IND vs PAK: ರೋಹಿತ್ ಶರ್ಮಾರ ಈ ‘ಟ್ರಿಕ್‍’ಗೆ ಪೆವಿಲಿಯನ್ ಸೇರಿದ ಪಾಕ್‍ನ ಸ್ಫೋಟಕ ಬ್ಯಾಟ್ಸ್‌ಮನ್!

ICC World Cup 2023, IND vs PAK: ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ನಡುವೆ ಅಹಮದಾಬಾದ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್‍ನ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಪಾಕಿಸ್ತಾನಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಅಲ್ಪಮೊತ್ತಕ್ಕೆ ಕುಸಿತ ಕಂಡಿದೆ.   

Written by - Puttaraj K Alur | Last Updated : Oct 14, 2023, 05:38 PM IST
  • ರೋಹಿತ್ ಶರ್ಮಾ ‘ಟ್ರಿಕ್’ಗೆ ಬಹುಬೇಗನೇ ಪೆವಿಲಿಯನ್ ಸೇರಿದ ಅಬ್ದುಲ್ಲಾ ಶಫೀಕ್
  • ಹೈವೋಲ್ಟೇಜ್ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ಕುಸಿತ ಕಂಡ ಪಾಕಿಸ್ತಾನ
  • 42.5 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 191 ರನ್‍ಗಳಿಗೆ ಆಲೌಟ್
IND vs PAK: ರೋಹಿತ್ ಶರ್ಮಾರ ಈ ‘ಟ್ರಿಕ್‍’ಗೆ ಪೆವಿಲಿಯನ್ ಸೇರಿದ ಪಾಕ್‍ನ ಸ್ಫೋಟಕ ಬ್ಯಾಟ್ಸ್‌ಮನ್! title=
IND vs PAK

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಅಹಮದಾಬಾದ್‌ನ ಪ್ರತಿಷ್ಠಿತ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಪಾಕಿಸ್ತಾನ 42.5 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 191 ರನ್‍ಗಳಿಗೆ ಆಲೌಟ್ ಆಗಿದೆ.  

ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನಕ್ಕೆ ನಾಯಕ ರೋಹಿತ್ ಶರ್ಮಾ ಪಡೆ ಬಹುದೊಡ್ಡ ಆಘಾತವನ್ನು ನೀಡಿದೆ. ಪಂದ್ಯದ ನಡುವೆ ರೋಹಿತ್ ಶರ್ಮಾ ತಮ್ಮ ಟ್ರಿಕ್ ಬಳಸಿಕೊಂಡು ಪಾಕ್ ಬ್ಯಾಟ್ಸ್‍ಮನ್‍ವೊಬ್ಬರಿಗೆ ಪೆವಿಲಿಯನ್ ದಾರಿ ತೋರಿಸಿದರು.  

ಇದನ್ನೂ ಓದಿ: 1 ಓವರ್’ನಲ್ಲಿ 52 ರನ್… 20 ಓವರ್’ಗೆ 427 ಸ್ಕೋರ್..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದೇಬಿಡ್ತು ಈ ತಂಡ

8ನೇ ಓವರ್‌ನಲ್ಲಿ ಮೊದಲ ವಿಕೆಟ್ !

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಪಾಕಿಸ್ತಾನವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಆರಂಭಿಕರಾಗಿ ಕಣಕ್ಕಿಳಿದರು. ಇಬ್ಬರೂ ಉತ್ತಮ ಜೊತೆಯಾಟವಾಡುತ್ತಿದ್ದಾಗ, ಪಾಕಿಸ್ತಾನ ಕೇವಲ 7 ಓವರ್‌ಗಳಲ್ಲಿ 37 ರನ್ ಪೇರಿಸಿತು. ಈ ರೋಹಿತ್ ಹಾಗೂ ಟೀಂ ಇಂಡಿಯಾ ಪಾಕ್ ವಿಕೆಟ್ ಪಡೆಯಲು ತೀವ್ರ ಪ್ರಯತ್ನ ನಡೆಸಿದರು. ಅಂತಿಮವಾಗಿ ಇನಿಂಗ್ಸ್‍ನ 8ನೇ ಓವರ್‍ನ ಕೊನೆಯ ಎಸೆತದಲ್ಲಿ ಯಶಸ್ಸು ಕಂಡರು.

