ನವದೆಹಲಿ : 2020-21ನೇ ಸಾಲಿನ  ನೌಕರರ ಭವಿಷ್ಯ ನಿಧಿ-ಇಪಿಎಫ್‌ನ (EPF)ಬಡ್ಡಿ ಮತ್ತೆ ಕಡಿಮೆಯಾಗಲಿದೆ. ಈ ಬಗ್ಗೆ ಮಾರ್ಚ್ 4ಕ್ಕೆ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ. ಒಂದು ವೇಳೆ ಇಪಿಎಫ್ ನ ಬಡ್ಡಿ ಕಡಿತಗೊಳಿಸಿದರೆ, ವೇತನ ಪಡೆಯುವ ವರ್ಗಕ್ಕೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ. ಕಳೆದ ವರ್ಷದವರೆಗೂ ಬಡ್ಡಿ (Interest) ಸಿಗುತ್ತಿಲ್ಲ ಎಂಬ ಆತಂಕದಲ್ಲಿದ್ದ ಇಪಿಎಫ್ ಚಂದಾದಾರರು, ಈಗ ಮತ್ತೊಂದು ಆಘಾತ ಎದುರಿಸುವಂತಾಗಿದೆ.  


COMMERCIAL BREAK
SCROLL TO CONTINUE READING

ಕಡಿಮೆಯಾಗಲಿದೆ ಇಪಿಎಫ್ ಮೇಲಿನ ಬಡ್ಡಿ :
ಲಭ್ಯ ಮಾಹಿತಿಯ ಪ್ರಕಾರ, ಕರೋನಾ (Coronavirus) ಬಿಕ್ಕಟ್ಟಿನ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಚಂದಾದಾರರು,  ಇಪಿಎಫ್ (EPF)ಹಿಂಪಡೆದಿದ್ದಾರೆ.  ಈ ಸಮಯದಲ್ಲಿ ಇಪಿಎಫ್ ಖಾತೆಗೆ ಹಾಕಲಾಗಿದ್ದಹಣವೂ ಕಡಿಮೆಯಾಗಿತ್ತು. ಇದರಿಂದಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)ಬಡ್ಡಿದರಗಳನ್ನು ಕಡಿತಗೊಳಿಸಲು ನಿರ್ಧರಿಸಬಹುದು. ಇಪಿಎಫ್‌ಒ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (CBT) ಮಾರ್ಚ್ 4 ರಂದು ಸಭೆ ಸೇರಿ ಹೊಸ ದರಗಳನ್ನು ನಿರ್ಧರಿಸಲಿದೆ. 


ಇದನ್ನೂ ಓದಿ : NPSನಲ್ಲಿ ಹೂಡಿಕೆ ಮಾಡುವವರಿಗೆ ಗುಡ್ ನ್ಯೂಸ್ ..! ಆನ್ ಲೈನ್ ನಲ್ಲಿಯೇ ನಡೆಯಲಿದೆ ಸಂಪೂರ್ಣ ಪ್ರಕ್ರಿಯೆ


ಮಾರ್ಚ್ 4 ರಂದು ಬಡ್ಡಿದರಗಳ ಬಗ್ಗೆ ನಿರ್ಧಾರ : 
2020 ರ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ಗಳಿಕೆಯ ಮೇಲೆ ಪರಿಣಾಮ ಬೀರಿದೆ.  ಮಾರ್ಚ್ 4 ರಂದು ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಶ್ರೀನಗರದಲ್ಲಿ ಸಭೆ ಸೇರಲಿದೆ. ಈ ಸಭೆ ಬಗ್ಗೆ ಇಪಿಎಫ್‌ಒ ಟ್ರಸ್ಟಿ ಕೆ.ಇ.ರಘುನಾಥನ್ ಅವರು ಮಾಹಿತಿ ನೀಡಿದ್ದಾರೆ. ಆದರೆ ಇಪಿಎಫ್ ಮೇಲಿನ ಬಡ್ಡಿ (Interest) ಕಡಿತಗೊಳಿಸುವ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. 


7 ವರ್ಷಗಳಲ್ಲಿ ಇಪಿಎಫ್ ಮೇಲೆ ಕಡಿಮೆ ಬಡ್ಡಿ:
2020 ರ ಹಣಕಾಸು ವರ್ಷದಲ್ಲಿ, ಇಪಿಎಫ್ ಮೇಲೆ 8.5% ನಷ್ಟು ಬಡ್ಡಿಯನ್ನು ನೀಡಲಾಗಿತ್ತು. 7 ವರ್ಷಗಳಲ್ಲಿ ನೀಡಿದ ಕಡಿಮೆ ಬಡ್ಡಿ ಇದಾಗಿದೆ. ಈ ಮೊದಲು 2013 ರ ಹಣಕಾಸು ವರ್ಷದಲ್ಲಿ ಇಪಿಎಫ್ ಮೇಲಿನ ಬಡ್ಡಿದರಗಳು 8.5% ಆಗಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಇಪಿಎಫ್‌ಒಬಡ್ಡಿಯನ್ನು ರಿವೈಸ್ ಮಾಡಲಾಗಿತ್ತು. ಈ ಮೊದಲು, 2019 ರ ಹಣಕಾಸು ವರ್ಷದಲ್ಲಿ, 8.65% 2018 8.55%, ಮತ್ತು  2016 ರಲ್ಲಿ 8.8% ಬಡ್ಡಿ ನೀಡಲಾಗಿತ್ತು. ಇದಕ್ಕೂ ಮೊದಲು 2014 ರ ಹಣಕಾಸು ವರ್ಷದಲ್ಲಿ ಇಪಿಎಫ್ ಮೇಲಿನ ಬಡ್ಡಿ ಶೇ 8.75 ರಷ್ಟಿತ್ತು.


ಇದನ್ನೂ ಓದಿ : ಒಂದು ಕಾರಿನ FASTag ಅನ್ನು ಇನ್ನೊಂದು ಕಾರಿನಲ್ಲಿ ಹಾಕಬಹುದೇ?


ಇಪಿಎಫ್ ದೇಶಾದ್ಯಂತ 6 ಕೋಟಿ ಗ್ರಾಹಕರನ್ನು ಹೊಂದಿದೆ.  2020 ರ ಹಣಕಾಸು ವರ್ಷದಲ್ಲಿ ಕೆವೈಸಿಯಲ್ಲಿನ (KYC)ಅವ್ಯವಸ್ಥೆಯಿಂದಾಗಿ  ಕೋಟ್ಯಂತರ ಜನರಿಗೆ  ಬಡ್ಡಿ ಸಿಗುವುದು ತಡವಾಗಿತ್ತು.  ಈಗ ಬಡ್ಡಿದರಗಳನ್ನು ಕಡಿತಗೊಳಿಸಿದರೆ  ಈ ವರ್ಗಕ್ಕೆ ಮತ್ತೊಂದು ಹೊಡೆತ ಬಿದ್ದಂತಾಗುತ್ತದೆ. 


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.