/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: Inflation Hit Common Man - ಎಷ್ಟೇ ಹಣಗಳಿಕೆ ಮಾಡಿ, ಹಣ ನೀರಿನಂತೆ ಹರಿದುಹೋಗುತ್ತಿದೆ. ಒಂದೇ ವಾರದಲ್ಲಿ ತಿಂಗಳ ಬಜೆಟ್ ಖಾಲಿಯಾಗುತ್ತಿದೆ. ಇದರಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಕೂಡ ಏರಿಕೆಯಾಗಿದೆ. ಇನ್ನೊಂದೆಡೆ ಡಿಸೇಲ್-ಪೆಟ್ರೋಲ್ ಬೆಲೆ ಕೂಡ ನಿಮಗೆ ತಿಳಿದ ವಿಷಯವೇ ಆಗಿದೆ. ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದೆ ಹಾಗೂ ಜನಸಾಮಾನ್ಯರ ಅಡುಗೆ ಮನೆ ಬಜೆಟ್ (Kitchen Budget) ಕೂಡ ಬಿಗಡಾಯಿಸಿದೆ. ಸಣ್ಣ ಪುಟ್ಟ ವಿಷಯಗಳ ಖರೀದಿಗೂ ಕೂಡ ದೂರದವರೆಗೆ ಯೋಚಿಸುವ ಸ್ಥಿತಿ ಬಂದೊದಗಿದೆ.

ಮುಂಬೈನ ಕಾಂದಿವಿಲಿ ಪ್ರದೇಶದ ನಿವಾಸಿಯಾಗಿರುವ ರವಿಕಾ ದುಗ್ಗಲ್ ವೃತ್ತಿಪರವಾಗಿ ಓರ್ವ ಗಾಯಕಿ ಹಾಗೂ ವ್ಯಾಪಾರಿಯಾಗಿದ್ದಾರೆ. ಪ್ರತಿಯೊಬ್ಬರಿಗೂ ಇದು ಕೈಗೆಟುಕುತ್ತಿಲ್ಲ. ಹಣದುಬ್ಬರದ ಟಾರ್ಚರ್ ಹಿನ್ನೆಲೆ ಮನೆಯಲ್ಲಿಯೇ ಇರುವ ತರಕಾರಿಯನ್ನು ಬೇಯಿಸಿ ತಿನ್ನಲು ಲೆಕ್ಕಾಚಾರ ಹಾಕುವ ಸ್ಥಿತಿ ಇದೆ ಎನ್ನುತ್ತಾರೆ.

ಮಹಾರಾಷ್ಟ್ರದ ಅಡುಗೆ ಮೆನೆಯೇ ಆಗಲಿ ಅಥವಾ ಕರ್ನಾಟಕದ ಅಡುಗೆ ಮನೆಯೇ ಆಗಲಿ. ಹಚ್ಚು ಹಸುರಾಗಿ ಕಂಗೊಳಿಸುತ್ತಿದ್ದ ಊಟದ ತಟ್ಟೆಯನ್ನು ಖಾಲಿಯಾಗಿಸಿದೆ. ರಾಜಸ್ಥಾನದ ಕೋಟಾ ನಿವಾಸಿಯಾಗಿರುವ ಪೂಜಾ ಹೇಳುವ ಪ್ರಕಾರ, ಈ ಮೊದಲು 5 ರಿಂದ 6 ಸಾವಿರಕ್ಕೆ ಸೀಮಿತವಾಗಿದ ತಿಂಗಳ ಬಜೆಟ್ ಇದೀಗ 10 ಸಾವಿರಕ್ಕೆ ತಲುಪಿದೆ. ಗ್ಯಾಸ್ ಸಿಲಿಂಡರ್ ದುಬಾರಿಯಾಗಿದೆ, ಸಿರಿ ಧಾನ್ಯಗಳ ಬೆಲೆ ಏರಿಕೆಯಾಗಿದೆ, ತರಕಾರಿಗಳು ದುಬಾರಿ ಬೆಲೆಗೆ ಸಿಗುತ್ತಿವೆ ಹಾಗೂ ಅಡುಗೆ ಎಣ್ಣೆಯ ಬೆಲೆ ವಿಚಾರಿಸಲೇ ಬೇಡಿ. ಎಲ್ಲವು ಬಜೆಟ್ ಹೊರಗಿದೆ ಎಂದು ಹೇಳುತ್ತಾರೆ.