ರೋಹಿತ್ 'ಟ್ರಿಕ್'ಗೆ ಸಿಕ್ಕಿಬಿದ್ದ ಶಫೀಕ್!

ಇನಿಂಗ್ಸ್‌ನ 8ನೇ ಓವರ್‌ ಎಸೆಯಲು ರೋಹಿತ್ ಚೆಂಡನ್ನು ವೇಗಿ ಮೊಹಮ್ಮದ್ ಸಿರಾಜ್‌ಗೆ ನೀಡಿದರು. ಈ ಓವರ್‌ನಲ್ಲಿ ರೋಹಿತ್ ಮತ್ತು ವಿರಾಟ್ ಕೊಹ್ಲಿ ನಡುವೆ ಕೆಲವು ಸಂಭಾಷಣೆ ನಡೆಯಿತು. ಓವರ್‌ನ ಮೊದಲ 5 ಎಸೆತಗಳಲ್ಲಿ 4 ರನ್ ಗಳಿಸಲಾಯಿತು. 5ನೇ ಎಸೆತದ ಬಳಿಕ ಸಿರಾಜ್ ಹಾಗೂ ನಾಯಕ ರೋಹಿತ್ ನಡುವೆ ಮತ್ತೊಂದು ಮಾತುಕತೆ ನಡೆಯಿತು. ಅವರು ಫೀಲ್ಡಿಂಗ್‌ನಲ್ಲಿ ಕೆಲವು ಬದಲಾವಣೆಗಳ ಬಗ್ಗೆ ಚರ್ಚಿಸಿದರು. ಈ ಸಂಭಾಷಣೆಯ ನಂತರ ಫೈನ್ ಲೆಗ್ ಫೀಲ್ಡರ್ ಅನ್ನು ಸ್ವಲ್ಪ ಹೆಚ್ಚು ಚಲಿಸುವಂತೆ ಮಾಡಲಾಯಿತು. ಮುಂದಿನ ಎಸೆತದಲ್ಲಿ ಸಿರಾಜ್ ಮತ್ತು ಭಾರತ ತಂಡ ಯಶಸ್ಸು ಕಂಡಿತು. ಶಫೀಕ್ LBW ಬಲೆಗೆ ಬಿದ್ದು ಔಟಾದರು.

ಇದನ್ನೂ ಓದಿ: ಬಾಲ್’ಗೆ ಮಂತ್ರ ಹೇಳಿ ಬೌಲಿಂಗ್ ಮಾಡಿದ್ದೇ ತಡ ಬಿದ್ದೇಬಿಡ್ತು ವಿಕೆಟ್… ಪಾಕ್ ವಿರುದ್ಧ ಪಾಂಡ್ಯ ‘ಕಾಲಾ ಜಾದೂ’ ವಿಡಿಯೋ!!

ಶ್ರೀಲಂಕಾ ವಿರುದ್ಧ ಶತಕ ಬಾರಿಸಿದ್ದ ಶಫೀಕ್!

ಅಬ್ದುಲ್ಲಾ ಶಫೀಕ್ 24 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 20 ರನ್ ಗಳಿಸಿದರು. ಶಫೀಕ್ ವಿಶ್ವಕಪ್‌ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 113 ರನ್ ಗಳಿಸಿದ್ದರು. ಆ ಪಂದ್ಯ ಹೈದರಾಬಾದ್‌ನಲ್ಲಿ ನಡೆದಿತ್ತು. ಆದರೆ ಈ ಬಾರಿ ಅವರು ಬೇಗನೆ ಪೆವಿಲಿಯನ್‌ಗೆ ಸೇರಬೇಕಾಯಿತು. 41 ರನ್‌ಗಳಾಗುವಷ್ಟರಲ್ಲಿ ಪಾಕಿಸ್ತಾನದ ಮೊದಲ ವಿಕೆಟ್ ಪತನವಾಯಿತು. ಅಲ್ಲಿಗೆ ರೋಹಿತ್ ಅವರ ಟ್ರಿಕ್ ವರ್ಕೌಟ್ ಆಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News