Russia-Ukraine Conflict: ರಷ್ಯಾ ದಾಳಿ ನಡೆಸಿದರೆ, ಉಕ್ರೇನ್ ಗೆ ಬೆಂಬಲ: ಬಿಡೆನ್

Russia-Ukraine Standoff - ಅಮೆರಿಕ ರಷ್ಯಾಕ್ಕೆ ಎಚ್ಚರಿಕೆಯೊಂದನ್ನು ನೀಡಿದೆ. ನಾವು ಸಂಘರ್ಷವನ್ನು ಬಯಸುವುದಿಲ್ಲ, ಆದರೆ ರಷ್ಯಾ (Russia) ಆಕ್ರಮಣ ಮಾಡಿದರೆ ಉಕ್ರೇನ್ (Ukraine) ಅನ್ನು ಬೆಂಬಲಿಸುತ್ತೇವೆ ಎಂದು ಯುಎಸ್ ಅಧ್ಯಕ್ಷ (US President) ಜೋ ಬಿಡೆನ್ (Joe Biden) ಟ್ವೀಟ್ ಮಾಡಿದ್ದಾರೆ.  

Written by - Nitin Tabib | Last Updated : Feb 19, 2022, 12:45 PM IST
  • ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ಮುಂದುವರೆದಿದೆ
  • ರಷ್ಯಾಕ್ಕೆ ಎಚ್ಚರಿಕೆ ನೀಡಿದ ಅಮೆರಿಕಾದ ಅಧ್ಯಕ್ಷ
  • ದಾಳಿ ನಡೆದರೆ ಅದಕ್ಕೆ ರಷ್ಯಾ ಹೊಣೆ
Russia-Ukraine Conflict: ರಷ್ಯಾ ದಾಳಿ ನಡೆಸಿದರೆ, ಉಕ್ರೇನ್ ಗೆ ಬೆಂಬಲ: ಬಿಡೆನ್ title=
Russia-Ukraine Standoff (File Photo)

ವಾಷಿಂಗ್ಟನ್: Russia-Ukraine Crisis - ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು ಮುಂದುವರೆದಿದೆ. ಉಕ್ರೇನ್ ಗಡಿಯ ಸುತ್ತಲೂ ರಷ್ಯಾ ತನ್ನ ಸೈನ್ಯವನ್ನು ನಿಯೋಜಿಸಿದೆ. ಏತನ್ಮಧ್ಯೆ, ಉಕ್ರೇನ್ ಅನ್ನು ಬೆಂಬಲಿಸುವ ಅಮೆರಿಕ ಸೇರಿದಂತೆ ಇತರ ಪಾಶ್ಚಿಮಾತ್ಯ ದೇಶಗಳು ರಷ್ಯಾದೊಂದಿಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾತನಾಡುತ್ತಿವೆ. ಇವೆಲ್ಲ ಬೆಳವಣಿಗೆಗಳ ನಡುವೆಯೇ ಅಮೇರಿಕಾ  ರಷ್ಯಾಕ್ಕೆ ಎಚ್ಚರಿಕೆ ನೀಡಿದೆ.

ನಾವು ಸಂಘರ್ಷವನ್ನು ಬಯಸುವುದಿಲ್ಲ
ಈ ಕುರಿತು ಯುಎಸ್ ಅಧ್ಯಕ್ಷ ಜೋ ಬಿಡನ್ ಒಂದರ ಮೇಲೊಂದರಂತೆ ಹಲವಾರು ಟ್ವೀಟ್ ಗಳನ್ನು ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ. "ನಾವು ಘರ್ಷಣೆಯನ್ನು ಬಯಸುವುದಿಲ್ಲ, ಆದರೆ ಉಕ್ರೇನ್ ಮೇಲೆ ಆಕ್ರಮಣ ಮಾಡಲು ರಷ್ಯಾದ ಕಾರಣಗಳನ್ನು ಸಹ ಸಮರ್ಥಿಸಲಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ. ಇದರ ಹೊರತಾಗಿಯೂ, ರಷ್ಯಾ (Ukraine Crisis) ತನ್ನ ಯೋಜನೆಗಳಿಗೆ ಅಂಟಿಕೊಂಡರೆ, ಅದು ತುಂಬಾ ಹಾನಿಕಾರಕ ಮತ್ತು ಅನಗತ್ಯ ಯುದ್ಧಕ್ಕೆ ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆ.

