Mutual Fund New Scheme: ಕಡಿಮೆ ವೆಚ್ಚ, ಉತ್ತಮ ಆದಾಯ, ಈ ಅವಕಾಶ ಜುಲೈ 12ರವರೆಗೆ ಮಾತ್ರ
Navi Nifty 50 Index Fund - ಒಂದು ವೇಳೆ ನೀವೂ ಕೂಡ ಮ್ಯೂಚವಲ್ ಫಂಡ್ ಮಾರುಕಟ್ಟೆಯಲ್ಲಿ ಹೊಸ ಮತ್ತು ಸುರಕ್ಷಿತ ಹೂಡಿಕೆಗಾಗಿ ಆಯ್ಕೆಯ ಹುಡುಕಾಟದಲ್ಲಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. Navi Mutual Fund ತನ್ನ Navi Nifty 50 Index Fund ಬಿಡುಗಡೆ ಮಾಡಿದೆ.
ನವದೆಹಲಿ: Navi Nifty 50 Index Fund - ಒಂದು ವೇಳೆ ನೀವೂ ಕೂಡ ಮ್ಯೂಚವಲ್ ಫಂಡ್ ಮಾರುಕಟ್ಟೆಯಲ್ಲಿ ಹೊಸ ಮತ್ತು ಸುರಕ್ಷಿತ ಹೂಡಿಕೆಗಾಗಿ ಆಯ್ಕೆಯ ಹುಡುಕಾಟದಲ್ಲಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. Navi Mutual Fund ತನ್ನ Navi Nifty 50 Index Fund ಬಿಡುಗಡೆ ಮಾಡಿದೆ. ಇದೊಂದು ಓಪನ್ ಎಂಡೆಡ್ ಇಕ್ವಿಟಿ ಸ್ಕೀಮ್ ಆಗಿದ್ದು, ಇದು ನಿಫ್ಟಿ-50ಯನ್ನು ಟ್ರ್ಯಾಕ್ ಮಾಡಲಿದೆ. ಇದರ ಎಕ್ಸ್ಪೆನ್ಸ್ ರೆಶ್ಯೋ ತುಂಬಾ ಕಡಿಮೆಯಾಗಿರುವುದೇ ಈ ಯೋಜನೆಯ ವಿಶೇಷತೆ. ಅಂದರೆ, ಹೂಡಿಕೆಗೆ ತಗಲುವ ವೆಚ್ಚ ಕಂಮಿಯಾಗಿರಲಿದೆ. ಪ್ಯಾಸಿವ್ ಫಂಡ್ ಕೆಟಗರಿಯಲ್ಲಿ ಈ NFO ಕಳೆದ ಶುಕ್ರವಾರ ತೆರೆದುಕೊಂಡಿದೆ. ಹೂಡಿಕೆಗಾಗಿ ಜುಲೈ 12ರವರೆಗೆ ಅವಕಾಶ ಇರಲಿದೆ. ಗ್ರೋ, Paytm Money, ಜರೋಧಾ ಕಾಯಿನ್, ಇಂಡ ಮನಿಗಳಂತಹ ಆನ್ಲೈನ್ ಪ್ಲಾಟ್ ಫಾರ್ಮ್ ಗಳ ಮೂಲಕ ಇದರಲ್ಲಿ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಮಾಡಬಹುದು.
ಯೋಜನೆಯ ವಿಶೇಷತೆ
>> ಜುಲೈ 3 ರಂದು ಈ NFO ಜುಲೈ 3ರಿಂದ ಹೂಡಿಕೆಗಾಗಿ ತೆರೆದುಕೊಂಡಿದೆ. ಜುಲೈ 12ರವರೆಗೆ ಇದರಲ್ಲಿ ಹೂಡಿಕೆ ಮಾಡಬಹುದು.
>> Navi Nifty 50 Index Fund ಒಂದು ಓಪನ್ ಎಂಡೆಡ್ ಇಕ್ವಿಟಿ ಯೋಜನೆಯಾಗಿದ್ದು, ಇದು ನಿಫ್ಟಿ-50 ಅನ್ನು ಟ್ರ್ಯಾಕ್ ಮಾಡಲಿದೆ.
>> ಪ್ಯಾಸಿವ್ ಫಂಡ್ ಕೆಟಗರಿ/ಇಕ್ವಿಟಿ ಮಾರುಕಟ್ಟೆಯಲ್ಲಿಇಂದು ಅತ್ಯಂತ ಕಡಿಮೆ ಮಟ್ಟದ ಎಕ್ಸ್ಪೆನ್ಸ್ ರೆಶ್ಯೂ (Lown Expense Ratio) ಅಂದರೆ ಅದು ಶೇ.0.06. ಈ ಯೋಜನೆಯಲ್ಲಿ ಕನಿಷ್ಠ ಅಂದರೆ ರೂ.500ರ ಮೂಲಕ ಅರ್ಜಿ ಸಲ್ಲಿಸಬಹುದು. ನಂತರ ನೀವು ರೂ.1ರ ಗುಣಕದಲ್ಲಿ ನೀವು ಹೂಡಿಕೆಯನ್ನು ಹೆಚ್ಚಿಸಬಹುದು.
>> ಜರೋಧಾ ಕಾಯಿನ್, ಇಂಡ ಮನಿಗಳಂತಹ ಆನ್ಲೈನ್ ಪ್ಲಾಟ್ ಫಾರ್ಮ್ ಗಳ ಮೂಲಕ ಇದರಲ್ಲಿ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಮಾಡಬಹುದು.
