ಸರ್ಕಾರಿ ನೌಕರರಿಗೆ ಬಂಪರ್ ! ಡಿಎ ಅರಿಯರ್ಸ್, ಭತ್ಯೆಗಳಲ್ಲಿನ ಹೆಚ್ಚಳ ಸೇರಿದಾಗ ಖಾತೆಗೆ ಬರುವ ಮೊತ್ತ ಇದು !

7th pay commission salary Calculation : ಈ ಬಾರಿ ವೆಚ್ಚ ವೇತನ ಹೆಚ್ಚಳ ಸ್ವಲ್ಪ ಭಿನ್ನವಾಗಿದೆ. ತುಟ್ಟಿಭತ್ಯೆ 50% ತಲುಪಿರುವುದರಿಂದ, ಇದು ಇತರ ಭತ್ಯೆಗಳ ಹೆಚ್ಚಳಕ್ಕೂ ಕಾರಣವಾಗಿದೆ. 

Written by - Ranjitha R K | Last Updated : Mar 15, 2024, 01:19 PM IST
  • ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಶೇ 50 ರಷ್ಟು ಹೆಚ್ಚಳ
  • ನೌಕರರ ವೇತನ ಮತ್ತು ಪಿಂಚಣಿದಾರರ ಪಿಂಚಣಿಯಲ್ಲಿಯೂ ಏರಿಕೆ
  • ಜನವರಿ 2024 ರಿಂದಲೇ ಹೆಚ್ಚಳ ಜಾರಿಗೆ
ಸರ್ಕಾರಿ ನೌಕರರಿಗೆ ಬಂಪರ್ ! ಡಿಎ ಅರಿಯರ್ಸ್, ಭತ್ಯೆಗಳಲ್ಲಿನ ಹೆಚ್ಚಳ  ಸೇರಿದಾಗ ಖಾತೆಗೆ ಬರುವ ಮೊತ್ತ ಇದು !  title=

7th pay commission :ಇತ್ತೀಚೆಗೆ ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆಯನ್ನು ಶೇ 50 ರಷ್ಟು ಹೆಚ್ಚಿಸಿದೆ.ಇದು ಕೇಂದ್ರ ಸರ್ಕಾರಿ ನೌಕರರ ವೇತನ  ಮತ್ತು ಪಿಂಚಣಿದಾರರ ಪಿಂಚಣಿಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಈ ಮೂಲಕ ನೌಕರರ ವೇತನದಲ್ಲಿ ಆಗುವ ಹೆಚ್ಚಳವು ಜನವರಿ 2024 ರಿಂದಲೇ  ಜಾರಿಗೆ ಬರಲಿದೆ.  

ಜನವರಿ ಮತ್ತು ಜುಲೈನಲ್ಲಿ ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುತ್ತದೆ. ಈ ಮೂಲಕ ಸರ್ಕಾರಿ ನೌಕರರ ವೇತನದಲ್ಲಿಯೂ ಬದಲಾವಣೆಯಾಗುತ್ತದೆ. ಈ ಬಾರಿ ವೆಚ್ಚ ವೇತನ ಹೆಚ್ಚಳ ಸ್ವಲ್ಪ ಭಿನ್ನವಾಗಿದೆ.  ತುಟ್ಟಿಭತ್ಯೆ 50% ತಲುಪಿರುವುದರಿಂದ, ಇದು ಇತರ ಭತ್ಯೆಗಳ ಹೆಚ್ಚಳಕ್ಕೂ ಕಾರಣವಾಗಿದೆ. 

ಇದನ್ನೂ ಓದಿ : Petrol Diesel Price : ವರ್ಷಗಳ ಬಳಿಕ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಇಳಿಕೆ ! ನಿಮ್ಮ ನಗರದಲ್ಲಿ ಎಷ್ಟಿದೆ ಬೆಲೆ ?

ತುಟ್ಟಿಭ್ಯತೆ ಹೆಚ್ಚಳದಿಂದ ವೇತನದಲ್ಲಿ ಏರಿಕೆ :
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಈಗ ಶೇ.4ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ನೌಕರರ ವೇತನದಲ್ಲಿ ಉತ್ತಮ ಮಟ್ಟದ ಏರಿಕೆಯಾಗಲಿದೆ.ಇದನ್ನು  ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳುವುದಾದರೆ..    

