T20 world cup ಗಾಗಿ ಟೀಂ ಇಂಡಿಯಾ ಜೆರ್ಸಿ ಬಿಡುಗಡೆ, ಹೊಸ ಲುಕ್ ನಲ್ಲಿ ಆಟಗಾರರು

ಬಿಸಿಸಿಐ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದೆ. ಇದು, ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಜರ್ಸಿಯ ಬಗೆಗಿನ ಪೋಸ್ಟ್.

Written by - Ranjitha R K | Last Updated : Oct 13, 2021, 02:58 PM IST
  • ಬಿಡುಗಡೆಯಾಯಿತು ಟೀಂ ಇಂಡಿಯಾ ಜೆರ್ಸಿ
  • ಪೋಸ್ಟ್ ಶೇರ್ ಮಾಡಿದ ಬಿಸಿಸಿಐ
  • T20 world cupನಲ್ಲಿ ಹೊಸ ಲುಕ್ ನಲ್ಲಿ ಕಾಣಿಸಲಿದ್ದಾರೆ ಆಟಗಾರರು
T20 world cup ಗಾಗಿ ಟೀಂ ಇಂಡಿಯಾ ಜೆರ್ಸಿ ಬಿಡುಗಡೆ, ಹೊಸ ಲುಕ್ ನಲ್ಲಿ ಆಟಗಾರರು   title=
ಬಿಡುಗಡೆಯಾಯಿತು ಟೀಂ ಇಂಡಿಯಾ ಜೆರ್ಸಿ (photo zee news)

ನವದೆಹಲಿ : ಟಿ 20 ವಿಶ್ವಕಪ್ 2021 (T20 World cup) ಯುಎಇ ಮತ್ತು ಒಮಾನ್‌ನಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ. ಈ ಪಂದ್ಯಾವಳಿಗೆ ಟೀಮ್ ಇಂಡಿಯಾ (Team India), ಈಗಾಗಲೇ ತನ್ನ ತಂಡವನ್ನು ಘೋಷಿಸಿದೆ. ಬುಧವಾರ ಬಿಸಿಸಿಐ ಟಿ 20 ವಿಶ್ವಕಪ್‌ಗಾಗಿ ಟೀಂ ಇಂಡಿಯಾದ ಜರ್ಸಿಯನ್ನು (Team India new Jersey) ಬಿಡುಗಡೆ ಮಾಡಿದೆ. ಟೀಮ್ ಇಂಡಿಯಾದ ಆಟಗಾರರು ಈ ನೀಲಿ ಜರ್ಸಿಯನ್ನು ಧರಿಸಿ ಅದ್ಭುತವಾಗಿ ಕಾಣುತ್ತಿದ್ದಾರೆ. 

ಜರ್ಸಿಯನ್ನು ಬಿಡುಗಡೆ ಮಾಡಿದ ಬಿಸಿಸಿಐ :  
ಬಿಸಿಸಿಐ (BCCI) ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದೆ. ಇದು, ಟಿ 20 ವಿಶ್ವಕಪ್‌ನಲ್ಲಿ (T20 World cup) ಟೀಮ್ ಇಂಡಿಯಾ ಜರ್ಸಿಯ ಬಗೆಗಿನ ಪೋಸ್ಟ್. ಈ ಪೋಸ್ಟ್‌ನಲ್ಲಿ, ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ ಸೇರಿದಂತೆ ಟೀಮ್ ಇಂಡಿಯಾದ ಕೆಲವು ಆಟಗಾರರು ಹೊಸ ಜರ್ಸಿ ಧರಿಸಿರುವುದು ಕಂಡುಬಂದಿದೆ. ಈ ನೀಲಿ ಜರ್ಸಿಯ ಪ್ರಾಯೋಜಕರು BYJUS.  ಈ ಕಂಪನಿಯು ಟೀಮ್ ಇಂಡಿಯಾ ಜರ್ಸಿಯನ್ನು ದೀರ್ಘಕಾಲದವರೆಗೆ ಪ್ರಾಯೋಜಿಸುತ್ತಿದೆ. 

ಇದನ್ನೂ ಓದಿ : Team India Captaincy : 'ಕೊಹ್ಲಿ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ಇವರೇ ಅಂತೇ ನೋಡಿ'

 

ಅಕ್ಟೋಬರ್ 24 ರಂದು ನಡೆಯಲಿದೆ ಮೊದಲ ಪಂದ್ಯ :
ಟೀಂ ಇಂಡಿಯಾ (Team India) ಅಕ್ಟೋಬರ್ 24 ರಂದು ಟಿ 20 ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ (Pakistan) ತಂಡದ ವಿರುದ್ದ ಸೆಣೆಸಲಿದೆ. UAE ಮತ್ತು ಒಮಾನ್‌ನಲ್ಲಿ ಅಕ್ಟೋಬರ್ 17 ರಿಂದ ವಿಶ್ವಕಪ್ ಆರಂಭವಾಗುತ್ತಿದೆ. 

 ಇದನ್ನೂ ಓದಿ : IPL : ಭಗ್ನವಾಯಿತು ವಿರಾಟ್ ಕನಸು, ಭಾವುಕರಾದ RCB ಪಡೆ, ಕಣ್ಣೀರಿಟ್ಟ ಕೊಹ್ಲಿ ಇಲ್ಲಿದೆ ವೀಡಿಯೊ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News