LPG Offers: ಅಡುಗೆ ಅನಿಲದ ಮೇಲೆ ಸಿಗಲಿದೆ 800 ರೂಪಾಯಿಗಳ ರಿಯಾಯಿತಿ ; ಮೇ 31ರವರೆಗೆ ಇರಲಿದೆ ಈ ಆಫರ್
ಈ ತಿಂಗಳು ಎಲ್‌ಪಿಜಿ ಬುಕಿಂಗ್ ಮತ್ತು ಪಾವತಿ ಕುರಿತು ಪೇಟಿಎಂ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಈ ಕೊಡುಗೆಯಡಿಯಲ್ಲಿ ಗ್ರಾಹಕರು 809 ರೂ.ಗಳ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 9 ರೂಗಳಿಗೆ ಪಡೆಯಬಹುದು.
ನವದೆಹಲಿ : LPG booking offers : ಈ ಕರೋನಾ ಕಾಲದಲ್ಲಿ ದಿನಬಳಕೆ ವಸ್ತುಗಳು ದುಬಾರಿಯಾಗಿವೆ. ಎಲ್‌ಪಿಜಿ ಪ್ರತಿ ಸಿಲಿಂಡರ್‌ಗೆ 809 ರೂ ಪಾವತಿಸಬೇಕು. ಎಲ್ ಪಿಜಿ ಸಿಲಿಂಡರ್ ಮೇಲೆ ರಿಯಾಯಿತಿ ನಿರೀಕ್ಷಿಸುವುದು ಕೂಡಾ ಸಾಧ್ಯವಿಲ್ಲ. ಆದರೆ, ಇಲ್ಲಿ ಎಲ್ ಪಿಜಿ ಸಿಲಿಂಡರ್ ಮೇಲೆ ಕೂಡಾ ರಿಯಾಯಿತಿ ಸಿಗಲಿದೆ. ಅದು ಕೂಡಾ 800 ರೂಪಾಯಿಗಳ ರಿಯಾಯಿತಿ.
ಎಲ್ಪಿಜಿ ಸಿಲಿಂಡರ್ ಮೇಲೆ 800 ರೂ.ಗಳ ಕಡಿತ :
ಈ ತಿಂಗಳು ಎಲ್‌ಪಿಜಿ (LPG) ಬುಕಿಂಗ್ ಮತ್ತು ಪಾವತಿ ಕುರಿತು ಪೇಟಿಎಂ (Paytm) ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಈ ಕೊಡುಗೆಯಡಿಯಲ್ಲಿ ಗ್ರಾಹಕರು 809 ರೂ.ಗಳ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 9 ರೂಗಳಿಗೆ ಪಡೆಯಬಹುದು. ಈ ಕ್ಯಾಶ್‌ಬ್ಯಾಕ್ (Cashback) ಆಫರ್ ಅಡಿಯಲ್ಲಿ ಗ್ರಾಹಕರು ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ ಅನ್ನು ಆ್ಯಪ್ ಮೂಲಕ ಬುಕ್ ಮಾಡಿದರೆ, ಅವರು 800 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು.
ಇದನ್ನೂ ಓದಿ : LIC ಗ್ರಾಹಕರೇ ಗಮನಿಸಿ, ಮೇ 10ರಿಂದ ಬದಲಾಗಲಿದೆ ಈ ನಿಯಮ
Paytm ನಲ್ಲಿ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ ?
