ್ಗ್‌ ಮೈದಾನದಲ್ಲಿ ತೇವಾಂಶ ಇರುವುದರಿಂದ ಬೌಲಿಂಗ್‌ ಕಡೆ ಹೆಚ್ಚು ಗಮನ ಹರಿಸಿದರೆ ಪಂದ್ಯ ಗೆಲ್ಲುವ ಸಾಧ್ಯತೆ ಬಹುತೇಕ ಮಟ್ಟಿಗೆ ಹೆಚ್ಚಾಗುತ್ತದೆ. 

ಭಾರತದ ಸಂಭಾವ್ಯ ಪ್ಲೇಯಿಂಗ್ 11 ಪಟ್ಟಿ ಕೆಳಕಂಡಂತಿದೆ: 
ಇಶಾನ್ ಕಿಶನ್, ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್,  ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್, ರವಿ ಬಿಷ್ಣೋಯಿ. ಆಡುವ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News