ಅಡುಗೆ ಮನೆ ತಲುಪುತ್ತಿರುವ ಸರಕು, ತರಕಾರಿಗಳನ್ನು ನೀವು ಲೋಕಲ್ ಮಾರುಕಟ್ಟೆಯಲ್ಲಿ ಖರೀದಿಸಿ ಅಥವಾ ಸಗಟು ಮಾರುಕಟ್ಟೆಯಲ್ಲಿಯೇ ಖರೀದಿಸಿ, ಪ್ರತಿಯೊಂದು ಕಡೆಗೆ ಬೆಲೆ ಏರಿಕೆ ಎದುರಾಗಲಿದೆ. ಸಗಟು ಮಾರುಕಟ್ಟೆಯಲ್ಲಿಯೂ ಕೂಡ ಯಾವುದೇ ವಿಶೇಷ ಉಳಿತಾಯವಾಗುತ್ತಿಲ್ಲ. ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಓರ್ವ ವ್ಯಕ್ತಿ ತಿಂಗಳಿಡಿ ಪರದಾಡಿ 10 ಸಾವಿರ ಸಂಪಾದನೆ ಮಾಡಿದರು ಕೂಡ ಆತ ಒಂದು ಹೊತ್ತಿನ ತರಕಾರಿ ಮಾತ್ರ ಖರೀದಿಸಬಲ್ಲ ಅಥವಾ ಮಕ್ಕಳ ಶಾಲೆ ಶುಲ್ಕ ಪಾವತಿಸಬಲ್ಲ.

ಅಡುಗೆ ಎಣ್ಣೆ (Edible Oil) ರೂ.200 ಪ್ರತಿ ಲೀಟರ್ ಹಾಗೂ ಅಡುಗೆ ಅನಿಲ (LPG Cylinder Price) ಎಷ್ಟೊಂದು ದುಬಾರಿಯಾಗಿದೆ ಎಂದರೆ 14.5 ಲೀಟರ್ ಗ್ಯಾಸ್ ಸಿಲಿಂಡರ್ ಗೆ ಸುಮಾರು 850 ರೂ. ಪಾವತಿಸುವ ಕಾಲ ಬಂದೊದಗಿದೆ. ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದ್ದು, ಇದರಿಂದ ಜನಸಾಮಾನ್ಯರ ಮೇಲೆಯೇ ಹಚ್ಚು ಹೊಡೆತ ಬಿದ್ದಿದೆ. ಏಕೆಂದರೆ ಸರಕು ಸಾಗಣೆಗೆ ಮೊದಲಿಗಿಂತ ಹೆಚ್ಚು ಹಣ ಪಾವತಿಸಬೇಕಾಗುತ್ತಿದೆ. ಇದರಿಂದ ಹೂಡಿಕೆ ಹೆಚ್ಚಾಗಿದ್ದು, ಸೂಜಿಯಿಂದ ಹಿಡಿದು ತರಕಾರಿವರೆಗೆ ಬೆಲೆ ಏರಿಕೆಯಾಗಿವೆ.

ಇದನ್ನೂ ಓದಿ- Covid-19: ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಮೂಳೆ ಸವೆತ, ಮುಂಬೈನಲ್ಲಿ 3 ಪ್ರಕರಣಗಳು ಪತ್ತೆ

ಸಗಟು ಮಾರುಕಟ್ಟೆಯ ಪರಿಸ್ಥಿತಿ ಹೇಗಿದೆ?
ದೆಹಲಿ ಸಗಟು ಮಾರುಕಟ್ಟೆಗೆ ಬಂದ ವ್ಯಕ್ತಿಯೊಬ್ಬರು ತಾವು ತಮ್ಮ ಮಗುವನ್ನು ಓದಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ತಿಂಗಳಿಗೆ ನನ್ನ ಸಂಪಾದನೆ 10 ಸಾವಿರ ಇದೆ ಹಾಗೂ ನಾನು ತರಕಾರಿ ಖರೀದಿಸಲು ಮಾರುಕಟ್ಟೆಗೆ ಬಂದಿರುವೆ. ಯಾವುದೇ ತರಕಾರಿ ರೂ.40ಕ್ಕಿಂತ ಕಮ್ಮಿ ಬೆಲೆಗೆ ಸಿಗುತ್ತಿಲ್ಲ. ಸ್ವಂತ ವಾಹನ ಬಂದ್ ಬಿದ್ದಿದೆ, ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಸಿ ತರಕಾರಿ ಖರೀದಿಸಲು ಬಂದಿರುವೆ, ಬಜೆಟ್ ನಿರ್ವಹಣೆ ಕಷ್ಟವಾಗುತ್ತಿದೆ ಎನ್ನುತ್ತಾರೆ. ವ್ಯಾಪಾರಿಯ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಖರೀದಿಸುವವರ ಮೇಲಂತೂ ಕತ್ತಿ ನೇತಾಡುತ್ತಿದೆ. ಏಕೆಂದರೆ, ಹಣ್ಣು, ತರಕಾರಿ, ಬೇಳೆ ಹಾಗೂ ಅಡುಗೆ ಎಣ್ಣೆಯಂತಹ ಸಾಮಗ್ರಿಗಳನ್ನು ಹೊರತುಪಡಿಸಿ ಬದುಕಲು ಸಾಧ್ಯವಿಲ್ಲ.