ಮೂಲ ವೇತನ ರೂ.15,000 ಇದ್ದಾಗ : 
- ಒಬ್ಬರ ಮೂಲ ವೇತನ ರೂ.15 ಸಾವಿರ ಎಂದು ಭಾವಿಸೋಣ.
- 15 ಸಾವಿರದ 50% = 7500 ರೂ. 
-ಒಟ್ಟು ಸಂಬಳ (ಟಿಎ+ಮೂಲ ವೇತನ)=22,500 ರೂ.
- 46% ತುಟ್ಟಿಭತ್ಯೆ ಯೊಂದಿಗೆ  ಸಿಗುವ ವೇತನ  = 21,900 ರೂ. 
- 50% ತುಟ್ಟಿಭತ್ಯೆ ಯೊಂದಿಗೆ  ಸಿಗುವ ವೇತನ  = 22,500.ರೂ.
- 4% DA ಹೆಚ್ಚಳದ ನಂತರ ವೇತನದಲ್ಲಿ ಆದ ಏರಿಕೆ  = 22,500-21,900 = 1,600 ರೂ. 

ಮೂಲ ವೇತನ ರೂ.50,000 ಆಗಿದ್ದಾಗ : 
- ಒಬ್ಬರ ಮೂಲ ವೇತನ ರೂ.50 ಸಾವಿರ ಎಂದು ಭಾವಿಸೋಣ.
- 50 ಸಾವಿರದ 50% = 25,000 ರೂ.
-ಒಟ್ಟು ಸಂಬಳ (ಟಿಎ+ಮೂಲ ವೇತನ)=75,000 ರೂ.
- 46%  ಡಿಎ ಪ್ರಕಾರ ಸಿಗುವ ವೇತನ  = 73,000 ರೂ.
- 50% ಡಿಎ ಪ್ರಕಾರ ಸಿಗುವ ವೇತನ = 75,000 ರೂ. 
-  4% ಡಿಎ ಹೆಚ್ಚಳದ ನಂತರ ವೇತನದಲ್ಲಿ ಆದ ಏರಿಕೆ = 75,000-73,000 = 2,000 ರೂ.

ಇದನ್ನೂ ಓದಿ : Paytm Fastag Alert: ಪೇಟಿಎಂ ಫಾಸ್ಟ್ಯಾಗ್ ಬಳಕೆದಾರರಿಗೆ ಕೊನೆ ಅವಕಾಶ, ನಾಳೆಯಿಂದ ದುಪ್ಪಟ್ಟಾಗಲಿದೆ ಟೋಲ್

ಇತರ ಪಾವತಿಗಳಲ್ಲಿಯೂ ಹೆಚ್ಚಳ : 
7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರಿ ನೌಕರರು ತಮ್ಮ ವೇತನದ ಶೇ 50ರಷ್ಟು ವೇತನ ಪಡೆದಾಗ ಅವರ ಇತರ ಭತ್ಯೆಗಳನ್ನು ಕೂಡಾ  ಹೆಚ್ಚಿಸಲಾಗುವುದು. 

ತುಟ್ಟಿಭತ್ಯೆ 50% ತಲುಪಿದಾಗ ಈ ಭತ್ಯೆಗಳು ಹೆಚ್ಚಾಗುತ್ತವೆ :
- X, Y, Z ನಗರಗಳಲ್ಲಿ ಮನೆ ಬಾಡಿಗೆ ಭತ್ಯೆ (HRA) 27, 18, 9 ಶೇಕಡಾದಿಂದ 30, 20, 10 ಶೇಕಡಾಕ್ಕೆ ಹೆಚ್ಚಾಗುತ್ತದೆ.
- ಮಕ್ಕಳ ಶಿಕ್ಷಣ ಭತ್ಯೆ
- ಮಕ್ಕಳ ಆರೈಕೆ ವಿಶೇಷ ಭತ್ಯೆ
- ವಸತಿ ಭತ್ಯೆ 
-  ಟಿಎ ಫಾರ್ ರಿಲೋಕೇಶನ್ 
- ಗ್ರಾಚ್ಯುಟಿ ಲಿಮಿಟ್ 
- ಏಕರೂಪದ ಭತ್ಯೆ
- ಸ್ವಂತ ವಾಹನಕ್ಕೆ ಮೈಲೇಜ್ ಭತ್ಯೆ
- ದೈನಂದಿನ ಭತ್ಯೆ
- ಪ್ರಯಾಣ ಭತ್ಯೆ
- ಕ್ಯಾಂಟೀನ್ ಭತ್ಯೆ
-  ಡೆಪ್ಯೂಟೆಶನ್ ಆಲೋವೆನ್ಸ್  

 

Trending News