20 ರೂಪಾಯಿಗಳ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದ ಆರ್‌ಬಿಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ 20 ರೂಪಾಯಿ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದೆ. ಇದನ್ನು ಮುಂಗೇಲಿಯ ಜಿಲ್ಲೆಯ ಸ್ವಾಪ್ನಿಲ್ ಸೋನಿ ವಿನ್ಯಾಸಗೊಳಿಸಿದ್ದಾರೆ.
ನವದೆಹಲಿ: 'ಒಂದು ದಿನ ನಿಮ್ಮ ನಾಣ್ಯವು ದೇಶದೆಲ್ಲೆಡೆ ಚಲಿಸುತ್ತದೆ' ಎಂದರೆ ಕೆಲವರಿಗೆ ಇದು ಸಿನಿಮಾ ಡೈಲಾಗ್ ಎಂದೆನಿಸಬಹುದು. ಆದರೆ ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಲ್ಲಿ ವಾಸಿಸುವ ಸ್ವಪ್ನಿಲ್ ಇದು ನಿಜವೆಂದು ತೋರಿಸಿಕೊಟ್ಟಿದ್ದಾರೆ. ಈಗ ಅವರು ವಿನ್ಯಾಸಗೊಳಿಸಿದ ನಾಣ್ಯ ಇಡೀ ದೇಶದಲ್ಲಿ ಚಲಾವಣೆಗೆ ಬರಲಿದೆ. ಹೌದು, ಸ್ವಪ್ನಿಲ್ ಇತ್ತೀಚೆಗೆ 20 ರೂಪಾಯಿ ನಾಣ್ಯವನ್ನು ವಿನ್ಯಾಸಗೊಳಿಸಿದ್ದಾರೆ. ಈ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಿಡುಗಡೆ ಮಾಡಿದ್ದಾರೆ.
RBI) ಇತ್ತೀಚೆಗೆ 20 ರೂಪಾಯಿ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದೆ. ಇದನ್ನು ಮುಂಗೇಲಿಯ ಜಿಲ್ಲೆಯ ಸ್ವಪ್ನಿಲ್ ಸೋನಿ ವಿನ್ಯಾಸಗೊಳಿಸಿದ್ದಾರೆ. ಕಳೆದ ವರ್ಷ ಆರ್‌ಬಿಐ ಈ ನಾಣ್ಯವನ್ನು ವಿನ್ಯಾಸಗೊಳಿಸಲು ಅರ್ಜಿ ಆಹ್ವಾನಿಸಿದಾಗ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನಿಂಗ್ (ಎನ್‌ಐಡಿ) ಅಹಮದಾಬಾದ್‌ನ ವಿದ್ಯಾರ್ಥಿ ಸ್ವಪ್ನಿಲ್ ಈ ನಾಣ್ಯವನ್ನು ವಿನ್ಯಾಸಗೊಳಿಸಲು ಆಯ್ಕೆಯಾಗಿದ್ದಾರೆ. ದೇಶಾದ್ಯಂತ ಸ್ವೀಕರಿಸಿದ ಅರ್ಜಿಗಳಲ್ಲಿ ಸ್ವಪ್ನಿಲ್ ವಿನ್ಯಾಸವನ್ನು ಆರ್‌ಬಿಐ ಆಯ್ಕೆ ಮಾಡಿದೆ.
ಡಿಸೆಂಬರ್‌ನಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
20 ರೂಪಾಯಿ ನಾಣ್ಯದ ವಿನ್ಯಾಸ:
ಸ್ವಪ್ನಿಲ್ ಪ್ರಕಾರ ಅವರು ವಿನ್ಯಾಸಗೊಳಿಸಿದ ನಾಣ್ಯವು ಉಳಿದ ನಾಣ್ಯಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಅದರಲ್ಲಿ ಕೃಷಿ ಆಧಾರಿತ ಭಾರತದ ಒಂದು ನೋಟ ಗೋಚರಿಸುತ್ತದೆ ಮತ್ತು 12 ಶಂಕುಗಳನ್ನು ಮಾಡಲಾಗಿದೆ. ನಾಣ್ಯದ ಮಧ್ಯದಲ್ಲಿ ತಾಮ್ರ ಮತ್ತು ನಿಕ್ಕಲ್ ಅನ್ನು ಸಹ ಬಳಸಲಾಗುತ್ತದೆ. ವಿಶೇಷವೆಂದರೆ ದೃಷ್ಟಿ ವಿಕಲಚೇತನರು ಸಹ ಅದನ್ನು ಸುಲಭವಾಗಿ ಗುರುತಿಸಬಹುದು. ನಾಣ್ಯದ ಬದಿಯಲ್ಲಿ ಅಶೋಕ ಸ್ತಂಭ ಮತ್ತು ಅದರ ಕೆಳಗೆ ಸತ್ಯಮೇವ್ ಜಯತೆ ಎಂದು ಬರೆಯಲಾಗಿದೆ. ನಾಣ್ಯದ ಹಿಂಭಾಗದಲ್ಲಿ 20 ರೂಪಾಯಿಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸೂಚಿಸಲಾಗುತ್ತದೆ.
ಸ್ವಪ್ನಿಲ್ ಅವರಿಗೆ 1 ಲಕ್ಷ ರೂಪಾಯಿ ಬಹುಮಾನ:
ವಿಶ್ವ ದಾಖಲೆ ಬರೆದ RBI Twitter ಹ್ಯಾಂಡಲ್, Followers ಗಳ ಸಂಖ್ಯೆ ಎಷ್ಟು ಗೊತ್ತಾ?
ನೀವು ನಿಮ್ಮ 'ನಾಣ್ಯ'ವನ್ನು ಸಹ ಚಲಾಯಿಸಬಹುದು, ಅದಕ್ಕಾಗಿ ಈ ಕೆಲಸವನ್ನು ಮಾಡಿ:
ಭಾರತೀಯ ರಿಸರ್ವ್ ಬ್ಯಾಂಕ್ ಆಗಾಗ್ಗೆ ಕರೆನ್ಸಿಯ ವಿನ್ಯಾಸಕ್ಕಾಗಿ ದೇಶಾದ್ಯಂತದ ಅರ್ಜಿಗಳನ್ನು ಆಹ್ವಾನಿಸುತ್ತದೆ. ನೀವು ವಿನ್ಯಾಸವನ್ನು ಇಷ್ಟಪಡುತ್ತಿದ್ದರೆ ಮತ್ತು ನೀವು ಉತ್ತಮ ಪರಿಕಲ್ಪನೆಯನ್ನು ಹೊಂದಿದ್ದರೆ, ನಿಮ್ಮ ನಾಣ್ಯವು ಸದ ದೇಶಾದ್ಯಂತ ಚಲಿಸಬಹುದು.