Income Tax Notice: ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ..! ಅಪ್ಪಿತಪ್ಪಿ ಈ ವಹಿವಾಟು ನಡೆಸಿದ್ರೂ ಐ‌ಟಿ ನೊಟೀಸ್ ಬರೋದು ಗ್ಯಾರಂಟಿ..!

Income Tax Notice: ಹಣಕಾಸಿನ ಅವಶ್ಯಕತೆ ಇದ್ದಾಗ ಬೇರೆಯವರ ಮುಂದೆ ಕೈ ಚಾಚುವ ಬದಲಿಗೆ ಕ್ರೆಡಿಟ್ ಕಾರ್ಡ್ ಬಳಕೆ ಅತ್ಯುತ್ತಮ ಪರಿಹಾರವಾಗಿದೆ. ಹಾಗಂತ, ಸಿಕ್ಕ ಸಿಕ್ಕ ಕಡೆಯೆಲ್ಲಾ ಕ್ರೆಡಿಟ್ ಕಾರ್ಡ್ ಬಳಸಿದ್ರೆ ಐಟಿ ನೊಟೀಸ್ ಬರಬಹುದು ಎಚ್ಚರ..! 

Written by - Yashaswini V | Last Updated : Jan 2, 2025, 08:56 AM IST
  • ಕ್ರೆಡಿಟ್ ಕಾರ್ಡ್ ಬಳಕೆದಾರರು ಮಿಸ್ ಆಗಿಯೂ ಕೂಡ ಕೆಲವು ಕಡೆ ಕ್ರೆಡಿಟ್ ಕಾರ್ಡ್ ವಹಿವಾಟು ನಡೆಸುವಂತಿಲ್ಲ.
  • ಒಂದೊಮ್ಮೆ ಇದನ್ನು ನಿರ್ಲಕ್ಷಿಸಿದರೆ ನಿಮ್ಮ ಮನೆಗೆ ಐಟಿ ನೊಟೀಸ್ ಬರೋದಂತು ಗ್ಯಾರಂಟಿ
Income Tax Notice: ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ..! ಅಪ್ಪಿತಪ್ಪಿ ಈ ವಹಿವಾಟು ನಡೆಸಿದ್ರೂ  ಐ‌ಟಿ ನೊಟೀಸ್ ಬರೋದು ಗ್ಯಾರಂಟಿ..!  title=

Income Tax Notice: ಆದಾಯ ತೆರಿಗೆ ಇಲಾಖೆಯ ಸೂಚನೆ ಅನುಸಾರ ಕ್ರೆಡಿಟ್ ಕಾರ್ಡ್ ಬಳಸಿ ಕೆಲವು ವಹಿವಾಟುಗಳನ್ನು ನಡೆಸಬಾರದು. ಒಂದೊಮ್ಮೆ ಅಪ್ಪಿತಪ್ಪಿ ಕ್ರೆಡಿಟ್ ಕಾರ್ಡ್ ಮೂಲಕ ಈ ವಹಿವಾಟುಗಳನ್ನು ನಡೆಸಿದರೂ ಸಹ ನೀವು ತೊಂದರೆಗೆ ಸಿಲುಕಬಹುದು. 

ಐಟಿ ನೋಟಿಸ್ ಅಲರ್ಟ್: 
ಆದಾಯ ತೆರಿಗೆ ಇಲಾಖೆ ನಿಯಮಗಳ ಪ್ರಕಾರ, ಕ್ರೆಡಿಟ್ ಕಾರ್ಡ್ ಬಳಕೆದಾರರು ಮಿಸ್ ಆಗಿಯೂ ಕೂಡ ಕೆಲವು ಕಡೆ ಕ್ರೆಡಿಟ್ ಕಾರ್ಡ್ ವಹಿವಾಟು ನಡೆಸುವಂತಿಲ್ಲ. ಒಂದೊಮ್ಮೆ ಇದನ್ನು ನಿರ್ಲಕ್ಷಿಸಿದರೆ ನಿಮ್ಮ ಮನೆಗೆ ಐಟಿ ನೊಟೀಸ್ ಬರೋದಂತು ಗ್ಯಾರಂಟಿ ಎನ್ನಲಾಗುತ್ತದೆ. ಹಾಗಿದ್ದರೆ ಯವೆಲ್ಲಾ ಜಾಗಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಬಾರದು ಎಂದು ತಿಳಿಯಲು ಮುಂದೆ ಓದಿ... 

