IT Rules: ದೊಡ್ಡ ಪ್ರಮಾಣದಲ್ಲಿ ರಿಫಂಡ್ ಪಡೆಯಬಹುದು ಎಂಬ ದುರಾಸೆಗೆ ಬಿದ್ದು ವೃತ್ತಿಪರರಲ್ಲದವರಿಂದ ಐಟಿಆರ್ ಫೈಲ್ ಮಾಡಿಸಿದರೆ ತೊಂದರೆಗೆ ಒಳಗಾಗುವುದು ಗ್ಯಾರಂಟಿ. ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು ಹೊಸ ನಿಯಮಗಳ ಪ್ರಕಾರ ರಿಫಂಡ್ ಪಡೆಯಲು ಅಕ್ರಮ ನಡೆಸಿದರೆ ಅಪಾಯಕ್ಕೆ ಸಿಲುಕಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಇತ್ತೀಚಿನ ವರ್ಷಗಳಲ್ಲಿ ನೌಕರರು ನಕಲಿ ಬಿಲ್ ಗಳು, ನಕಲಿ ದೇಣಿಗೆಗಳ ರಸೀದಿಗಳನ್ನು ಲಗತ್ತಿಸಿ ದೊಡ್ಡ ಪ್ರಮಾಣದ ರಿಫಂಡ್ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದರಿಂದಾಗಿ ಹಣದ ಆಸೆಗಾಗಿ ವೃತ್ತಿಪರರಲ್ಲದವರಿಂದ ಐಟಿಆರ್ ಫೈಲ್ ಮಾಡಿಸಿದರೆ ಸಮಸ್ಯೆಯಾಗುತ್ತದೆ.


ಇದನ್ನೂ ಓದಿ- Income Tax Notice: ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ..! ಅಪ್ಪಿತಪ್ಪಿ ಈ ವಹಿವಾಟು ನಡೆಸಿದ್ರೂ  ಐ‌ಟಿ ನೊಟೀಸ್ ಬರೋದು ಗ್ಯಾರಂಟಿ..! 


ತೆರಿಗೆ ತಜ್ಞರ ಪ್ರಕಾರ ಹೆಚ್ಚಿನ ತೆರಿಗೆದಾರರು ವೃತ್ತಿಪರರಲ್ಲದವರಿಂದ ಐಟಿಆರ್ ಫೈಲ್ ಮಾಡಿಸುತ್ತಿದ್ದಾರೆ. ವೃತ್ತಿಪರರಲ್ಲದವರು ದೊಡ್ಡ ಪ್ರಮಾಣದಲ್ಲಿ ರಿಫಂಡ್ ಕೊಡಿಸುತ್ತೇವೆ ಎಂದು ಹೇಳಿ ನಕಲಿ ರಸೀದಿಗಳನ್ನು ಲಗತ್ತಿಸಿ ಐಟಿಆರ್ ಫೈಲ್ ಮಾಡುತ್ತಿದ್ದಾರೆ. ಇದು ಗೊತ್ತಾದಾಗ ಸಮಸ್ಯೆಗೆ ಸಿಲುಕುವವರು ಐಟಿಆರ್ ಫೈಲ್ ಮಾಡಿದವರಲ್ಲ, ತೆರಿಗೆದಾರರು. ಈ ಬಗ್ಗೆ ತೆರಿಗೆದಾರರು ಎಚ್ಚರಿಕೆಯಿಂದ ಇರಬೇಕು.


ಇದನ್ನೂ ಓದಿ- Income Tax Notice: ಎಚ್ಚರ! ಈ ಮಿತಿಗಿಂತ ಹೆಚ್ಚು ಖರ್ಚು ಮಾಡಿದ್ರೂ ಬರುತ್ತೆ 'ಐಟಿ ನೋಟಿಸ್'


ಒಂದೇ ಏಜೆನ್ಸಿಯಿಂದ ಸಾಮೂಹಿಕವಾಗಿ ಐಟಿಆರ್ ಫೈಲ್ ಮಾಡಿಸುವ ನೌಕರರ ಬಗ್ಗೆ ನಿಗಾ ಇಡಲು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಕೃತಕ ಬುದ್ದಿಮತ್ತೆ (AI) ಬಳಸಿಕೊಂಡು ಕಳೆದ 9 ವರ್ಷಗಳಿಂದ ಅಕ್ರಮವಾಗಿ ಮಾಡಲಾಗಿರುವ ಐಟಿಆರ್ ಫೈಲ್ ಗಳನ್ನು ಗುರುತಿಸಲಾಗುತ್ತದೆ. ಅಂಥವರ ರಿಫಂಡ್ ಅನ್ನು ವಾಪಸ್ ಪಡೆಯಲಾಗುತ್ತದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.