ಸನಾ ಗಂಗೂಲಿ-ಸಾರಾ ತೆಂಡೂಲ್ಕರ್ ಓದುತ್ತಿರುವ ಕಾಲೇಜಿನ ಫೀಜ್ ಎಷ್ಟು ಗೊತ್ತಾ?

Sourav Ganguly daughter Sana college fees: ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ. ಅಧಿಕೃತ ವರದಿಗಳ ಪ್ರಕಾರ ಕಳೆದ ವರ್ಷ ಸುಮಾರು 7.5 ಲಕ್ಷ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳಿದ್ದಾರೆ. ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಕೆನಡಾ ಹೀಗೆ ಅನೇಕ ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

1 /7

ಬ್ರಿಟನ್ ಮತ್ತು ಅಮೆರಿಕದ ಉನ್ನತ ಸಂಸ್ಥೆಗಳು ಉನ್ನತ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಮ್ಯಾಸಚೂಸೆಟ್ಸ್ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಉತ್ತಮ ಶಿಕ್ಷಣವನ್ನು ಒದಗಿಸುತ್ತದೆ.

2 /7

ಇಂತಹದ್ದೇ ಮತ್ತೊಂದು ಪ್ರಖ್ಯಾತ ಸಂಸ್ಥೆ ಇದ್ದು, ಇದು ಭಾರತದ ಸ್ಟಾರ್ ಮಕ್ಕಳ ನೆಚ್ಚಿನ ವಿಶ್ವವಿದ್ಯಾಲಯವಾಗಿದೆ. ಇದು ಲಂಡನ್‌’ನಲ್ಲಿದೆ. ಆ ವಿಶ್ವವಿದ್ಯಾಲಯದಲ್ಲಿ ನಮ್ಮ ದೇಶದ ಇಬ್ಬರು ಶ್ರೇಷ್ಠ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರ ಮಕ್ಕಳು ವಿದ್ಯಾಭ್ಯಾಸ ಪಡೆದಿದ್ದಾರೆ.

3 /7

ಕುತೂಹಲಕಾರಿ ವಿಷಯವೆಂದರೆ ಈ ವಿಶ್ವವಿದ್ಯಾನಿಲಯವು ವಿಶ್ವದ ಉನ್ನತ ಸಂಸ್ಥೆಗಳಲ್ಲಿ ಸೇರಿದೆ. ಇನ್ನು ಈ ಸಂಸ್ಥೆಯ ಶುಲ್ಕ ಕೂಡ ಅದೇ ರೀತಿ ಹೈಲೆವೆಲ್’ನಲ್ಲಿದೆ. ಒಬ್ಬ ಸಾಮಾನ್ಯ ಭಾರತೀಯನ ಮಗು ತನ್ನ ಏಳು ತಲೆಮಾರಿನ ಆಸ್ತಿಯನ್ನು ಮಾರಾಟ ಮಾಡಿದರೂ ಇಲ್ಲಿ ಓದಲು ಸಾಧ್ಯವಿಲ್ಲವೇನೋ…!

4 /7

ಈ ವಿಶ್ವವಿದ್ಯಾಲಯದ ಹೆಸರು ಯೂನಿವರ್ಸಿಟಿ ಕಾಲೇಜ್ ಲಂಡನ್ (UCL). ಇದು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಇದು QS ವಿಶ್ವ ಶ್ರೇಯಾಂಕದಲ್ಲಿ ಎಂಟನೇ ಶ್ರೇಯಾಂಕವನ್ನು ಪಡೆದುಕೊಂಡಿದೆ. ಬ್ರಿಟನ್‌’ನಲ್ಲಿ ಎರಡನೇ ಅತ್ಯಂತ ಗೌರವಾನ್ವಿತ ವಿಶ್ವವಿದ್ಯಾಲಯವಾಗಿದೆ. ಇನ್ನು QS ವಿಶ್ವ ಶ್ರೇಯಾಂಕದಲ್ಲಿ ನಮ್ಮ ದೇಶದ ಯಾವುದೇ ಸಂಸ್ಥೆಯು ಟಾಪ್ 150 ರಲ್ಲಿ ಬಂದಿಲ್ಲ.

