Narendra Modi ಸರ್ಕಾರದ ಹೊಸ ದಾಖಲೆ, ಈ ವಿಷಯದಲ್ಲಿ US ಹಿಂದಿಕ್ಕಿ 5ನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ
Foreign Exchange Reserve Collection - ಅಮೆರಿಕ, ಸಿಂಗಾಪುರ, ಹಾಂಗ್ ಕಾಂಗ್ ಸೇರಿದಂತೆ ವಿಶ್ವದ ಹಲವು ದೇಶಗಳನ್ನು ಹಿಂದಿಕ್ಕಿ ವಿದೇಶಿ ವಿನಿಮಯ ಸಂಗ್ರಹದ ವಿಷಯದಲ್ಲಿ ಭಾರತ ವಿಶ್ವದ 5 ನೇ ಅತಿದೊಡ್ಡ ದೇಶವಾಗಿದೆ ಹೊರಹೊಮ್ಮಿದೆ. ಆರ್ಬಿಐ ಪ್ರಕಾರ, ದೇಶದ ವಿದೇಶಿ ವಿನಿಮಯ ಸಂಗ್ರಹವು ಮೊದಲ ಬಾರಿಗೆ 6.842 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚಾಗಿ 600 ಬಿಲಿಯನ್ ಡಾಲರ್ ಗಡಿ ದಾಟಿದೆ.
ನವದೆಹಲಿ: Foreign Exchange Reserve Collection - ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರ ಕೊರೊನಾ ಮಹಾಮಾರಿಯ ಹೊರತಾಗಿಯೂ ಕೂಡ ವಿದೇಶಿ ವಿನಿಮಯ ಸಂಗ್ರಹದ ವಿಷಯದಲ್ಲಿ ಭರವಸೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರ ಅತಿ ದೊಡ್ಡ ಉದಾಹರಣೆ ಎಂದರೆ, ದೇಶದ ವಿದೇಶಿ ವಿನಿಮಯ ಸಂಗ್ರಹಣೆ (Foreign Exchange Reserves) 6.842 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚಾಗಿ ಮೊಟ್ಟಮೊದಲ ಬಾರಿಗೆ 600 ಬಿಲಿಯನ್ ಡಾಲರ್ ಗಡಿ ದಾಟಿದೆ.
ಅಂಕಿ-ಅಂಶಗಳನ್ನು ಪ್ರಕಟಿಸಿದ RBI
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಶುಕ್ರವಾರ ಪ್ರಕಟಿಸಿರುವ ಸಾಪ್ತಾಹಿಕ ಅಂಕಿ ಅಂಶಗಳ ಪ್ರಕಾರ, ವಿದೇಶಿ ಕರೆನ್ಸಿ ಸ್ವತ್ತುಗಳಲ್ಲಾದ (Foreign Currency Assets) ಉತ್ತಮ ವೃದ್ಧಿಯೇ ಇದಕ್ಕೆ ಕಾರಣ ಎನ್ನಲಾಗಿದೆ. ಇದು ಒಟ್ಟು ವಿದೇಶಿ ವಿನಿಮಯದ ಪ್ರಮುಖ ಭಾಗವಾಗಿರುತ್ತದೆ. ಇದಕ್ಕೂ ಮೊದಲು ಮೇ 28, 2021ರಂದು ಮುಕ್ತಾಯಗೊಂಡ ವಾರದಲ್ಲಿ ವಿದೇಶಿ ವಿನಿಮಯ ಸಂಗ್ರಹಣೆಯು 5.271 ಬಿಲಿಯನ್ ಡಾಲರ್ ಏರಿಕೆಯಾಗಿ 598.165 ಬಿಲಿಯನ್ ಡಾಲರ್ ಗೆ ತಲುಪಿತ್ತು. ಅಂದರೆ, ಪರಿಶೀಲನೆಯ ವಾರದಲ್ಲಿ ವಿದೇಶಿ ಕರೆನ್ಸಿ ಆಸ್ತಿ 7.362 ಬಿಲಿಯನ್ ಡಾಲರ್ ಏರಿಕೆ ಕಂಡು 560.890 ಬಿಲಿಯನ್ ಡಾಲರ್ಗಳಿಗೆ ತಲುಪಿತ್ತು.