ಭಾರೀ ಪ್ರಮಾಣದ ವಹಿವಾಟು: 
ಐಟಿ ನಿಯಮಗಳ ಪ್ರಕಾರ, ಒಂದು ಆರ್ಥಿಕ ವರ್ಷದಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ 2 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಇಂತಹ ದೊಡ್ಡ ವಹಿವಾಟುಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಹದ್ದಿನ ಕಣ್ಣಿಟ್ಟಿರುತ್ತದೆ. 

ಇದನ್ನೂ ಓದಿ- TDS ನಿಯಮದಲ್ಲಿ ಭಾರೀ ಬದಲಾವಣೆ: TAX ಪಾವತಿಸಿದ ಬಳಿಕವೂ ಖಾತೆಯಲ್ಲಿ ಉಳಿಯುತ್ತೆ ಹೆಚ್ಚು ಹಣ..!

ವಿದೇಶಿ ಪ್ರಯಾಣ: 
ವಿದೇಶಕ್ಕೆ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ನೀವು 2 ಲಕ್ಷಕ್ಕಿಂತ ಅಧಿಕ ಹಣವನ್ನು ಕ್ರೆಡಿಟ್ ಕಾರ್ಡ್ ಮೂಲಕ ಖರ್ಚು ಮಾಡಿದರೆ ಇದರ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ಹೋಗುತ್ತದೆ. 

ಹೂಡಿಕೆ: 
ಹೂಡಿಕೆ ಒಳ್ಳೆಯ ವಿಷಯವೇ ಆದರೆ ಒಂದು ವರ್ಷದಲ್ಲಿ ನೀವು 10 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಮ್ಯೂಚ್ಚುವಲ್ ಫಂಡ್, ಷೇರು ಮಾರುಕಟ್ಟೆ, ಬಾಂಡ್ಗಳಲ್ಲಿ ಹೂಡಿಕೆ ಮಾಡಿದರೆ ಐಟಿ ನೊಟೀಸ್ ಬರಬಹುದು. 

ಆಸ್ತಿ ಹೂಡಿಕೆ: 
ಒಂದು ಆರ್ಥಿಕ ವರ್ಷದಲ್ಲಿ 30 ಲಕ್ಷಕ್ಕಿಂತ ಅಧಿಕ ಮೌಲ್ಯದ ಆಸ್ತಿ ಖರೀದಿಸಿದರೆ ಈ ಬಗ್ಗೆಯೂ ಮಾಹಿತಿ ಸ್ವಯಂ ಚಾಲಿತವಾಗಿ ಆದಾಯ ತೆರಿಗೆ ಇಲಾಖೆ ತಲುಪುತ್ತದೆ. 

ಇದನ್ನೂ ಓದಿ- 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷದಲ್ಲಿ ಭರ್ಜರಿ ಗುಡ್ ನ್ಯೂಸ್

ದೊಡ್ಡ ಮೊತ್ತದ ನಗದು ಠೇವಣಿ: 
ಒಂದು ಆರ್ಥಿಕ ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ನಗದು ಠೇವಣಿ ಮಾಡಿದರೆ ಅಂತಹ ಸಂದರ್ಭದಲ್ಲೂ ಆದಾಯ ತೆರಿಗೆ ಇಲಾಖೆ ನೊಟೀಸ್ ನೀಡಬಹುದು. 

ದೊಡ್ಡ ಮೊತ್ತದ ವ್ಯಾಪಾರ ವಹಿವಾಟು: 
ನಗದು ರೂಪದಲ್ಲಿ ದೊಡ್ಡ ಮೊತ್ತದ ವ್ಯಾಪಾರ ವಹಿವಾಟಿನ ಮೇಲೂ ಆದಾಯ ತೆರಿಗೆ ಇಲಾಖೆ ಹದ್ದಿನ ಕಣ್ಣಿಟ್ಟಿರುತ್ತದೆ. 50000ಕ್ಕಿಂತ ಅಧಿಕ ಮೊತ್ತದ ವ್ಯವಹಾರಗಳ ಬಗ್ಗೆ ಐಟಿ ಇಲಾಖೆ ಮಾಹಿತಿ ಕೇಳಬಹುದು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News