5 /7

UCL ನ ಖ್ಯಾತಿಯು ವಿಶ್ವ ಮಟ್ಟದಲ್ಲಿದೆ. ಇಲ್ಲಿಯವರೆಗೆ, ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಥವಾ ಪ್ರಾಧ್ಯಾಪಕರು 30 ನೊಬೆಲ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸೌರವ್ ಗಂಗೂಲಿ ಅವರ ಪುತ್ರಿ ಸನಾ ಗಂಗೂಲಿ ಇಲ್ಲಿ ಅರ್ಥಶಾಸ್ತ್ರದಲ್ಲಿ ಡಿಗ್ರಿ ಪಡೆಯುತ್ತಿದ್ದಾರೆ. 2020ರಲ್ಲಿ ಪ್ರವೇಶ ಪಡೆದ ಅವರ ಕೋರ್ಸ್ ಈ ವರ್ಷ ಮುಗಿಯಲಿದೆ. ಇದರೊಂದಿಗೆ ಸನಾ ಲಂಡನ್‌’ನ ಪಿಡಬ್ಲ್ಯೂಸಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಕೆಲಸಕ್ಕಾಗಿ ಅವರು ವಾರ್ಷಿಕವಾಗಿ ಸುಮಾರು 30 ಲಕ್ಷ ರೂ ಸಂಭಾವನೆ ಪಡೆಯುತ್ತಿದ್ದಾರೆ.

6 /7

ಇನ್ನು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಈ ವಿಶ್ವವಿದ್ಯಾಲಯದಿಂದ Clinical and Public Health Nutrition ವಿಷಯದಲ್ಲಿ ಎಂಎಸ್ಸಿ ಪದವಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷ ಅವರು ಈ ಕೋರ್ಸ್ ಅನ್ನು ಪೂರ್ಣಗೊಳಿಸುತ್ತಾರೆ. ಇದಕ್ಕೂ ಮೊದಲು, ಸಾರಾ 2015 ಮತ್ತು 2018 ರ ನಡುವೆ ಬಯೋಮೆಡಿಕಲ್ ಸೈನ್ಸ್‌’ನಲ್ಲಿ ಪದವಿ ಪಡೆದಿದ್ದರು.

7 /7

UCL ಶುಲ್ಕಗಳಿಗೆ ಸಂಬಂಧಿಸಿದಂತೆ, ಇದು ವಿಶ್ವದ ಅತ್ಯಂತ ದುಬಾರಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಈ ಸಂಸ್ಥೆಯಿಂದ ಮೂರರಿಂದ ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್ ಮಾಡಿದರೆ, ನೀವು ಪ್ರತಿ ವರ್ಷ 30 ರಿಂದ 35 ಲಕ್ಷ ರೂ.ಗಳನ್ನು ಬೋಧನಾ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಅಂದರೆ ನಾಲ್ಕು ವರ್ಷಗಳ ಕೋರ್ಸ್‌ಗೆ ನೀವು ಸುಮಾರು 1.40 ಕೋಟಿ ರೂಪಾಯಿ ಪಾವತಿಸಬೇಕಾಗಬಹುದು. ಇದರ ಹೊರತಾಗಿ ವಸತಿ ಮತ್ತು ಆಹಾರದ ವೆಚ್ಚಗಳಿವೆ. ಮಾಸ್ಟರ್ ಆಫ್ ಸೈನ್ಸ್ (MS) ಪದವಿಗಾಗಿ, ನೀವು ಒಂದು ವರ್ಷದಲ್ಲಿ 40 ಲಕ್ಷದವರೆಗೆ ಶುಲ್ಕವನ್ನು ಪಾವತಿಸಬೇಕಾಗಬಹುದು. ಈ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ತಮ್ಮ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ.