“ಏನು ಮಾಡಬೇಕೆಂದು ತೋಚಲಿಲ್ಲ…”- ವಿಶ್ವಕಪ್ ಸೋಲಿನ ಬಳಿಕ ಮೊದಲ ಬಾರಿ ಮೌನ ಮುರಿದು ಹೀಗಂದ ರೋಹಿತ್ ಶರ್ಮಾ

Rohit Sharma Interview: ವಿಶ್ವಕಪ್ ಫೈನಲ್‌’ನಲ್ಲಿ ಸೋಲು ಅನುಭವಿಸಿದ ನಂತರ ರೋಹಿತ್ ಶರ್ಮಾ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆದಿದ್ದ ರೋಹಿತ್, ಮೊದಲ ಬಾರಿಗೆ ಸಂದರ್ಶನ ನೀಡಿದ್ದಾರೆ.

Written by - Bhavishya Shetty | Last Updated : Dec 13, 2023, 05:32 PM IST
    • ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಮುಗಿದು ಒಂದು ತಿಂಗಳಾಗುತ್ತಿದೆ
    • ಮೊದಲ ಬಾರಿಗೆ ಸಂದರ್ಶನ ನೀಡಿದ ರೋಹಿತ್ ಶರ್ಮಾ
    • ರೋಹಿತ್ ಶರ್ಮಾ ಅವರ ಮುಖದಲ್ಲಿ ನಿರಾಸೆ ಸ್ಪಷ್ಟವಾಗಿ ಕಾಣುತ್ತಿತ್ತು
“ಏನು ಮಾಡಬೇಕೆಂದು ತೋಚಲಿಲ್ಲ…”- ವಿಶ್ವಕಪ್ ಸೋಲಿನ ಬಳಿಕ ಮೊದಲ ಬಾರಿ ಮೌನ ಮುರಿದು ಹೀಗಂದ ರೋಹಿತ್ ಶರ್ಮಾ  title=
Rohit Sharma

Rohit Sharma Interview after World Cup 2023: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಮುಗಿದು ಒಂದು ತಿಂಗಳಾಗುತ್ತಿದೆ. ಆದರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿ ಇಡೀ ದೇಶಕ್ಕೆ ಇನ್ನೂ ನಿರಾಸೆಯೆಂಬ ಕರಿಛಾಯೆ ಆವರಿಸಿಬಿಟ್ಟಿದೆ.  

ರೋಹಿತ್ ಶರ್ಮಾ ತಂಡವು ಆರಂಭದಿಂದ ಸೆಮಿಫೈನಲ್‌’ವರೆಗೆ ಎಲ್ಲಾ 10 ಪಂದ್ಯಗಳನ್ನು ಒಂದರ ನಂತರ ಒಂದರಂತೆ ಗೆದ್ದು, ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಿತ್ತು. ಆದರೆ ಆ ಪಂದ್ಯದಲ್ಲಿ ಭಾರತದ ಕನಸು ಭಗ್ನಗೊಂಡಿತ್ತು. ಆಸ್ಟ್ರೇಲಿಯಾ ವಿರುದ್ಧ ಭಾರತ ಹೀನಾಯ ಸೋಲು ಕಂಡಿತ್ತು. ಇದಾದ ಬಳಿಕ ರೋಹಿತ್ ಶರ್ಮಾ ಸೇರಿದಂತೆ ತಂಡದ ಕೆಲ ಕ್ರಿಕೆಟಿಗರು ಮೈದಾನದಲ್ಲೇ ಕಣ್ಣೀರು ಸುರಿಸಿದ್ದರು.