ಸಗಟು ಮಾರುಕಟ್ಟೆಯೇ ಆಗಲಿ ಅಥವಾ ಚಿಲ್ಲರೆ ವ್ಯಾಪಾರವೇ ಆಗಲಿ ಶ್ರೀಸಾಮಾನ್ಯರ ಹೆಣೆಯ ಮೇಲಿನ ಗೆರೆಗಳಾಗಿ ಮಾರ್ಪಟ್ಟಿವೆ. ಪ್ರತಿ ನಿತ್ಯ ನಾಳಿನ ದಿನ ಹೇಗಿರಲಿದೆ ಎಂಬುದರ ಕುರಿತು ಚಿಂತೆ ಮಾಡಬೇಕಾಗುವ ಪರಿಸ್ಥಿತಿ ಇದೆ. ಏಕೆಂದರೆ ಗಳಿಕೆ ಅರ್ಧಕ್ಕೆ ಇಳಿದಿದ್ದರೆ, ವೆಚ್ಚ ಮಾತ್ರ ಹಲವು ಪಟ್ಟು ಹೆಚ್ಚಾಗುತ್ತಿದೆ.

ಇದನ್ನೂ ಓದಿ-Credit Card ಬಳಸಿ ಅಪ್ಪಿ-ತಪ್ಪಿಯೂ ಈ ಪೇಮೆಂಟ್ಸ್ ಮಾಡಬೇಡಿ, ಆರ್‌ಬಿಐ ಸೂಚನೆ

ಏತನ್ಮಧ್ಯೆ ಕೆಲವರು ಹಣದುಬ್ಬರಕ್ಕಾಗಿ ಕೇಂದ್ರದ ಮೋದಿ ನೇತೃತ್ವದ ಸರ್ಕಾರವನ್ನು ದೂಷಿಸುತ್ತಿದ್ದರೆ, ಇನ್ನುಳಿದವರು ರಾಜ್ಯ ಸರ್ಕಾರವನ್ನು. ಅದೇನೇ ಇದ್ದರು ಕೂಡ ಬೆಲೆ ಏರಿಕೆಯ ಬರೆ ಮಾತ್ರ ಶ್ರೀಸಾಮಾನ್ಯರ ಮೇಲೆ ಬೀಳುತ್ತಿದೆ. ಕೊರೊನಾ (Covid Pandemic) ಸಂಕಷ್ಟದ ಬಳಿಕ ಸರ್ಕಾರ ದೇಶದ ಬಜೆಟ್ ಲೆಕ್ಕಾಚಾರ ಮಾತ್ರ ನಡೆಸಿದ್ದು, ಮನೆಗಳ ಬಜೆಟ್ ಬಿಗಡಾಗಿಸಿದೆ ಎಂದರೆ ತಪ್ಪಾಗಲಾರದು.  

ಇದನ್ನೂ ಓದಿ -WhatsApp: ಈ ಸಿಂಪಲ್ ಟಿಪ್ಸ್ ಅನುಸರಿಸಿ, ನಿಮ್ಮ ಕೆಲಸವನ್ನು ಇನ್ನಷ್ಟು ಸುಲಭಗೊಳಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Inflation Hit Common Man: prices of essential things increased rapidly like petrol diesel lpg milk vegitables
News Source: 
Home Title: 

Inflation: ಶ್ರೀಸಾಮಾನ್ಯರ ಮೇಲೆ ಹಣದುಬ್ಬರದ ಹೊಡೆತ, ಗಗನಮುಖಿಯಾದ ಅಗತ್ಯ ವಸ್ತುಗಳ ಬೆಲೆ

Inflation: ಶ್ರೀಸಾಮಾನ್ಯರ ಮೇಲೆ ಹಣದುಬ್ಬರದ ಹೊಡೆತ, ಗಗನಮುಖಿಯಾದ ಅಗತ್ಯ ವಸ್ತುಗಳ ಬೆಲೆ
Yes
Is Blog?: 
No
Tags: 
Facebook Instant Article: 
Yes
Highlights: 

ನಿರಂತರವಾಗಿ ಏರಿಕೆಯಾಗುತ್ತಿರುವ ಹಣದುಬ್ಬರದಿಂದ ಶ್ರೀಸಾಮಾನ್ಯರ ಬಜೆಟ್ ಬಿಗಡಾಯಿಸಿದೆ.

ಯಾವುದೇ ಒಂದು ವಸ್ತು ಖರೀದಿಸಬೇಕೆಂದರೆ 10 ಬಾರಿ ಯೋಚಿಸುವ ಸ್ಥಿತಿ ಎದುರಾಗಿದೆ.

ಆಹಾರ ಪದಾರ್ಥಗಳಿಂದ ಹಿಡಿದು, ಪೆಟ್ರೋಲ್-ಡಿಸೇಲ್ ವರೆಗೆ ಎಲ್ಲಾ ವಸ್ತುಗಳ ಬೆಲೆ ಗಗನಮುಖಿಯಾಗಿವೆ.

Mobile Title: 
Inflation: ಶ್ರೀಸಾಮಾನ್ಯರ ಮೇಲೆ ಹಣದುಬ್ಬರದ ಹೊಡೆತ, ಗಗನಮುಖಿಯಾದ ಅಗತ್ಯ ವಸ್ತುಗಳ ಬೆಲೆ
Nitin Tabib
Publish Later: 
No
Publish At: 
Monday, July 5, 2021 - 13:37
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
2
Is Breaking News: 
No