IPL 2021: ಫೈನಲ್‌ನಲ್ಲಿ CSK ಪಾಲಿಗೆ ಕಂಟಕವಾಗಬಹುದು KKRನ ಈ ಆಟಗಾರ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಯುವ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ ಹೆಚ್ಚಿನ ಸಂದರ್ಭಗಳಲ್ಲಿ ಮ್ಯಾಚ್ ವಿನ್ನರ್ ಆಗಿ ಸಾಬೀತಾಗಿದ್ದಾರೆ. 

Written by - Ranjitha R K | Last Updated : Oct 14, 2021, 05:37 PM IST
  • ಮೈನ್ ವಿನ್ನರ್ ವೆಂಕಟೇಶ್ ಅಯ್ಯರ್
  • ಐಪಿಎಲ್ 2021 ರಲ್ಲಿ ಮಿಂಚಿರುವ ವೆಂಕಟೇಶ್
  • CSK ಪಾಲಿಗೆ ಕಂಟಕವಾಗುವ ಸಾಧ್ಯತೆ
IPL 2021:  ಫೈನಲ್‌ನಲ್ಲಿ CSK ಪಾಲಿಗೆ ಕಂಟಕವಾಗಬಹುದು KKRನ ಈ ಆಟಗಾರ   title=
ಐಪಿಎಲ್ 2021 ರಲ್ಲಿ ಮಿಂಚಿರುವ ವೆಂಕಟೇಶ್ (photo BCCI/IPL)

ನವದೆಹಲಿ : ಐಪಿಎಲ್ 2021 (IPL 2021) ಫೈನಲ್ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ನಡುವೆ ಅಕ್ಟೋಬರ್ 15 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಂಎಸ್ ಧೋನಿ (MS Dhoni) ನಿವೃತ್ತಿಯ ಮೊದಲು 'ಯೆಲ್ಲೋ ಆರ್ಮಿ' ಪ್ರಶಸ್ತಿಯನ್ನು ಗೆಲ್ಲಲು ಶತ ಪ್ರಯತ್ನ ನಡೆಸುತ್ತಿದೆ. ಆದರೆ ಕೆಕೆಆರ್‌ನ ಈ ಯುವ ಆಟಗಾರ  ಸಿಎಸ್‌ಕೆ (Chennai Super Kings) ಟ್ರೋಫಿ ಕನಸಿಗೆ ಮುಳುವಾಗುವ ಸಾಧ್ಯತೆ ಇದೆ.

ಪುರುಷ ವಿಜೇತ ವೆಂಕಟೇಶ್ ಅಯ್ಯರ್ :
ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡದ ಯುವ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ ಹೆಚ್ಚಿನ ಸಂದರ್ಭಗಳಲ್ಲಿ ಮ್ಯಾಚ್ ವಿನ್ನರ್ ಆಗಿ ಸಾಬೀತಾಗಿದ್ದಾರೆ. ಐಪಿಎಲ್ 2021 ರ (IPL 2021) ಮೊದಲ ಹಂತದಲ್ಲಿ, ಕೆಕೆಆರ್ ಬಹಳಷ್ಟು ಅಂಕಗಳ ನಷ್ಟವನ್ನು ಎದುರಿಸಬೇಕಾಯಿತು. ಆದರೆ, ಇದನ್ನು ಎರಡನೇ ಹಂತದಲ್ಲಿ ವೆಂಕಟೇಶ್ ಸರಿದೂಗಿಸಿದರು.

ಇದನ್ನೂ ಓದಿ : T20 World Cup 2021: ತಂಡಕ್ಕೆ ಎಂಟ್ರಿ ಪಡೆದ Shardul Thakur , ಈ ಆಟಗಾರ ಟೀಮಿಂದ ಹೊರಕ್ಕೆ

ಐಪಿಎಲ್ 2021 ರಲ್ಲಿ ಮಿಂಚಿರುವ ವೆಂಕಟೇಶ್ ಅಯ್ಯರ್ : 
ಐಪಿಎಲ್ 2021 (IPL 2021)  ರ ಎರಡನೇ ಹಂತದಲ್ಲಿ ಕೆಕೆಆರ್ (KKR)ಅದ್ಬುತ ಕಂಬ್ಯಾಕ್ ಮಾಡಿ ಫೈನಲ್‌ನಲ್ಲಿ ಸ್ಥಾನ ಪಡೆಯಿತು. ವೆಂಕಟೇಶ್ ಅಯ್ಯರ್ ತಮ್ಮ ತಂಡಕ್ಕೆ ಟ್ರಂಪ್ ಕಾರ್ಡ್ ಎನ್ನುವುದು ಸಾಬೀತಾಗಿದೆ. 9 ಪಂದ್ಯಗಳಲ್ಲಿ 40.00 ಸರಾಸರಿಯಲ್ಲಿ ಮತ್ತು 125.00 ಸ್ಟ್ರೈಕ್ ರೇಟ್ ನಲ್ಲಿ 320 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧ ಶತಕಗಳನ್ನು ಸೇರಿಸಲಾಗಿದೆ.

ದೆಹಲಿ ವಿರುದ್ಧ ಅದ್ಭುತ ಅರ್ಧ ಶತಕ  :
ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಅರ್ ಗೆಲುವು ಸಾಧಿಸುವಲ್ಲಿ ವೆಂಕಟೇಶ್ ಅಯ್ಯರ್  (venkatesh Iyer) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು 41 ಎಸೆತಗಳಲ್ಲಿ 134.14 ಸ್ಟ್ರೈಕ್ ರೇಟ್ ನಲ್ಲಿ 55 ರನ್ ಗಳಿಸಿದ್ದಾರೆ. ಇದರಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದೆ. ಅಯ್ಯರ್ ಶುಭಮನ್ ಗಿಲ್ ಜೊತೆ 96 ರನ್ ಗಳ ಓಪನಿಂಗ್ ಪಾರ್ಟ್ನರ್ ಶಿಪ್ ಮಾಡಿದ್ದಾರೆ. 

ಇದನ್ನೂ ಓದಿ : T20 world cup ಗಾಗಿ ಟೀಂ ಇಂಡಿಯಾ ಜೆರ್ಸಿ ಬಿಡುಗಡೆ, ಹೊಸ ಲುಕ್ ನಲ್ಲಿ ಆಟಗಾರರು

CSK ಪಾಲಿಗೆ ಕಂಟಕ : 
ಎಂಎಸ್ ಧೋನಿ (MS Dhoni) ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) 3 ಬಾರಿ ಚಾಂಪಿಯನ್   ಆಗಿ ಹೊರಹೊಮ್ಮಿದೆ. ನಾಲ್ಕನೇ ಬಾರಿಗೆ  ಪ್ರಶಸ್ತಿ ಗೆಲ್ಲುವ 'ಕ್ಯಾಪ್ಟನ್ ಕೂಲ್' ಕನಸನ್ನು ವೆಂಕಟೇಶ್ ಅಯ್ಯರ್  ಭಗ್ನಗೊಳಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News