ಇದನ್ನೂ ಓದಿ: ‘ಭಾಗ್ಯಲಕ್ಷ್ಮೀ’ ನಟ ತಾಂಡವ್ ರಿಯಲ್ ಪತ್ನಿ ಇವರೇ… ಕರುನಾಡ ಈ ಸುಂದರಿ ಖ್ಯಾತ ಬಹುಭಾಷಾ ನಟಿ

ವಿಶ್ವಕಪ್ ಫೈನಲ್‌’ನಲ್ಲಿ ಸೋಲು ಅನುಭವಿಸಿದ ನಂತರ ರೋಹಿತ್ ಶರ್ಮಾ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆದಿದ್ದ ರೋಹಿತ್, ಮೊದಲ ಬಾರಿಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲೂ ರೋಹಿತ್ ಶರ್ಮಾ ಅವರ ಮುಖದಲ್ಲಿ ನಿರಾಸೆ ಮತ್ತು ಭಾವುಕತೆ ಸ್ಪಷ್ಟವಾಗಿ ಕಾಣುತ್ತಿತ್ತು.

"ಈ ದುಃಖದಿಂದ ಹೊರಬರುವುದು ಹೇಗೆ ಎಂದು ನನಗೆ ತಿಳಿದಿರಲಿಲ್ಲ. ಮೊದಲ ಕೆಲವು ದಿನಗಳವರೆಗೆ ನನಗೆ ಏನು ಮಾಡಬೇಕೆಂದು ಸಹ ತೋಚಲಿಲ್ಲ. ನನ್ನ ಕುಟುಂಬ ಮತ್ತು ಸ್ನೇಹಿತರು ನನಗೆ ಉತ್ತಮ ವಾತಾವರಣವನ್ನು ನಿರ್ಮಿಸಿ, ಆ ನೋವಿನಿಂದ ಹೊರಬರಲು ನಾನು ನನಗೆ ಸಹಾಯ ಮಾಡಿದರು. ಆದರೆ ಆ ಸೋಲಿನ ನೋವನ್ನು ಮರೆಯುವುದು ಸುಲಭವಲ್ಲ, ಆದರೆ ಜೀವನವು ಮುಂದುವರಿಯುತ್ತದೆ. ಅದರ ಜೊತೆ ನಾವು ಸಾಗಬೇಕು. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ, ಇದು ನಿಜವಾಗಿಯೂ ಕಷ್ಟಕರ. ಇಲ್ಲಿಂದ ಮುಂದೆ ಬೆಳೆಯುವುದು ಸುಲಭವಲ್ಲ" ಎಂದಿದ್ದಾರೆ ರೋಹಿತ್.

"ನಾನು ಬಾಲ್ಯದಿಂದಲೂ 50 ಓವರ್‌’ಗಳ ವಿಶ್ವಕಪ್ ಅನ್ನು ನೋಡುತ್ತಾ ಬೆಳೆದಿದ್ದೇನೆ. ಈ ವಿಶ್ವಕಪ್’ಗಾಗಿ ಹಲವು ವರ್ಷಗಳಿಂದ ಶ್ರಮಿಸಿದ್ದೇವೆ. ಆದರೆ ಈ ಆಟ ಆಡುವಾಗ ನಿರಾಸೆಯಾಯಿತು. ಬೇಕಾದ್ದು ಸಿಗಲಿಲ್ಲ. ಕಂಡ ಕನಸು ಕಮರಿತು” ಎಂದು ಭಾವುಕರಾದರು.

"ನಮ್ಮ ಕಡೆಯಿಂದ ನಾವು ಮಾಡಬಹುದಾದ ಎಲ್ಲವನ್ನೂ ಮಾಡಿದ್ದೇವೆ ಎಂದು ನಾನು ಅಂದುಕೊಳ್ಳುತ್ತೇನೆ. ಯಾರೋ ನನ್ನನ್ನು ಕೇಳಿದರು, ನೀವು ಏನು ತಪ್ಪು ಮಾಡಿದ್ದೀರಿ? ಎಂದು… ಏಕೆಂದರೆ ನಾವು ಅದುವರೆಗೆ ಆಡಿದ 10 ಪಂದ್ಯಗಳನ್ನು ಗೆದ್ದಿದ್ದೆವು, ತಪ್ಪುಗಳನ್ನು ಸಹ ಮಾಡಿದ್ದೇವೆ. ಆ ತಪ್ಪುಗಳು ಸಂಭವಿಸುತ್ತವೆ. ಅಷ್ಟೇ ಅಲ್ಲದೆ, ಪ್ರತಿ ಪಂದ್ಯದಲ್ಲೂ ನೀವು ಪಂದ್ಯವನ್ನು ಸಂಪೂರ್ಣವಾಗಿ ಚೆನ್ನಾಗಿ ಆಡಲು ಸಾಧ್ಯವಿಲ್ಲ" ಎಂದಿದ್ದಾರೆ.

