ಮತ್ತೊಂದು ದೊಡ್ಡ ದಾಖಲೆಯತ್ತ ವಿರಾಟ್: ಪಾಕ್ ವಿರುದ್ಧದ ಪಂದ್ಯದಲ್ಲಿ ಸಚಿನ್ ಹಿಂದಿಕ್ಕಿ ಇತಿಹಾಸ ಸೃಷ್ಟಿಸ್ತಾರಾ ಚೀಕು?

Virat Kohli's eye on Big Record: 'ಕ್ರಿಕೆಟ್ ದೇವರು' ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧ ವಿಶೇಷ ದಾಖಲೆಯನ್ನು ಮಾಡಿದ್ದು, ಆ ದಾಖಲೆಯನ್ನು ಇಲ್ಲಿಯವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಆದರೆ ಇಂದು ವಿರಾಟ್ ಕೊಹ್ಲಿಗೆ ಇಂದು ಸಾಧ್ಯವಾಗುತ್ತಿದೆ.

Written by - Bhavishya Shetty | Last Updated : Oct 14, 2023, 02:57 PM IST
    • ಅಹಮದಾಬಾದ್’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಹಣಾಹಣಿ
    • ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ
    • ವಿಶ್ವಕಪ್‌’ನಲ್ಲಿ ಪಾಕಿಸ್ತಾನ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಸಚಿನ್
ಮತ್ತೊಂದು ದೊಡ್ಡ ದಾಖಲೆಯತ್ತ ವಿರಾಟ್: ಪಾಕ್ ವಿರುದ್ಧದ ಪಂದ್ಯದಲ್ಲಿ ಸಚಿನ್ ಹಿಂದಿಕ್ಕಿ ಇತಿಹಾಸ ಸೃಷ್ಟಿಸ್ತಾರಾ ಚೀಕು? title=
Virat Kohli - Sachin Tendulkar

Virat Kohli's eye on Big Record: ಅಕ್ಟೋಬರ್ 14 ರಂದು ಅಂದರೆ ಇಂದು ಅಹಮದಾಬಾದ್’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಹಣಾಹಣಿ ನಡೆಯುತ್ತಿದೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ.

ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದರ ಮೇಲೆ ಕಣ್ಣಿಟ್ಟಿದ್ದು, ಇತಿಹಾಸ ಬರೆಯುವ ಹೊಸ್ತಿಲಿನಲ್ಲಿದ್ದಾರೆ.

ಇದನ್ನೂ ಓದಿ: India vs Pakistan: ಭಾರತ vs ಪಾಕಿಸ್ತಾನ ಪಂದ್ಯದ ವೇಳೆ ನಡೆದ ಅತೀ ದೊಡ್ಡ ಗಲಾಟೆಗಳು ಇವೇ…

'ಕ್ರಿಕೆಟ್ ದೇವರು' ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧ ವಿಶೇಷ ದಾಖಲೆಯನ್ನು ಮಾಡಿದ್ದು, ಆ ದಾಖಲೆಯನ್ನು ಇಲ್ಲಿಯವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಆದರೆ ಇಂದು ವಿರಾಟ್ ಕೊಹ್ಲಿಗೆ ಇಂದು ಸಾಧ್ಯವಾಗುತ್ತಿದೆ.

1992 ರಿಂದ 2011ರ ವಿಶ್ವಕಪ್ ವರೆಗೆ, ಸಚಿನ್ ಪಾಕಿಸ್ತಾನದ ವಿರುದ್ಧ ಆಡಿದ 5 ಪಂದ್ಯಗಳಲ್ಲಿ ಗರಿಷ್ಠ 313 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಇಂದು ಆ ದಾಖಲೆಯನ್ನು ಬ್ರೇಕ್ ಮಾಡಿ, ಸಚಿನ್ ನಂತರ ಪಾಕಿಸ್ತಾನದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂದೆನಿಸಿಕೊಳ್ಳುವ ತವಕದಲ್ಲಿದ್ದಾರೆ.

ವಿರಾಟ್‌ಗೆ ಇತಿಹಾಸ ಸೃಷ್ಟಿಸುವ ಅವಕಾಶ:

ವಿಶ್ವಕಪ್‌’ನಲ್ಲಿ ಪಾಕಿಸ್ತಾನ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಸಚಿನ್ (313) ಹೆಸರಿನಲ್ಲಿದೆ. ಇದಾದ ನಂತರ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. 2011ರಿಂದ 2019ರ ವಿಶ್ವಕಪ್‌’ವರೆಗಿನ ಮೂರು ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿ ಒಟ್ಟು 193 ರನ್‌ ಗಳಿಸಿದ್ದಾರೆ. ಇಂದು ವಿರಾಟ್ ನಂಬರ್-1 ಆಗುವ ಅವಕಾಶವಿದೆ. ಈ ದೊಡ್ಡ ದಾಖಲೆಯನ್ನು ಮುರಿಯಲು ಕೊಹ್ಲಿಗೆ 121 ರನ್ ಅಗತ್ಯವಿದೆ. ಅಂದರೆ ಇದಕ್ಕಾಗಿ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಆಡಬೇಕಾಗಿರುವುದು ಸ್ಪಷ್ಟ.

ಇದನ್ನೂ ಓದಿ: Navratri 2023: ನವರಾತ್ರಿಯ ಶುಭ ದಿನಗಳಲ್ಲಿ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ

ಸದ್ಯ ಕೊಹ್ಲಿಯ ಫಾರ್ಮ್ ಬಗ್ಗೆ ಮಾತನಾಡುವುದಾದರೆ, ಸದ್ಯಕ್ಕೆ ಅವರು ಅತ್ಯುತ್ತಮ ಫಾರ್ಮ್‌’ನಲ್ಲಿದ್ದಾರೆ. ವಿಶ್ವಕಪ್ ನಲ್ಲಿ ಇದುವರೆಗೆ ಟೀಂ ಇಂಡಿಯಾ ಆಡಿರುವ ಎರಡೂ ಪಂದ್ಯಗಳಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 85 ರನ್‌’ಗಳ ಇನ್ನಿಂಗ್ಸ್ ಆಡುವ ಮೂಲಕ ಟೀಂ ಇಂಡಿಯಾಗೆ ಗೆಲುವಿನ ಅಡಿಪಾಯ ಹಾಕಿದ್ದರು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಕೂಡ 97 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಅಫ್ಘಾನಿಸ್ತಾನ ವಿರುದ್ಧವೂ ಕೊಹ್ಲಿ 55 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News