ಈ ಯೋಜನೆ ಸುರಕ್ಷಿತ ಯೋಜನೆಯಾಗಿದೆ
ನಿಫ್ಟಿ 50 ಸೂಚ್ಯಂಕವನ್ನು ಹೊಂದಿರುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಫ್ಟಿ 50 ಸೂಚ್ಯಂಕಕ್ಕೆ ಸಮಾನವಾದ ಆದಾಯ ಪಡೆಯುವುದು ಈ ಯೋಜನೆಯಲ್ಲಿನ ಹೂಡಿಕೆಯ ಪ್ರಮುಖ ಉದ್ದೇಶವಾಗಿದೆ. ಇದು ನಿಫ್ಟಿ- 50 (Nifty-50 Index) ಸೂಚ್ಯಂಕದಲ್ಲಿ ಸೇರಿಸಲಾದ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ ಇದು ಸುರಕ್ಷಿತವಾಗಿದೆ. ಸೂಚ್ಯಂಕವು ಹೆವಿವೇಯ್ಟ್ ಕಂಪನಿಗಳ ಷೇರುಗಳನ್ನು ಒಳಗೊಂಡಿದೆ, ಅವು ಚಂಚಲತೆಗೆ ತುಂಬಾ ಕಡಿಮೆ ಒಳಗಾಗುತ್ತವೆ. ಈ ಕಂಪನಿಗಳ ಮೂಲವು ದೊಡ್ಡದಾದರೆ, ಅವು ಸುಲಭವಾಗಿ ಒತ್ತಡದ ಪರಿಸ್ಥಿತಿಯಿಂದ ಹೊರಬರುತ್ತವೆ, ಆದರೆ ದೀರ್ಘಾವಧಿಯಲ್ಲಿ ಬಲವಾದ ಬೆಳವಣಿಗೆಯನ್ನು ನೀವು ನಿರೀಕ್ಷಿಸಬಹುದು.
ಇದನ್ನೂ ಓದಿ-Form 15CA/15CB Deadline: ಆದಾಯ ತೆರಿಗೆ ಫಾರ್ಮ್ 15CA/15CB ಸಲ್ಲಿಕೆಯ ಗಡವು ವಿಸ್ತರಣೆ
ತಗಲುವ ವೆಚ್ಚ ತುಂಬಾ ಕಡಿಮೆಯಾಗಿದೆ
ಈ ಯೋಜನೆಯ ಎಕ್ಸ್ಪೆನ್ಸ್ ರೆಶ್ಯೋ ಕೇವಲ ಶೇ.0.06ರಷ್ಟಿದೆ. ಇಂಡೆಕ್ಸ್ ಫಂಡ್ ಗಳಿಗಾಗಿ ಕೆಟಗರಿ ಅವರೇಜ್ ರೆಶ್ಯೋ ಶೇ.0.25 ರಷ್ಟಿದೆ ಹಾಗೂ ಪ್ರಸ್ತುತ ಜಾರಿಯಲ್ಲಿರುವ ಹಲವು ಇಂಡೆಕ್ಸ್ ಫಂಡ್ ಗಳು ಶೇ.0,15 ರಿಂದ ಶೇ.0.20 ಮಧ್ಯೆ ಏಕ್ಸ್ಪೆನ್ಸ್ ಶುಲ್ಕ ಪಡೆದುಕೊಳ್ಳುತ್ತಿವೆ. ಅಂದರೆ ಈ ಫಂಡ್ ಗಳಲ್ಲಿ ಫಂಡ್ ಮ್ಯಾನೇಜರ್ ಗಳಿಗೆ ನೀವು ನೀಡುವ ಶುಲ್ಕ ತೀರಾ ಕಮ್ಮಿಯಾಗಿರಲಿದೆ.
ಇದನ್ನೂ ಓದಿ-Inflation: ಶ್ರೀಸಾಮಾನ್ಯರ ಮೇಲೆ ಹಣದುಬ್ಬರದ ಹೊಡೆತ, ಗಗನಮುಖಿಯಾದ ಅಗತ್ಯ ವಸ್ತುಗಳ ಬೆಲೆ
ಈ ಕುರಿತು ಮಾತನಾಡುವ ನವಿ ಎಂಎಂಸಿ ಲಿಮಿಟೆಡ್ ಕಂಪನಿಯ MD ಹಾಗೂ CEO ಸೌರಭ್ ಜೈನ್, "ಎಲ್ಲಾ ಫಂಡ್ ಗಳಲ್ಲಿ ವೃತ್ತಿಪರ ಪೋರ್ಟ್ ಫೋಲಿಯೋ ಮ್ಯಾನೇಜರ್ ಗಳಿರುತ್ತಾರೆ. ಇಂಡೆಕ್ಸ್ ಫಂಡ್ ಗಳ ಜೊತೆಗೆ, ಹೂಡಿಕೆದಾರರಿಗೆ ಷೇರುಗಳನ್ನು ಆಯ್ಕೆಗಾಗಿ ಹೆಚ್ಚಿನ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಈ ಯೋಜನೆಯ ಎಕ್ಸ್ಪೆನ್ಸ್ ರೆಶ್ಯೋ ಶೇ.0.06ರಷ್ಟಿದೆ ಮತ್ತು ಪ್ರಸ್ತುತ ಇರುವ ಇಂಡೆಕ್ಸ್ ಸ್ಕೀಮ್ ಶ್ರೇಣಿಯಲ್ಲಿ ಅತ್ಯಂತ ಕಡಿಮೆಯಾಗಿದೆ. ಹೂಡಿಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಅಧಿಕ ಆದಾಯ ನೀಡುವುದು (Low Expense And High Return Scheme) ನಮ್ಮ ಗುರಿಯಾಗಿದೆ" ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.