ನವದೆಹಲಿ: ಮುಸ್ಲಿಂ ಉಯಿಘರ್ ಮತ್ತು ಇತರ ಅಲ್ಪಸಂಖ್ಯಾತ ಜನಾಂಗದವರನ್ನು ಬಂಧಿಸಿರುವ ಚೀನಾದ ಶಿಬಿರಗಳ ಕುರಿತ ತನಿಖಾ ವರದಿಗಳಿಗಾಗಿ ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಅವರಿಗೆ ಅಮೆರಿಕದ ಪುಲಿಟ್ಜೆರ್ ಪ್ರಶಸ್ತಿ ಲಭಿಸಿದೆ.
ಪುಲಿಟ್ಜೆರ್ ಮಂಡಳಿಯು ರಾಜಗೋಪಾಲನ್‌ರ ಕ್ಸಿನ್‌ಜಿಯಾಂಗ್ ಸರಣಿಯ ಅಂತರರಾಷ್ಟ್ರೀಯ ವರದಿ ವಿಭಾಗಕ್ಕೆ ಪುಲಿಟ್ಜೆರ್ ಪ್ರಶಸ್ತಿಯನ್ನು ಘೋಷಿಸಿದೆ.ಪ್ರಶಸ್ತಿ ಗೆದ್ದ ಕೆಲವೇ ನಿಮಿಷಗಳ ನಂತರ ಮಾತನಾಡಿದ ಅವರು."ನಾನು ಸಂಪೂರ್ಣ ಆಘಾತದಲ್ಲಿದ್ದೇನೆ, ನಾನು ಇದನ್ನು ನಿರೀಕ್ಷಿಸಿರಲಿಲ್ಲ ಎಂದು ರಾಜಗೋಪಾಲನ್ ಲಂಡನ್ನಿಂದ ದೂರವಾಣಿಯಲ್ಲಿ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಈ ಹಿಂದೆ ಚೀನಾದಿಂದ ವರದಿ ಮಾಡಿದ್ದರೂ ಕಥೆಗಾಗಿ ಅಲ್ಲಿಂದ ನಿರ್ಬಂಧಿಸಲ್ಪಟ್ಟಿದ್ದ ರಾಜಗೋಪಾಲನ್ ಅವರು ಮುಂದೆ ಅಲ್ಲಿಂದ ಪರಾರಿಯಾಗಿದ್ದ ಮಾಜಿ ಬಂಧಿತರನ್ನು ಸಂದರ್ಶಿಸಲು ನೆರೆಯ ಕಜಕಿಸ್ತಾನ್‌ಗೆ ಪ್ರಯಾಣ ಬೆಳೆಸಿದರು ಎಂದು ಬಜ್ ಫೀಡ್ ತಿಳಿಸಿದೆ.
ಇದನ್ನೂ ಓದಿ: SSLC ಯಾವ ವಿದ್ಯಾರ್ಥಿಯನ್ನು ಫೇಲ್ ಮಾಡಲ್ಲ, ಆದ್ರೆ, ಕನಿಷ್ಠ ಅಂಕ ನಿಗದಿ ಮಾಡಿಲ್ಲ!
ಅವರ ಜೊತೆಗೆ ಅವರ ಸಹೋದ್ಯೋಗಿಗಳಾದ ಅಲಿಸನ್ ಕಿಲ್ಲಿಂಗ್ ಮತ್ತು ಕ್ರಿಸ್ಟೋ ಬುಸ್ಚೆಕ್, ಸೆನ್ಸಾರ್ ಮಾಡಲಾದ ಚೀನೀ ಚಿತ್ರಗಳನ್ನು ಸೆನ್ಸಾರ್ ಮಾಡದ ಮ್ಯಾಪಿಂಗ್ ಸಾಫ್ಟ್‌ವೇರ್‌ನೊಂದಿಗೆ ಹೋಲಿಸುವ ಸುಮಾರು 50,000 ಸಂಭಾವ್ಯ ಸೈಟ್‌ಗಳ ಬೃಹತ್ ಡೇಟಾಬೇಸ್ ಅನ್ನು ನಿರ್ಮಿಸಿದ ನಂತರ 260 ಬಂಧನ ಶಿಬಿರಗಳನ್ನು ಗುರುತಿಸಿದ್ದಾರೆ.ಈ ಮೂವರು ಕ್ಸಿನ್‌ಜಿಯಾಂಗ್ ಪ್ರದೇಶದ ಸಾವಿರಾರು ಉಪಗ್ರಹ ಚಿತ್ರಗಳನ್ನು ವಿಶ್ಲೇಷಿಸಿ 1 ಮಿಲಿಯನ್ ಉಯಿಘರ್, ಕಜಕ್ ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತರನ್ನು ಎಲ್ಲಿ ಬಂಧಿಸಲಾಗಿದೆ ಎಂದು ಕಂಡುಹಿಡಿಯಲು ಪ್ರಯತ್ನಿಸಿದರು.
ಇದನ್ನೂ ಓದಿ: Mansoon: ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ, ಈ ಭಾಗಗಳಲ್ಲಿ ಜೂ.16ರವರೆಗೆ ಆರೆಂಜ್ ಅಲರ್ಟ
ಚೀನಾದಿಂದ ನಿರ್ಬಂಧಿಸಲ್ಪಟ್ಟ ರಾಜಗೋಪಾಲನ್ ತನ್ನ ನೆರೆಯ ದೇಶವಾದ ಕಜಕಿಸ್ತಾನಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ಅನೇಕ ಆಶ್ರಯ ಪಡೆದಿದ್ದ ಚೀನೀ ಮುಸ್ಲಿಮರನ್ನು ಸಂದರ್ಶನವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದರು.ಪುಲಿಟ್ಜೆರ್ ಬಹುಮಾನವನ್ನು ಇಪ್ಪತ್ತೊಂದು ವಿಭಾಗಗಳಲ್ಲಿ ವಾರ್ಷಿಕವಾಗಿ ನೀಡಲಾಗುತ್ತದೆ.ಇಪ್ಪತ್ತು ವಿಭಾಗಗಳಲ್ಲಿ, ಪ್ರತಿ ವಿಜೇತರು ಪ್ರಮಾಣಪತ್ರ ಮತ್ತು 15,000 ಯುಎಸ್ಡಿ ನಗದು ಪ್ರಶಸ್ತಿಯನ್ನು ಪಡೆಯುತ್ತಾರೆ.ಸಾರ್ವಜನಿಕ ಸೇವಾ ವಿಭಾಗದಲ್ಲಿ ವಿಜೇತರಿಗೆ ಚಿನ್ನದ ಪದಕ ನೀಡಲಾಗುತ್ತದೆ.
ಇದನ್ನೂ ಓದಿ: Mansoon: ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ, ಈ ಭಾಗಗಳಲ್ಲಿ ಜೂ.16ರವರೆಗೆ ಆರೆಂಜ್ ಅಲರ್ಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.