ಟೆಸ್ಟ್’ನಲ್ಲಿ 3 ದ್ವಿಶತಕ ಬಾರಿಸಿದ ಈ ಆಟಗಾರ ದ.ಆಫ್ರಿಕಾ ಸರಣಿಯಿಂದ ಔಟ್: ಭಾರತ ಬಿಟ್ಟು ವಿದೇಶದಲ್ಲಿ ಆಡಲು ಟೆಸ್ಟ್ ಸ್ಪೆಷಲಿಸ್ಟ್ ಸಜ್ಜು

India vs South Africa Test: ದೇಶೀಯ ಕ್ರಿಕೆಟ್‌’ನಲ್ಲಿ ಸೌರಾಷ್ಟ್ರವನ್ನು ಪ್ರತಿನಿಧಿಸುವ ಪೂಜಾರ ಇಂಗ್ಲೆಂಡ್‌’ನಲ್ಲಿ ಕೌಂಟಿ ಕ್ರಿಕೆಟ್ ಆಡಲಿದ್ದಾರೆ. ಸತತ ಮೂರನೇ ಋತುವಿನಲ್ಲಿ ಸಸೆಕ್ಸ್ ಕ್ಲಬ್‌’ಗಾಗಿ ಆಡುತ್ತಿದ್ದಾರೆ. ಪೂಜಾರ 2024ರ ಕೌಂಟಿ ಋತುವಿಗಾಗಿ ಇಂಗ್ಲೆಂಡ್‌’ನ ಕೌಂಟಿ ಕ್ರಿಕೆಟ್ ಕ್ಲಬ್ ಸಸೆಕ್ಸ್‌’ನೊಂದಿಗೆ ಮರು ಸಹಿ ಹಾಕಿದ್ದಾರೆ.

Written by - Bhavishya Shetty | Last Updated : Dec 13, 2023, 10:51 PM IST
    • ಭಾರತದ ಅನುಭವಿ ಕ್ರಿಕೆಟಿಗ ಚೇತೇಶ್ವರ ಪೂಜಾರ
    • ಇಂಗ್ಲೆಂಡ್’ನಲ್ಲಿ ಕೌಂಟಿ ಕ್ರಿಕೆಟ್ ಆಡಲು ನಿರ್ಧರಿಸಿದ ಚೇತೇಶ್ವರ್
    • ಸಸೆಕ್ಸ್‌’ಗೆ ಮರು ಸೇರ್ಪಡೆಗೊಳ್ಳುವ ಕುರಿತು ಮಾತನಾಡಿದ ಪೂಜಾರ
ಟೆಸ್ಟ್’ನಲ್ಲಿ 3 ದ್ವಿಶತಕ ಬಾರಿಸಿದ ಈ ಆಟಗಾರ ದ.ಆಫ್ರಿಕಾ ಸರಣಿಯಿಂದ ಔಟ್: ಭಾರತ ಬಿಟ್ಟು ವಿದೇಶದಲ್ಲಿ ಆಡಲು ಟೆಸ್ಟ್ ಸ್ಪೆಷಲಿಸ್ಟ್ ಸಜ್ಜು title=
Cheteshwar Pujara

India vs South Africa Test: ಭಾರತದ ಅನುಭವಿ ಕ್ರಿಕೆಟಿಗ ಚೇತೇಶ್ವರ ಪೂಜಾರ ಜೂನ್‌’ನಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌’ನ ಅಂತಿಮ ಪಂದ್ಯದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು, ನಂತರ ಅವರಿಗೆ ಅವಕಾಶವೇ ಸಿಗಲಿಲ್ಲ. ಇದೇ ವೇಳೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ (IND vs SA ಟೆಸ್ಟ್) ಕೂಡ ಅವರಿಗೆ ಅವಕಾಶ ನೀಡಲಾಗಿಲ್ಲ. ಹೀಗಾಗಿ ಇಂಗ್ಲೆಂಡ್’ನಲ್ಲಿ ಕೌಂಟಿ ಕ್ರಿಕೆಟ್ ಆಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ವಾರದಲ್ಲಿ 3 ಬಾರಿ ಈ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿ; ಬಿಳಿಕೂದಲು ಬುಡದಿಂದಲೇ ನೈಸರ್ಗಿಕವಾಗಿ ಕಪ್ಪಾಗುತ್ತೆ!