ಇದನ್ನೂ ಓದಿ-ಭಾರತೀಯ ಮೂಲದ ಪತ್ರಕರ್ತೆಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ
ವಿಶ್ವದ ಐದನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ
ವರದಿಗಳ ಪ್ರಕಾರ, ವಿದೇಶಿ ವಿನಿಮಯ ಸಂಗ್ರಹದ ವಿಷಯದಲ್ಲಿ ಭಾರತ ಈ ಹೊಸ ದಾಖಲೆಯೊಂದಿಗೆ ವಿಶ್ವದ ಐದನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ. ಇಲ್ಲಿ ವಿಶೇಷತೆ ಎಂದರೆ, ಈ ವಿಷಯದಲ್ಲಿ ಭಾರತ ಅಮೆರಿಕವನ್ನು ಕೂಡ ಹಿಂದಿಕ್ಕಿದೆ. ಅಮೆರಿಕದ ವಿದೇಶೀ ವಿನಿಮಯ ಮೀಸಲು ಕೇವಲ 142 ಬಿಲಿಯನ್ ಡಾಲರ್ ಮಾತ್ರ ಇದೆ ಮತ್ತು ಅದು ಈ ಪಟ್ಟಿಯಲ್ಲಿ 21 ನೇ ಸ್ಥಾನದಲ್ಲಿದೆ. ಸಿಂಗಾಪುರ, ಹಾಂಗ್ ಕಾಂಗ್ ಸೇರಿದಂತೆ ಹಲವು ದೇಶಗಳು ಈ ಪಟ್ಟಿಯಲ್ಲಿ ಭಾರತಕ್ಕಿಂತ ತೀರಾ ಹಿಂದುಳಿದಿವೆ. ಈಗ ಚೀನಾ, ಜಪಾನ್, ಸ್ವಿಟ್ಜರ್ಲೆಂಡ್ ಮತ್ತು ರಷ್ಯಾ ಮಾತ್ರ ಈ ಪಟ್ಟಿಯಲ್ಲಿ ಭಾರತಕ್ಕಿಂತ ಮುಂದಿವೆ.
ಇದನ್ನೂ ಓದಿ-Croatia: ಇಲ್ಲಿ ಮನೆಗಳನ್ನು ಕೇವಲ 12 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ, ಈ ಕೊಡುಗೆಗೆ ಕಾರಣ ಗೊತ್ತೇ!
10 ಲಕ್ಷ ಡಾಲರ್ ವರೆಗೆ ಇಳಿಕೆಯಾದ ಗೋಲ್ಡ್ ರಿಸರ್ವ್
ವಿದೇಶಿ ಕರೆನ್ಸಿ ಸ್ವತ್ತುಗಳನ್ನು ಡಾಲರ್ ರೂಪದಲ್ಲಿ ವ್ಯಕ್ತಪಡಿಸಲಾಗುತ್ತದೆ. ಡಾಲರ್‌ಗೆ ಹೊರತುಪಡಿಸಿ, ಯೂರೋ, ಪೌಂಡ್ ಮತ್ತು ಯೆನ್‌ನಲ್ಲಿ ರೂಪದಲ್ಲಿಯೂ ವ್ಯಕ್ತಪಡಿಸಲಾಗುವ ಸ್ವತ್ತುಗಳು ಇದರಲ್ಲಿ ಶಾಮೀಲಾಗಿವೆ. ಪರಿಶೀಲನೆಯಲ್ಲಿರುವ ವಾರದಲ್ಲಿ ಚಿನ್ನದ ಸಂಗ್ರಹವು (Gold Reserve) 50.2 ಮಿಲಿಯನ್ ಡಾಲರ್ ಗಳಷ್ಟು ಇಳಿಕೆ ಕಂಡು 37.604 ಬಿಲಿಯನ್ ಡಾಲರ್ ಗೆ ತಲುಪಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ವಿಶೇಷ ರೇಖಾಚಿತ್ರ ಹಕ್ಕುಗಳು (SDR) 10 ಲಕ್ಷ ಡಾಲರ್ ಇಳಿಕೆಯಾಗಿ 1.513 ಬಿಲಿಯನ್ ಡಾಲರ್ ಗಳಿಗೆ ತಲುಪಿದೆ. ಇದೆ ವೇಳೆ, ಐಎಂಎಫ್ ಬಳಿ ಇರುವ ದೇಶದ ಮೀಸಲು ವಿನಿಮಯ ಕೂಡ 1.6 ಮಿಲಿಯನ್ ಗಳಷ್ಟು ಇಳಿಕೆಯಾಗಿ, 5 ಬಿಲಿಯನ್ ಡಾಲರ್ ಗೆ ತಲುಪಿದೆ.
ಇದನ್ನೂ ಓದಿ-Viral News:ಏಕಕಾಲಕ್ಕೆ 10 ಮಕ್ಕಳನ್ನು ಹೆತ್ತ ಮಹಾತಾಯಿ, ಈ ದಾಖಲೆ ನಿರ್ಮಾಣಗೊಂಡಿದ್ದು ಎಲ್ಲಿ ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.