ಉಕ್ರೇನ್ ಅನ್ನು ಪ್ರಚೋದಿಸುವ ಪ್ರಯತ್ನಗಳು ನಡೆಯುತ್ತಿವೆ
ರಷ್ಯಾ ಬೆಂಬಲಿತ ಯೋಧರು ಉಕ್ರೇನ್‌ಗೆ ಪ್ರಚೋದನೆ ನೀಡಲು ಪ್ರಯತ್ನಿಸುತ್ತಿರುವ ವರದಿಗಳನ್ನು ನಾವು ನೋಡಿದ್ದೇವೆ ಎಂದು ಯುಎಸ್ ಅಧ್ಯಕ್ಷರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.ಇದು ಕದನ ವಿರಾಮದ ಉಲ್ಲಂಘನೆಯಾಗಿದೆ. ರಷ್ಯಾ ಮೊದಲು ಇಂತಹ ಆಟಗಳನ್ನು ಆಡುತ್ತಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ನಮ್ಮ ಮಿತ್ರರಾಷ್ಟ್ರಗಳು ಉಕ್ರೇನ್ ಜನರಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತವೆ, ಅದರ ಕ್ರಮಗಳಿಗೆ ನಾವು ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದರೆ, ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲು ಸಿದ್ಧವಾಗಿವೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-‘ಕಲಾ ತಪಸ್ವಿ’ ರಾಜೇಶ್ ನಿಧನ: ಸಿಎಂ ಬೊಮ್ಮಾಯಿ ಸೇರಿ ಗಣ್ಯರ ಸಂತಾಪ

ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಳ್ಳಿ
ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಳ್ಳಬಹುದು ಎಂದ ಅವರು, ಈಗಲೂ ಕಾಲ ಮೀರಿಲ್ಲ. ರಾಜತಾಂತ್ರಿಕ ವಿಧಾನಗಳ ಮೂಲಕ ರಷ್ಯಾ ಇನ್ನೂ ಈ ಸಮಸ್ಯೆಗೆ ಪರಿಹಾರವನ್ನು ಆಯ್ಕೆ ಮಾಡಬಹುದು. ದಕ್ಷಿಣದಲ್ಲಿ ರಷ್ಯಾದ ಪಡೆಗಳು ಇನ್ನೂ ಕಪ್ಪು ಸಮುದ್ರದ ಬಳಿ ಬೆಲಾರಸ್‌ನಲ್ಲಿ ನೆಲೆಗೊಂಡಿವೆ ಎಂದು ಬಿಡೆನ್ ಹೇಳಿದ್ದಾರೆ. ರಷ್ಯಾ ಪಡೆಗಳು ಉಕ್ರೇನ್ ಅನ್ನು ಸುತ್ತುವರೆದಿವೆ. ಮುಂದಿನ ದಿನಗಳಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ಸೇನೆ ಮುಂದಾಗಿದೆ.

ಇದನ್ನೂ ಓದಿ-DK Shivakumar : 'ನಾವು ಬಚ್ಚಲು ಬಾಯಿ ಈಶ್ವರಪ್ಪನ ರಾಜೀನಾಮೆ ಕೇಳುತ್ತಿಲ್ಲ'

ಉಕ್ರೇನ್‌ಗೆ ಪ್ಯಾಕೇಜ್ ನೀಡಲಾಗುವುದು
ಇನ್ನೊಂದೆಡೆ, ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದರೆ  ಉಕ್ರೇನ್‌ಗೆ ಪ್ಯಾಕೇಜ್ ನೀಡಲು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಪರಿಗಣಿಸುತ್ತಿವೆ ಎಂದು ಶ್ವೇತಭವನವು ಹೇಳಿಕೆಯನ್ನು ನೀಡಿದೆ. ಸೈಬರ್‌ಸ್ಪೇಸ್‌ನಲ್ಲಿ ರಷ್ಯಾ ಅತ್ಯಂತ ಆಕ್ರಮಣಕಾರಿ ಹೆಜ್ಜೆಗಳನ್ನು ಇಡುತ್ತಿದೆ. ಇದಕ್ಕಾಗಿ ರಷ್ಯಾದ ಹೊಣೆಗಾರಿಕೆಯನ್ನು ಸರಿಪಡಿಸಲು ವಾಷಿಂಗ್ಟನ್ ಬಯಸುತ್ತದೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ-Kalatapasvi Rajesh: ಸ್ಯಾಂಡಲ್​ವುಡ್​ನ ನ ಹಿರಿಯ ನಟ, ‘ಕಲಾ ತಪಸ್ವಿ’ ರಾಜೇಶ್ ವಿಧಿವಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News