Paytm ನ ಈ ಆಫರ್ ಮೇ 31ರ ವರೆಗೆ ಇರಲಿದೆ. ಮೊದಲ ಬಾರಿಗೆ ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ (Cylinder booking) ಮತ್ತು ಪೇಮೆಂಟ್ ಮಾಡುವವರಿಗೆ ಈ ಆಫರ್ ನ ಲಾಭ ಸಿಗಲಿದೆ. ಎಲ್‌ಪಿಜಿ ಸಿಲಿಂಡರ್‌ಗೆ ಬುಕ್ಕಿಂಗ್ ಮತ್ತು ಪೇಮೆಂಟ್ ವೇಳೆ, ಒಂದು ಸ್ಕ್ರ್ಯಾಚ್ ಕಾರ್ಡ್ ಸಿಗುತ್ತದೆ. ಈ ಸ್ಕ್ರಾಚ್ ಕಾರ್ಡ್ ನಲ್ಲಿ 800 ರೂಗಳ ಕ್ಯಾಶ್ ಬ್ಯಾಕ್ ಮೊತ್ತ ಸಿಗಲಿದೆ. ಈ ಆಫರ್ 500 ರೂಪಾಯಿಯ ಪೇಮೆಂಟಿಗೂ ಅಪ್ಲೈ ಆಗಲಿದೆ. . ಮೊದಲ ಎಲ್‌ಪಿಜಿ ಸಿಲಿಂಡರ್‌ನ ಬುಕಿಂಗ್‌ನಲ್ಲಿ ಈ ಕೊಡುಗೆ ಸ್ವಯಂಚಾಲಿತವಾಗಿ ಅನ್ವಯಿಸುತ್ತದೆ. ಈ ಪ್ರಸ್ತಾಪವನ್ನು ಕನಿಷ್ಠ 500 ರೂಪಾಯಿಗೆ ಮಾತ್ರ ಪಾವತಿಸಲಾಗುವುದು. ಕ್ಯಾಶ್‌ಬ್ಯಾಕ್ ಗಾಗಿ ಪೇಮೆಂಟ್ ನಂತರ ಸಿಗುವ ಸ್ಕ್ರಾಚ್ ಕಾರ್ಡನ್ನು ೋಪನ್ ಮಾಡಬೇಕು. ಇದರಲ್ಲಿ 10 ರೂಪಾಯಿಯಿಂದ 800 ರೂವರೆಗೆ ಕ್ಯಾಶ್ ಬ್ಯಾಕ್ ಸಿಗಲಿದೆ. ಈ ಸ್ಕ್ರ್ಯಾಚ್ ಕಾರ್ಡ್ (Scratch card) ಅನ್ನು 7 ದಿನಗಳ ಒಳಗೆ ತೆರೆಯಬೇಕು.7 ದಿನಗಳ ನಂತರ ಿದನ್ನು ಬಳಸುವುದು ಸಾಧ್ಯವಾಗುವುದಿಲ್ಲ.
ಈ ರೀತಿ ಮಾಡಬೇಕಾಗುತ್ತದೆ ಬುಕಿಂಗ್ :
- ಮೊದಲು ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿ Paytm ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
- ಇದರ ನಂತರ, ನಿಮ್ಮ ಗ್ಯಾಸ್ ಏಜೆನ್ಸಿಯಿಂದ ಸಿಲಿಂಡರ್ ಬುಕಿಂಗ್ ಮಾಡಿ
- ಸಿಲಿಂಡರ್ ಬುಕ್ ಮಾಡುವಾಗ Paytm ಅಪ್ಲಿಕೇಶನ್‌ನಲ್ಲಿ Show more ಮೇಲೆ ಕ್ಲಿಕ್ ಮಾಡಿ
- ನಂತರ Recharge and Pay Bills ಮೇಲೆ ಕ್ಲಿಕ್ ಮಾಡಿ.
- ಇಲ್ಲಿ book a cylinder ಆಯ್ಕೆ ಇರುತ್ತದೆ
- ಇಲ್ಲಿ, ನಿಮ್ಮ ಅನಿಲ ಪೂರೈಕೆದಾರರನ್ನು ಆಯ್ಕೆಮಾಡಿ.
- ಬುಕಿಂಗ್ ಮಾಡುವ ಮೊದಲು, FIRSTLPG ಪ್ರೋಮೋ ಕೋಡ್ ಅನ್ನು ನಮೂದಿಸಬೇಕು.
- ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ಕ್ಯಾಶ್‌ಬ್ಯಾಕ್ ಸ್ಕ್ರ್ಯಾಚ್ ಕಾರ್ಡ್ ಪಡೆಯುತ್ತೀರಿ.
ಇದನ್ನೂ ಓದಿ : RBI Governor PC Highlights: ಕೊರೊನಾ ಸಂಕಷ್ಟಕ್ಕೆ RBI 'ಆರ್ಥಿಕ ಲಸಿಕೆ', ಇಲ್ಲಿವೆ 10 ಪ್ರಮುಖ ಘೋಷಣೆಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.