ದೇಶೀಯ ಕ್ರಿಕೆಟ್‌’ನಲ್ಲಿ ಸೌರಾಷ್ಟ್ರವನ್ನು ಪ್ರತಿನಿಧಿಸುವ ಪೂಜಾರ ಇಂಗ್ಲೆಂಡ್‌’ನಲ್ಲಿ ಕೌಂಟಿ ಕ್ರಿಕೆಟ್ ಆಡಲಿದ್ದಾರೆ. ಸತತ ಮೂರನೇ ಋತುವಿನಲ್ಲಿ ಸಸೆಕ್ಸ್ ಕ್ಲಬ್‌’ಗಾಗಿ ಆಡುತ್ತಿದ್ದಾರೆ. ಪೂಜಾರ 2024ರ ಕೌಂಟಿ ಋತುವಿಗಾಗಿ ಇಂಗ್ಲೆಂಡ್‌’ನ ಕೌಂಟಿ ಕ್ರಿಕೆಟ್ ಕ್ಲಬ್ ಸಸೆಕ್ಸ್‌’ನೊಂದಿಗೆ ಮರು ಸಹಿ ಹಾಕಿದ್ದಾರೆ.

ಸಸೆಕ್ಸ್‌’ಗೆ ಮರು ಸೇರ್ಪಡೆಗೊಳ್ಳುವ ಕುರಿತು ಮಾತನಾಡಿದ ಪೂಜಾರ, “ಕಳೆದ ಎರಡು ಸೀಸನ್‌’ಗಳಲ್ಲಿ ನಾನು ಹೋವ್‌’ನಲ್ಲಿ ನನ್ನ ಸಮಯವನ್ನು ಸಂಪೂರ್ಣವಾಗಿ ಆನಂದಿಸಿದೆ. ಮತ್ತೆ ಸಸೆಕ್ಸ್ ಕುಟುಂಬವನ್ನು ಸೇರುತ್ತಿದ್ದೇನೆ ಎಂದು ತುಂಬಾ ಖುಷಿಯಾಗುತ್ತಿದೆ. ತಂಡವನ್ನು ಸೇರಲು ಮತ್ತು ಅದರ ಯಶಸ್ಸಿಗೆ ಕೊಡುಗೆ ನೀಡಲು ನಾನು ಉತ್ಸುಕನಾಗಿದ್ದೇನೆ” ಎಂದಿದ್ದಾರೆ.

ಸಸೆಕ್ಸ್‌ ಕ್ಲಬ್‌ ಪರ, ಕೌಂಟಿ ಚಾಂಪಿಯನ್‌ ಶಿಪ್‌ನ 18 ಪಂದ್ಯಗಳಲ್ಲಿ 64.24 ರ ಸರಾಸರಿಯಲ್ಲಿ 1863 ರನ್ ಗಳಿಸಿದ್ದಾರೆ, ಇದರಲ್ಲಿ 8 ಶತಕಗಳು ಮತ್ತು 3 ಅರ್ಧ ಶತಕಗಳು ಸೇರಿವೆ.

ಇದನ್ನೂ ಓದಿ: ಅತ್ಯುನ್ನತ ಕ್ರೀಡಾ ಗೌರವ ‘ಅರ್ಜುನ ಪ್ರಶಸ್ತಿ’ಗೆ ಮೊಹಮ್ಮದ್ ಶಮಿ ಹೆಸರು

ತಮ್ಮ ವೃತ್ತಿಜೀವನದಲ್ಲಿ, ಪೂಜಾರ 103 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 19 ಶತಕಗಳ ಸಹಾಯದಿಂದ ಒಟ್ಟು 7195 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌’ನಲ್ಲಿ 3 ಬಾರಿ ದ್ವಿಶತಕ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಅವರು 257 ಪಂದ್ಯಗಳಲ್ಲಿ 51.36 ಸರಾಸರಿಯಲ್ಲಿ 19569 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News