ಅತ್ಯುನ್ನತ ಕ್ರೀಡಾ ಗೌರವ ‘ಅರ್ಜುನ ಪ್ರಶಸ್ತಿ’ಗೆ ಮೊಹಮ್ಮದ್ ಶಮಿ ಹೆಸರು: ಕ್ರೀಡಾ ಸಚಿವಾಲಯಕ್ಕೆ ಬಿಸಿಸಿಐ ವಿಶೇಷ ಮನವಿ

Mohammed Shami: ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಪಡೆಯುವ ರೇಸ್’ನಲ್ಲಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಏಕದಿನ ವಿಶ್ವಕಪ್‌’ನಲ್ಲಿ ಶಮಿ ಅವರ ಪ್ರಬಲ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಅರ್ಜುನ ಪ್ರಶಸ್ತಿಗೆ ಅವರ ಹೆಸರನ್ನು ಶಿಫಾರಸು ಮಾಡಿದೆ.

Written by - Bhavishya Shetty | Last Updated : Dec 13, 2023, 10:03 PM IST
    • ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ
    • ಅರ್ಜುನ ಪ್ರಶಸ್ತಿಯು ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವ
    • ಶಮಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಪಡೆಯುವ ರೇಸ್’ನಲ್ಲಿದ್ದಾರೆ
ಅತ್ಯುನ್ನತ ಕ್ರೀಡಾ ಗೌರವ ‘ಅರ್ಜುನ ಪ್ರಶಸ್ತಿ’ಗೆ ಮೊಹಮ್ಮದ್ ಶಮಿ ಹೆಸರು: ಕ್ರೀಡಾ ಸಚಿವಾಲಯಕ್ಕೆ ಬಿಸಿಸಿಐ ವಿಶೇಷ ಮನವಿ  title=
Mohammad Shami

Mohammed Shami: ಈ ವರ್ಷ ಭಾರತ ಆಯೋಜಿಸಿದ್ದ ODI ವಿಶ್ವಕಪ್-2023 ರಲ್ಲಿ ವೇಗಿ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದ್ದರು. ಇದೀಗ ಈ ಸಾಧನೆಯನ್ನು ಪರಿಗಣಿಸಿ ಬಿಸಿಸಿಐ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಅರ್ಜುನ ಪ್ರಶಸ್ತಿಯು ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾಗಿದೆ.

ಇದನ್ನೂ ಓದಿ: ಚಿಕನ್ ಟಿಕ್ಕಾ ತಿಂದು ‘ವಾರೆ ವ್ಹಾ’ ಎಂದ ಸಸ್ಯಹಾರಿ ವಿರಾಟ್ ಕೊಹ್ಲಿ! ಫೋಟೋ ವೈರಲ್

ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಪಡೆಯುವ ರೇಸ್’ನಲ್ಲಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಏಕದಿನ ವಿಶ್ವಕಪ್‌’ನಲ್ಲಿ ಶಮಿ ಅವರ ಪ್ರಬಲ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಅರ್ಜುನ ಪ್ರಶಸ್ತಿಗೆ ಅವರ ಹೆಸರನ್ನು ಶಿಫಾರಸು ಮಾಡಿದೆ. ಬಿಸಿಸಿಐ ಕ್ರೀಡಾ ಸಚಿವಾಲಯಕ್ಕೆ ವಿಶೇಷ ಮನವಿ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ಬಿಸಿಸಿಐ ವಿಶೇಷ ಮನವಿ:

2023 ರ ODI ವಿಶ್ವಕಪ್‌’ನಲ್ಲಿ ಅವರ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ, ಆಯ್ಕೆ ಸಮಿತಿಯು ಈ ವರ್ಷದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಮಿ ಹೆಸರನ್ನು ಶಿಫಾರಸು ಮಾಡಿದೆ. ಮೂಲಗಳ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರೀಡಾ ಸಚಿವಾಲಯಕ್ಕೆ ವಿಶೇಷ ವಿನಂತಿಯನ್ನು ಮಾಡಿದೆ. ಏಕೆಂದರೆ ಈ ಹಿಂದೆ ಶಮಿ ಅವರ ಹೆಸರು ಈ ಪಟ್ಟಿಯಲ್ಲಿ ಇರಲಿಲ್ಲ.

33 ವರ್ಷದ ಶಮಿ ನವೆಂಬರ್‌’ನಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತಗಳನ್ನೇ ಸೃಷ್ಟಿಸಿದ್ದರು. ಈ ICC ಪಂದ್ಯಾವಳಿಯಲ್ಲಿ 12.06 ರ ಸರಾಸರಿಯಲ್ಲಿ 15 ವಿಕೆಟ್’ಗಳನ್ನು ಮತ್ತು 5.68 ರ ಎಕಾನಮಿ ರೇಟ್ ಹೊಂದಿದ್ದರು. ಅಷ್ಟೇ ಅಲ್ಲ ವಿಶ್ವಕಪ್’ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಕೇವಲ 7 ಇನ್ನಿಂಗ್ಸ್‌’ಗಳಲ್ಲಿ 24 ವಿಕೆಟ್‌ ಪಡೆದಿದ್ದರು ಶಮಿ.

ಇದನ್ನೂ ಓದಿ: ವಿಶ್ವಕಪ್ ಸೋಲಿನ ಬಳಿಕ ಮೊದಲ ಬಾರಿ ಮೌನ ಮುರಿದು ಹೀಗಂದ ರೋಹಿತ್ ಶರ್ಮಾ

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶಮಿ ಭಾರತ ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26 ರಂದು ಸೆಂಚುರಿಯನ್’ನಲ್ಲಿ ನಡೆದರೆ, ಸರಣಿಯ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಜನವರಿ 3 ರಂದು ಕೇಪ್ ಟೌನ್‌’ನಲ್ಲಿ ನಡೆಯಲಿದೆ. ಸದ್ಯ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡುತ್ತಿದ್ದು, ಬಳಿಕ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News