Salary Hike : ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಸರ್ಕಾರಿ ನೌಕರರಿಗೆ ಸಿಹಿಸುದ್ದಿ! ಮೂಲ ವೇತನದಲ್ಲಿ 17% ಹೆಚ್ಚಳ ಪ್ರಕಟಿಸಿದ ಕೇಂದ್ರ ಸರ್ಕಾರ
Salary Hike latest news:ಎಲ್‌ಐಸಿ ನೌಕರರ ಮೂಲ ವೇತನದಲ್ಲಿ ಶೇ 17ರಷ್ಟು ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಎಲ್ ಐಸಿ ನೌಕರರ ವೇತನದಲ್ಲಿ ಹೆಚ್ಚಳವಾಗಲಿದೆ
Salary Hike latest news : ಲೋಕಸಭೆ ಚುನಾವಣೆ ದಿನಾಂಕ ಇಂದು ಮಧ್ಯಾಹ್ನ ಘೋಷಣೆಯಾಗಲಿದೆ. ಚುನಾವಣಾ ದಿನಾಂಕ ಘೋಷಣೆಯೊಂದಿಗೆ ನೀತಿ ಸಂಹಿತೆ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಮೋದಿ ಸರ್ಕಾರ ಎಲ್‌ಐಸಿ ನೌಕರರಿಗೆ ಉಡುಗೊರೆ ನೀಡಿದೆ. ಎಲ್‌ಐಸಿ ನೌಕರರ ಮೂಲ ವೇತನದಲ್ಲಿ ಶೇ 17ರಷ್ಟು ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಎಲ್ ಐಸಿ ನೌಕರರ ವೇತನದಲ್ಲಿ ಹೆಚ್ಚಳವಾಗಲಿದೆ.
ಎಲ್‌ಐಸಿ ನೌಕರರ ವೇತನ ಹೆಚ್ಚಳ :
ಜೀವ ವಿಮಾ ನಿಗಮದ (LIC) 1.10 ಉದ್ಯೋಗಿಗಳಿಗೆ ಮೋದಿ ಸರ್ಕಾರ ಹೋಳಿ ಉಡುಗೊರೆ ನೀಡಿದೆ. ನೌಕರರ ವೇತನವನ್ನು ಒಟ್ಟು ಶೇ.17ರಷ್ಟು ಹೆಚ್ಚಿಸಲಾಗಿದೆ. ಸರ್ಕಾರದ ನಿರ್ಧಾರದಿಂದ 1,10,000 ಕ್ಕೂ ಹೆಚ್ಚು ಎಲ್‌ಐಸಿ ಉದ್ಯೋಗಿಗಳು ಮತ್ತು 30,000 ಪಿಂಚಣಿದಾರರು ನೇರವಾಗಿ ಪ್ರಯೋಜನ ಪಡೆಯಲಿದ್ದಾರೆ. ಬ್ಯಾಂಕ್ ಉದ್ಯೋಗಿಗಳ ವೇತನ ಹೆಚ್ಚಿಸಿದ ಬೆನ್ನಲ್ಲೇ ಇದೀಗ ಎಲ್ ಐಸಿ ಉದ್ಯೋಗಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. LIC ಉದ್ಯೋಗಿಗಳ ವೇತನ ಹೆಚ್ಚಳವು ಆಗಸ್ಟ್ 1, 2022 ರಿಂದ ಜಾರಿಗೆ ಬರಲಿದೆ. ಎಲ್‌ಐಸಿ ನೌಕರರ ವೇತನ ಹೆಚ್ಚಳದಿಂದ ವಾರ್ಷಿಕ 4000 ಕೋಟಿ ರೂ. ಹೆಚ್ಚಿಗೆ ಖರ್ಕಾಗಲಿದೆ.
ಇದನ್ನೂ ಓದಿ: Gold Rate Today: ವಾರಾಂತ್ಯದಲ್ಲಿ ಸ್ಥಿರವಾದ ಚಿನ್ನದ ಬೆಲೆ.. ಏರಿಕೆ ಕಂಡ ಬೆಳ್ಳಿ!
ಕೇಂದ್ರ ಸರ್ಕಾರವು ಇತ್ತೀಚೆಗೆ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ಕೇಂದ್ರೀಯ ನೌಕರರ ತುಟ್ಟಿ ಭತ್ಯೆಯನ್ನು ಶೇ 46 ರಿಂದ 50 ರಷ್ಟು ಹೆಚ್ಚಿಸಿದೆ. ಏಳನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಕೇಂದ್ರ ಸರ್ಕಾರವು ಉದ್ಯೋಗಿಗಳ ಟೇಕ್ ಹೋಮ್ ಸಂಬಳವನ್ನು ಹೆಚ್ಚಿಸಲು ನಿರ್ಧರಿಸಿದೆ. ಕೇಂದ್ರ ಸರ್ಕಾರದ ನಂತರ, ಅನೇಕ ರಾಜ್ಯ ಸರ್ಕಾರಗಳು ಕೂಡಾ ರಾಜ್ಯ ನೌಕರರ ವೇತನವನ್ನು ಹೆಚ್ಚಿಸಿವೆ. ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಅರುಣಾಚಲ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಹೆಚ್ಚಿಸಿವೆ.
ಇದನ್ನೂ ಓದಿ: Free Gas Cylinder: 10 ದಿನ ಕಾಯಿರಿ... ಉಚಿತವಾಗಿ ಗ್ಯಾಸ್ ಸಿಲಿಂಡರ್ ಸಿಗುತ್ತದೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.