ತಮ್ಮ ತಂಡದ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, "ನಾನು ತಂಡದ ಇನ್ನೊಂದು ಆಯಾಮದಲ್ಲಿ ನೋಡಿದರೆ, ನಾವು ಆಡಿದ ರೀತಿ ನಿಜವಾಗಿಯೂ ಉತ್ತಮ ಪ್ರದರ್ಶನವಾಗಿತ್ತು. ಏಕೆಂದರೆ ನೀವು ಪ್ರತಿ ವಿಶ್ವಕಪ್‌’ನಲ್ಲಿ ಅಂತಹ ಪ್ರದರ್ಶನವನ್ನು ಪಡೆಯುವುದಿಲ್ಲ. ಅದು ನನಗೆ ಖಚಿತವಾಗಿದೆ. ನಾವು ಫೈನಲ್‌’ವರೆಗೆ ಆಡಿದ ರೀತಿ ಜನರಲ್ಲಿ ಸಂತೋಷ ಮತ್ತು ಹೆಮ್ಮೆ ಮೂಡಿಸುತ್ತಿತ್ತು” ಎಂದಿದ್ದಾರೆ.

ಇದನ್ನೂ ಓದಿ: ಇನ್ನೂ ಮದುವೆಯಾಗದ ಡಿಂಪಲ್ ಕ್ವೀನ್ ರಚಿತಾ ರಾಮ್ ನಿಜವಾದ ವಯಸ್ಸೆಷ್ಟು ಗೊತ್ತಾ?

"ಫೈನಲ್ ಪಂದ್ಯದ ನಂತರ ಹಿಂತಿರುಗಿ ಮುಂದೆ ಸಾಗುವುದು ತುಂಬಾ ಕಷ್ಟಕರವಾಗಿತ್ತು, ಆದ್ದರಿಂದ ನಾನು ಎಲ್ಲೋ ಹೋಗಬೇಕೆಂದು ನಿರ್ಧರಿಸಿದೆ. ಈ ಎಲ್ಲದರಿಂದ ನನ್ನ ಮನಸ್ಸನ್ನು ಹೊರಹಾಕಬೇಕಾಗಿತ್ತು. ಈ ಸಮಯದಲ್ಲಿ ಅನೇಕ ಜನರು ನನ್ನ ಬಳಿಗೆ ಬಂದು, ನಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಅವರೆಲ್ಲರ ಬಗ್ಗೆ ನನಗೆ ಬೇಸರವಾಯಿತು. ಏಕೆಂದರೆ ನಮ್ಮೊಂದಿಗೆ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದರು ಅವರು. ಈ ವಿಶ್ವಕಪ್ ಸಮಯದಲ್ಲಿ ನಾವು ಎಲ್ಲಿಗೆ ಹೋದರೂ, ನಮಗೆ ಅಭಿಮಾನಿಗಳಿಂದ ಸಾಕಷ್ಟು ಬೆಂಬಲವಿತ್ತು. ಸ್ಟೇಡಿಯಂಗೆ ಬಂದು, ಮನೆಯಿಂದಲೇ ಪಂದ್ಯಗಳನ್ನು ನೋಡಿದವರು ನಮಗೆ ತುಂಬಾ ಬೆಂಬಲ ನೀಡಿದ್ದಾರೆ. ಒಂದೂವರೆ ತಿಂಗಳು ನಮ್ಮನ್ನು ಬೆಂಬಲಿಸಿದ ಎಲ್ಲರನ್ನು ನಾನು ಪ್ರಶಂಸಿಸುತ್ತೇನೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News