ಪ್ರಧಾನಮಂತ್ರಿ ಉಜ್ವಲ ಯೋಜನೆ: ಹೋಳಿ ಹಬ್ಬಕ್ಕೆ 10 ದಿನ ಬಾಕಿ ಇದ್ದು, ಈ ಸಂದರ್ಭದಲ್ಲಿ ಸರ್ಕಾರದಿಂದ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿದೆ. ಹೋಳಿ ಸಂದರ್ಭದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯದ ಸುಮಾರು 1.75 ಕೋಟಿ ಅರ್ಹ ಕುಟುಂಬಗಳಿಗೆ ಉಚಿತ LPG ಸಿಲಿಂಡರ್‌ಗಳನ್ನು ನೀಡುತ್ತಿದೆ. ʼಪ್ರಧಾನ ಮಂತ್ರಿ ಉಜ್ವಲ ಯೋಜನೆʼಯಡಿ ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿದೆ. ಯೋಗಿ ಸರ್ಕಾರದ ಯೋಜನೆಯಡಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೆ ೨ ಬಾರಿ ಹಬ್ಬಗಳ ಸಂದರ್ಭದಲ್ಲಿ ಉಚಿತ LPG ಸಿಲಿಂಡರ್‌ಗಳನ್ನು ನೀಡುವ ಯೋಜನೆ ಇದಾಗಿದೆ. ಈ ಹಿಂದೆ ನವೆಂಬರ್‌ನಲ್ಲಿ ದೀಪಾವಳಿ ಸಂದರ್ಭದಲ್ಲಿ ಸರ್ಕಾರ ಉಚಿತ LPG ಸಿಲಿಂಡರ್‌ಗಳನ್ನು ನೀಡಿತ್ತು. ನೀವು ಸಹ ಯುಪಿ ನಿವಾಸಿಯಾಗಿದ್ದರೆ, ನೀವು ಸರ್ಕಾರದ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯ ಲಾಭವನ್ನು ಪಡೆಯಬಹುದು.
ಲಾಭವನ್ನು ಹೇಗೆ ಪಡೆಯುವುದು?
ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ʼಪ್ರಧಾನ ಮಂತ್ರಿ ಉಜ್ವಲ ಯೋಜನೆʼಯ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ಉಜ್ವಲ ಯೋಜನೆಯನ್ನು ಪ್ರಧಾನಿ ಮೋದಿಯವರು 2016ರಲ್ಲಿ ಪ್ರಾರಂಭಿಸಿದರು. ಯುಪಿ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 2023-24ನೇ ಸಾಲಿಗೆ 2,312 ಕೋಟಿ ರೂ.ಗಳ ಬಜೆಟ್ ಅನ್ನು ನಿಗದಿಪಡಿಸಿದೆ. ಈ ಯೋಜನೆಯಡಿ ರಾಜ್ಯದ 1.75 ಕೋಟಿ ಬಡ ಮಹಿಳೆಯರಿಗೆ ಪ್ರತಿ ವರ್ಷ 2 ಉಚಿತ ಗ್ಯಾಸ್ ಸಿಲಿಂಡರ್ ರೀಫಿಲ್ ನೀಡಲಾಗುತ್ತಿದೆ.
ಇದನ್ನೂ ಓದಿ: Gratuity: 7 ವರ್ಷದ ನೌಕರಿ, ವೇತನ 35,000 ರೂ.ಗಳಾಗಿದ್ದರೆ, ಗ್ರ್ಯಾಚುಟಿ ವೇಳೆ ಎಷ್ಟು ಮೊತ್ತದ ಚೆಕ್ ಕೈಸೇರುತ್ತದೆ?
1.31 ಕೋಟಿಗೂ ಹೆಚ್ಚು ಗ್ಯಾಸ್ ಸಿಲಿಂಡರ್ ವಿತರಣೆ
ಮೊದಲ ಹಂತದಲ್ಲಿ ನವೆಂಬರ್ 1ರಿಂದ ಫೆಬ್ರವರಿ 15ರ ನಡುವೆ 80.30 ಲಕ್ಷ ಉಜ್ವಲ ಯೋಜನೆಯ ಫಲಾನುಭವಿ ಮಹಿಳೆಯರು ಗ್ಯಾಸ್ ಸಿಲಿಂಡರ್ ಮರುಪೂರಣವನ್ನು ಪಡೆದುಕೊಂಡಿದ್ದಾರೆ. ೨ನೇ ಹಂತದಲ್ಲಿ ಜನವರಿ 1ರಿಂದ ಇಲ್ಲಿಯವರೆಗೆ 50.87 ಲಕ್ಷ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ರೀಫಿಲ್ ನೀಡಲಾಗಿದೆ. ಈ ಯೋಜನೆಯಡಿಯಲ್ಲಿ 1.31 ಕೋಟಿಗೂ ಹೆಚ್ಚು LPG ಸಿಲಿಂಡರ್ ರೀಫಿಲ್‌ಗಳನ್ನು ವಿತರಿಸಲಾಗಿದೆ ಎಂದು ಯುಪಿ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ನವೆಂಬರ್ 10, 2023ರಂದು ಈ ಯೋಜನೆಯನ್ನು ಪ್ರಾರಂಭಿಸುವಾಗ, ಸಿಎಂ ಯೋಗಿ ಆದಿತ್ಯನಾಥ್ ಅವರು ಲಕ್ಷಾಂತರ ಉಜ್ವಲ ಫಲಾನುಭವಿಗಳ ಖಾತೆಗಳಿಗೆ ಸಬ್ಸಿಡಿ ಮೊತ್ತವನ್ನು ಜಮಾ ಮಾಡಿದ್ದರು.
ಸಿಲಿಂಡರ್ ದರ 100 ರೂ. ಇಳಿಕೆ
ಇನ್ನೊಂದೆಡೆ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಪ್ರಧಾನಿ ಮೋದಿಯವರು ಮಾರ್ಚ್ 8ರಂದು LPG ಬೆಲೆಯಲ್ಲಿ 100 ರೂ. ಇಳಿಕೆ ಮಾಡುವುದಾಗಿ ಘೋಷಿಸಿದ್ದರು. ಇದಾದ ನಂತರ ಸರ್ಕಾರಿ ತೈಲ ಕಂಪನಿಗಳು ಶುಕ್ರವಾರ ರಾತ್ರಿ 12ಗಂಟೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸಿವೆ. ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ LPG ಸಿಲಿಂಡರ್ ಬೆಲೆ ಈಗ 803 ರೂ.ಗೆ ಇಳಿದಿದೆ. ಈ ಸಿಲಿಂಡರ್ ಮುಂಬೈನಲ್ಲಿ 802.50 ರೂ., ಚೆನ್ನೈನಲ್ಲಿ 818.50 ರೂ. ಮತ್ತು ಕೋಲ್ಕತ್ತಾದಲ್ಲಿ 829 ರೂ.ಗೆ ಲಭ್ಯವಿದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಬಂಪರ್ ! ಡಿಎ ಅರಿಯರ್ಸ್, ಭತ್ಯೆಗಳಲ್ಲಿನ ಹೆಚ್ಚಳ ಸೇರಿದಾಗ ಖಾತೆಗೆ ಬರುವ ಮೊತ್ತ ಇದು !
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.