T20 World Cup 2021: ತಂಡಕ್ಕೆ ಎಂಟ್ರಿ ಪಡೆದ Shardul Thakur , ಈ ಆಟಗಾರ ಟೀಮಿಂದ ಹೊರಕ್ಕೆ

ಮುಖ್ಯ ತಂಡದಲ್ಲಿ ಶಾರ್ದೂಲ್ ಠಾಕೂರ್ ಆಗಮನದಿಂದಾಗಿ ಸ್ಪಿನ್ ಆಲ್ ರೌಂಡರ್ ಅಕ್ಷರ್ ಅವರನ್ನು ಹೊರಗಿಡಲಾಗಿದೆ.

Written by - Ranjitha R K | Last Updated : Oct 13, 2021, 05:47 PM IST
  • T20 World Cup 2021ರ ತಂಡದಲ್ಲಿ ಶಾರ್ದೂಲ್ ಠಾಕೂರ್ ಗೆ ಜಾಗ
  • ಅಕ್ಷರ್ ಪಟೇಲ್ ತಂಡದಿಂದ ಹೊರಕ್ಕೆ
  • ಭಾರತ ತಂಡದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ?
T20 World Cup 2021: ತಂಡಕ್ಕೆ ಎಂಟ್ರಿ ಪಡೆದ Shardul Thakur , ಈ ಆಟಗಾರ ಟೀಮಿಂದ ಹೊರಕ್ಕೆ  title=
T20 World Cup 2021ರ ತಂಡದಲ್ಲಿ ಶಾರ್ದೂಲ್ ಠಾಕೂರ್ ಗೆ ಜಾಗ (photo bcci)

ನವದೆಹಲಿ : ಆಲ್‌ರೌಂಡರ್ ಶಾರ್ದೂಲ್ ಠಾಕೂರ್ (Shardul Thakur) ಐಪಿಎಲ್ 2021 ರಲ್ಲಿ ಉತ್ತಮ ಆಟ ಪ್ರದರ್ಶಿಸಿರುವುದಕ್ಕೆ ಪ್ರತಿಫಲ ಸಿಕ್ಕಿದೆ.  ಶಾರ್ದೂಲ್ ಠಾಕೂರ್  2021 ರ ಐಸಿಸಿ ಟಿ 20 ವಿಶ್ವಕಪ್‌ ನ ಟೀಂ ಇಂಡಿಯಾದ 15 ಜನರ ಮುಖ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.  

ಅಕ್ಷರ್ ಪಟೇಲ್ ತಂಡದಿಂದ ಹೊರಕ್ಕೆ : 
ಮುಖ್ಯ ತಂಡದಲ್ಲಿ ಶಾರ್ದೂಲ್ ಠಾಕೂರ್ (Shardul Thakur) ಆಗಮನದಿಂದಾಗಿ ಸ್ಪಿನ್ ಆಲ್ ರೌಂಡರ್ ಅಕ್ಷರ್ (Axar Patel) ಅವರನ್ನು ಹೊರಗಿಡಲಾಗಿದೆ.  ಅಕ್ಷರ್  ಪಟೇಲ್ ಅವರನ್ನು 15 ಜನರ ತಂಡದಿಂದ ಹೊರಗಿಟ್ಟು, ಸ್ಟಾಂಡ್ ಬೈ ಆಟಗಾರನಾಗಿ (Standby Player) ಇಡಲಾಗಿದೆ.  ಈ ಬದಲಾವನೆಯನ್ನು ಬಿಸಿಸಿಐ (BCCI) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಪ್ರಕಟಿಸಿದೆ.

 

ಇದನ್ನೂ ಓದಿ : T20 world cup ಗಾಗಿ ಟೀಂ ಇಂಡಿಯಾ ಜೆರ್ಸಿ ಬಿಡುಗಡೆ, ಹೊಸ ಲುಕ್ ನಲ್ಲಿ ಆಟಗಾರರು
 

ಟಿ 20 ವಿಶ್ವಕಪ್‌ಗೆ ಭಾರತ ತಂಡ:
ವಿರಾಟ್ ಕೊಹ್ಲಿ (Virat Kohli) (ಕ್ಯಾಪ್ಟನ್), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್ ), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ

ಸ್ಟ್ಯಾಂಡ್ ಬೈ: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ದೀಪಕ್ ಚಹಾರ್
ಕೋಚ್: ರವಿ ಶಾಸ್ತ್ರಿ. 
ಮೆಂಟರ್ : ಎಂಎಸ್ ಧೋನಿ

ಐಸಿಸಿ ಟಿ 20 ವಿಶ್ವಕಪ್ 2021 (T20 World Cup 2021) ಕ್ಕೆ ಟೀಂ ಇಂಡಿಯಾ ವೇಳಾಪಟ್ಟಿ:

ಭಾರತ vs ಪಾಕಿಸ್ತಾನ- 24 ಅಕ್ಟೋಬರ್, 7:30 PM IST, ದುಬೈ
ಇಂಡಿಯಾ vs ನ್ಯೂಜಿಲ್ಯಾಂಡ್- 31 ಅಕ್ಟೋಬರ್, 7:30 PM IST, ದುಬೈ
ಇಂಡಿಯಾ vs ಅಫ್ಘಾನಿಸ್ತಾನ- 03 ನವೆಂಬರ್, 7:30 PM IST, ಅಬುಧಾಬಿ
ಇಂಡಿಯಾ vs B1- 05 ನವೆಂಬರ್ , 7:30 PM IST, ದುಬೈ
ಇಂಡಿಯಾ vs A2- ನವೆಂಬರ್ 08, 7:30 PM IST, ದುಬೈ
ಸೆಮಿ-ಫೈನಲ್ 1- ನವೆಂಬರ್ 10, 7:30 PM IST, ಅಬುಧಾಬಿ
ಸೆಮಿಫೈನಲ್ 2- ನವೆಂಬರ್ 10, 7:30 PM IST, ದುಬೈ
ಫೈನಲ್- ನವೆಂಬರ್ 14, 7:30 PM IST, ದುಬೈ.

ಇದನ್ನೂ ಓದಿ :  Team India Captaincy : 'ಕೊಹ್ಲಿ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ಇವರೇ ಅಂತೇ ನೋಡಿ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News